Karnataka SSLC Preparatory Exam Time Table 2021-22 : ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿ ರಿಲೀಸ್

2021-22ನೇ ಸಾಲಿನ ಕರ್ನಾಟಕ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿಯನ್ನು ಪ್ರಕಟ ಮಾಡಲಾಗಿದೆ.

ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಇಂದು ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಫೆಬ್ರವರಿ 21 ರಿಂದ 26 ರವರೆಗೆ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆಗಳು ನಡೆಯಲಿವೆ. ಬೆಳಗ್ಗೆ 1.30ರಿಂದ ಮಧ್ಯಾಹ್ನ 1.45ರ ವರಗೆ ಪರೀಕ್ಷೆಗಳು ನಡೆಯಲಿವೆ.

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿ ಪ್ರಕಟ

ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿ ಇಲ್ಲಿದೆ :

* 21-2-2022 : (ಪ್ರಥಮ ಭಾಷೆ): ಕನ್ನಡ, ತೆಲಗು, ತಮಿಳು, ಮರಾಠಿ, ಉರ್ದು, ಇಂಗ್ಲಿಷ್, ಸಂಸ್ಕೃತ,
* 22-2-2022 : ಸಮಾಜ ವಿಜ್ಞಾನ
* 23-2-2022 : (ದ್ವಿತೀಯ ಭಾಷೆ) : ಇಂಗ್ಲೀಷ್, ಕನ್ನಡ
* 24-2-2022 : ಗಣಿತ
* 25-2-2022 : (ತೃತೀಯ ಭಾಷೆ) : ಹಿಂದಿ, ಕನ್ನಡ, ಇಂಗ್ಲೀಷ್, ಅರೇಬಿಕ್, ಉರ್ದು, ಪರ್ಷಿಯನ್
* 26-2-2022 : (ಕೋರ್ ಸಬ್ಜೆಕ್ಟ್) : ವಿಜ್ಞಾನ

ಮುಖ್ಯ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ :

ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯು ಈಗಾಗಲೇ ಬಿಡುಗಡೆ ಮಾಡಿದೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಜ.06ರಂದು 2021-22ನೇ ಸಾಲಿನ 10ನೇ ತರಗತಿ (ಎಸ್‌ಎಸ್‌ಎಲ್‌ಸಿ) ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಮಾರ್ಚ್ 28 ರಿಂದ ಏಪ್ರಿಲ್ 11 ರವರೆಗೆ ಪರೀಕ್ಷೆಗಳು ನಡೆಯಲಿವೆ.

ಮುಖ್ಯ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ :

ಮಾರ್ಚ್ 28,2022 - ಕನ್ನಡ
ಮಾರ್ಚ್ 30,2022 - ದ್ವಿತೀಯ ಭಾಷೆ ಇಂಗ್ಲೀಷ್, ಕನ್ನಡ
ಏಪ್ರಿಲ್ 1,2022 - ಅರ್ಥಶಾಸ್ತ್ರ
ಏಪ್ರಿಲ್‌ 4,2022 - ಗಣಿತ, ಸಮಾಜ ಶಾಸ್ತ್ರ
ಏಪ್ರಿಲ್ 6,2022 - ಸಮಾಜ‌ ವಿಜ್ಞಾನ
ಏಪ್ರಿಲ್ 8,2022 - ತೃತೀಯ ಭಾಷೆ ಹಿಂದಿ
ಏಪ್ರಿಲ್ 11,2022 - ವಿಜ್ಞಾನ

ಪಿಯುಸಿ ವಾರ್ಷಿಕ, ಪೂರ್ವ ಸಿದ್ಧತಾ ಪರೀಕ್ಷೆಗಳ ವೇಳಾಪಟ್ಟಿ :

ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು 2021-22ನೇ ಸಾಲಿನ ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ, ಪೂರ್ವ ಸಿದ್ಧತಾ ಮತ್ತು ಪ್ರಾಯೋಗಿಕ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ.

2021-22ನೇ ಸಾಲಿನ ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಪಠ್ಯಕ್ರಮದಲ್ಲಿ ಹಾಗೂ ಪ್ರಶ್ನೆ ಪತ್ರಿಕೆಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿದ್ದು ಅದರ ವಿವರಗಳನ್ನು ಸಹ ಪರೀಕ್ಷೆ ವೇಳಾಪಟ್ಟಿಯೊಂದಿಗೆ ಇಲಾಖೆಯು ಪ್ರಕಟಿಸಿದೆ.

2021-22ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಐಚ್ಛಿಕ ವಿಷಯಗಳ ಪಠ್ಯಕ್ರಮದಲ್ಲಿ ಯಾವುದೇ ಕಡಿತವಿಲ್ಲದೆ ಶೇ.100ರಷ್ಟು ಪಠ್ಯಕ್ರಮಕ್ಕೆ ಪರೀಕ್ಷೆಗಳನ್ನು ನಡೆಸಲಾಗುತ್ತದೆ.

2021-22ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳ ಐಚ್ಛಿಕ ವಿಷಯಗಳಲ್ಲಿ ಪ್ರಶ್ನೆಪತ್ರಿಕೆ ತಯಾರಿಸುವಾಗ ಹೆಚ್ಚು ಸಂಖ್ಯೆಯಲ್ಲಿ ಆಯ್ಕೆ ಪ್ರಶ್ನೆಗಳನ್ನು ನೀಡಿ ವಿದ್ಯಾರ್ಥಿಗಳು ತಮಗೆ ತಿಳಿದಿರುವ ಪ್ರಶ್ನೆಗಳನ್ನು ಆರಿಸಿಕೊಂಡು ಉತ್ತರಿಸುವ ಅವಕಾಶ ನೀಡಲಾಗಿದೆ.

ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ವೇಳಾಪಟ್ಟಿಯನ್ನು ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಚೆಕ್‌ ಮಾಡಬಹುದು. 2021-22ನೇ ಸಾಲಿನ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳನ್ನು ದಿನಾಂಕ 17-02-2022 ರಿಂದ 25-03-2022 ರವರೆಗೆ ನಡೆಸಲು ದಿನಾಂಕವನ್ನು ನಿಗದಿಪಡಿಸಲಾಗಿದೆ.

2021-22ನೇ ಸಾಲಿನ ದ್ವಿತೀಯ ಪಿಯುಸಿ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ದಿನಾಂಕ 14-03-2022 ರಿಂದ 25-03-2022 ರವರೆಗೆ ನಡೆಸಲು ದಿನಾಂಕ ನಿಗದಿಪಡಿಸಲಾಗಿದೆ.

2021-22ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳನ್ನು ದಿನಾಂಕ 14-04-2022 ರಿಂದ 04-05-2022 ರವರೆಗೆ ನಡೆಸಲು ತಾತ್ಕಾಲಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

2021-22ನೇ ಸಾಲಿನ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಗಳನ್ನು ದಿನಾಂಕ 28-03-2022 ರಿಂದ 13-04-2022ರವರೆಗೆ ನಡೆಸಲು ದಿನಾಂಕ ನಿಗದಿಪಡಿಸಲಾಗಿದೆ.

ಪಿಯುಸಿ ವೇಳಾಪಟ್ಟಿ :

ಏಪ್ರಿಲ್​ 14,2022 - ಗಣಿತ
ಏಪ್ರಿಲ್​ 18,2022 - ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
ಏಪ್ರಿಲ್ 20,2022 - ಇತಿಹಾಸ, ಭೌತಶಾಸ್ತ್ರ
ಏಪ್ರಿಲ್ 22,2022 - ತರ್ಕಶಾಸ್ತ್ರ
ಏಪ್ರಿಲ್ 23,2022 - ಮನಃಶಾಸ್ತ್ರ, ರಸಾಯನಶಾಸ್ತ್ರ,
ಏಪ್ರಿಲ್ 25,2022 - ಅರ್ಥಶಾಸ್ತ್ರ
ಏಪ್ರಿಲ್ 26,2022 - ಹಿಂದಿ,
ಏಪ್ರಿಲ್​​ 28,2022 - ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ
ಏಪ್ರಿಲ್ 29,2022 - ಕನ್ನಡ
ಏಪ್ರಿಲ್ 30,2022 - ಸಮಾಜಶಾಸ್ತ್ರ, ಕಂಪ್ಯೂಟರ್​​ ಸೈನ್ಸ್​
ಮೇ 2,2022 - ಭೂಗೋಳ ಶಾಸ್ತ್ರ ಹಾಗೂ ಜೀವಶಾಸ್ತ್ರ
ಮೇ 4,2022 - ಇಂಗ್ಲಿಷ್​​ ಪರೀಕ್ಷೆ ನಡೆಯಲಿದೆ.

More News  

For Quick Alerts
ALLOW NOTIFICATIONS  
For Daily Alerts

English summary
Karnataka SSLC preparatory exam Time Table 2021-22 released; Here is the detailed exam schedule. Take a look
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+