
ಸಾಮಾನ್ಯ ಪ್ರವೇಶ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಕೋರಿಕೆಯ ಮೇರೆಗೆ ನಿಗದಿಪಡಿಸಿರುವ ದಾಖಲೆಗಳನ್ನು ಅಪ್‌ಲೋಡ್ ಮಾಡದಿರುವ ಕಾರಣಕ್ಕೆ ತಾತ್ಕಾಲಿಕ ತಿರಸ್ಕೃತ ಪಟ್ಟಿಯಲ್ಲಿ ತೋರಿಸಿರುವ ಅಭ್ಯರ್ಥಿಗಳ ಮನವಿಗಳನ್ನು ಪರಿಗಣಿಸಿ ಮತ್ತೊಮ್ಮೆ ಅವಕಾಶ ನೀಡಲಾಗಿದೆ.
ಅಭ್ಯರ್ಥಿಗಳಿಗೆ ಅಕ್ಟೋಬರ್ 28,2020 ರಿಂದ ಅಕ್ಟೋಬರ್ 29,2020ರ ಸಂಜೆ 4 ರೊಳಗೆ ಪ್ರಾಧಿಕಾರದ ವೆಬ್‌ಸೈಟ್ ನಲ್ಲಿ ಅಪ್‌ಲೋಡ್ ಮಾಡುವ ಲಿಂಕ್ ಅನ್ನು ತೆರೆಯಲಾಗಿದೆ.
ಅಭ್ಯರ್ಥಿಗಳು ನಿಗಧಿಪಡಿಸಿರುವ ದಾಖಲೆಗಳನ್ನು ಅಧಿಕೃತ ವೆಬ್‌ಸೈಟ್ ನಲ್ಲಿ ಅಪ್‌ಲೋಡ್ ಮಾಡಬಹುದಾಗಿದೆ. ಇದು ಕೊನೆಯ ಅವಕಾಶವಾಗಿದ್ದು, ಮತ್ತೊಮ್ಮೆ ಅಪ್‌ಲೋಡ್ ಮಾಡಲು ದಿನಾಂಕವನ್ನು ಯಾವುದೇ ಸಂದರ್ಭದಲ್ಲಿ ವಿಸ್ತರಿಸುವುದಿಲ್ಲ ಎಂದು ಪ್ರಾಧಿಕಾರವು ಪ್ರಕಟಣೆಯಲ್ಲಿ ತಿಳಿಸಿದೆ.
For Quick Alerts
For Daily Alerts


Click it and Unblock the Notifications











