KCET 2021 Registration Date Extended : ಸಿಇಟಿ ಪರೀಕ್ಷೆಗೆ ಜುಲೈ 16ರ ವರೆಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಗೆ  ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಆನ್‌ಲೈನ್ ಸಲ್ಲಿಕೆಯ ಅವಧಿಯನ್ನು ಜುಲೈ 16ರ ವರೆಗೆ ವಿಸ್ತರಿಸಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಈ ಮುಂಚೆ ಜುಲೈ 10ರ ವರೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು, ಆದರೆ ಕೊರೊನಾ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸದ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಅರ್ಜಿ ಸಲ್ಲಿಕೆ ಗಡುವನ್ನು ವಿಸ್ತರಿಸಲಾಗಿದೆ.

ಪ್ರಸ್ತುತ ಸಿಇಟಿ 2021 ಪರೀಕ್ಷೆಯು ಆಗಸ್ಟ್ 28 ಹಾಗೂ ಆಗಸ್ಟ್ 29,2021ರಂದು ಮತ್ತು ಕನ್ನಡ ಭಾಷಾ ಪರೀಕ್ಷೆಯನ್ನು ಆಗಸ್ಟ್ 30,2021ರಂದು ನಡೆಸಲು ದಿನಾಂಕ ನಿಗದಿ ಮಾಡಲಾಗಿದ್ದು, ವಿದ್ಯಾರ್ಥಿಗಳು ತಯಾರಿ ನಡೆಸಲು ತಿಳಿಸಲಾಗಿದೆ. ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಜುಲೈ 16ರೊಳಗೆ ಅರ್ಜಿಯನ್ನು ಮತ್ತು ಅರ್ಜಿ ಶುಲ್ಕವನ್ನು ಜುಲೈ 19,2021ರೊಳಗೆ ಪಾವತಿಸಬೇಕಿರುತ್ತದೆ. ವಿದ್ಯಾರ್ಥಿಗಳು ಪರೀಕ್ಷೆಗೆ ಹೇಗೆ ಅರ್ಜಿ ಸಲ್ಲಿಸುವುದು ಎಂದು ತಿಳಿಯಲು ಮುಂದೆ ಓದಿ.

ಕೆಸಿಇಟಿ 2021ಗೆ ಅರ್ಜಿ ಸಲ್ಲಿಸುವುದು ಹೇಗೆ ?:

ಸ್ಟೆಪ್ 1: ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್ https://cetonline.karnataka.gov.in/kea/ ಗೆ ಭೇಟಿ ನೀಡಿ.

ಸ್ಟೆಪ್ 2: ಹೋಂ ಪೇಜ್ ನಲ್ಲಿ ಲಭ್ಯವಿರುವ ಕೆಸಿಇಟಿ 2021 ಅರ್ಜಿ ಸಲ್ಲಿಕೆ ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3: ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ

ಸ್ಟೆಪ್ 4: ವಿದ್ಯಾರ್ಥಿಗಳು ಅಗತ್ಯ ದಾಖಲೆಗಳನ್ನು ಸಲ್ಲಿಸಿ, ಜೊತೆಗೆ ಅರ್ಜಿ ಶುಲ್ಕ ಪಾವತಿಸಿ

ಸ್ಟೆಪ್ 5: ಅಭ್ಯರ್ಥಿಗಳು ಅರ್ಜಿಯ ಪ್ರಿಂಟೌಟ್ ತೆಗೆದುಕೊಳ್ಳಿ

More News  

For Quick Alerts
ALLOW NOTIFICATIONS  
For Daily Alerts

English summary
Karnataka Common Entrance Test or KCET 2021 online registration deadline extended to july 16.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+