ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) 2022 ರ ಫಲಿತಾಂಶವನ್ನು ಜುಲೈ 30ರ ಶನಿವಾರದಂದು ಪ್ರಕಟಿಸಲಿದೆ. ಸಿಇಟಿ ಫಲಿತಾಂಶವು ಮೆರಿಟ್ ಪಟ್ಟಿಯೊಂದಿಗೆ ಅಧಿಕೃತ ವೆಬ್‌ಸೈಟ್-cetonline.karnataka.gov.in ನಲ್ಲಿ ಪ್ರಕಟವಾಗಲಿದೆ.

ಸಿಇಟಿ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾದ ಅಭ್ಯರ್ಥಿಗಳು ಕೌನ್ಸೆಲಿಂಗ್ ಸುತ್ತಿಗೆ ಹಾಜರಾಗಬೇಕಿರುತ್ತದೆ. ಕಳೆದ ವರ್ಷ ಸೆಪ್ಟೆಂಬರ್ 30 ರಿಂದ ನಾಲ್ಕು ಪಾಳಿಯಲ್ಲಿ ಕೌನ್ಸೆಲಿಂಗ್ ಪ್ರಕ್ರಿಯೆ ನಡೆದಿತ್ತು. 2021 ರಲ್ಲಿ ಕೆಸಿಇಟಿ ಕೌನ್ಸೆಲಿಂಗ್ ನಲ್ಲಿ ಒಟ್ಟು 1.82 ಲಕ್ಷ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ಅಭ್ಯರ್ಥಿಗಳ ಅಂಕಪಟ್ಟಿಯು ಕೌನ್ಸೆಲಿಂಗ್ ಪ್ರಕ್ರಿಯೆಗೆ ನಿಗದಿಪಡಿಸಿದ ದಿನಾಂಕಗಳನ್ನು ಒಳಗೊಂಡಿರುತ್ತದೆ. ಕೆಸಿಇಟಿ ಕೌನ್ಸೆಲಿಂಗ್ ಆನ್‌ಲೈನ್‌ನಲ್ಲಿ ನಡೆಯಲಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರ ಅರ್ಹತೆಗೆ ಅನುಗುಣವಾಗಿ ಕೌನ್ಸೆಲಿಂಗ್ ಸುತ್ತುಗಳನ್ನು ನಿಗದಿಪಡಿಸಲಾಗುತ್ತದೆ.

KCET ಫಲಿತಾಂಶ 2022 : ಕೌನ್ಸೆಲಿಂಗ್ ಸುತ್ತಿನ ವಿವರಗಳು :
* ಕೆಸಿಇಟಿ ಕೌನ್ಸೆಲಿಂಗ್ ನಾಲ್ಕು ಹಂತಗಳಲ್ಲಿ ನಡೆಯಲಿದೆ ಅವುಗಳೆಮಂದರೆ ದಾಖಲೆ ಪರಿಶೀಲನೆ ಮತ್ತು ನೋಂದಣಿ, ಆಯ್ಕೆ ಭರ್ತಿ ಮತ್ತು ಲಾಕ್ ಮಾಡುವುದು, ಸೀಟುಗಳ ಹಂಚಿಕೆ, ನಿಗದಿಪಡಿಸಿದ ಸಂಸ್ಥೆಗಳಲ್ಲಿ ವರದಿ ಮಾಡುವುದು.
* ಕೆಸಿಇಟಿ ಕೌನ್ಸೆಲಿಂಗ್‌ಗೆ ಅಗತ್ಯವಿರುವ ದಾಖಲೆಗಳೆಂದರೆ ಕೆಸಿಇಟಿ 2022 ಅರ್ಜಿ ನಮೂನೆಯ ಪ್ರಿಂಟ್‌ಔಟ್, ಅರ್ಜಿ ಶುಲ್ಕ ಪಾವತಿ, ಪ್ರವೇಶ ಪತ್ರ, 10ನೇ, 12ನೇ ತರಗತಿ ಅಂಕಪಟ್ಟಿಗಳು, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು ಮತ್ತು ಇತರೆ ದಾಖಲೆಗಳು.
* ಆಯ್ಕೆಯ ಭರ್ತಿ ಸುತ್ತಿನಲ್ಲಿ ಅಭ್ಯರ್ಥಿಗಳು ತಮ್ಮ ಆದ್ಯತೆಯ ಕೋರ್ಸ್‌ಗಳು ಮತ್ತು ಕಾಲೇಜುಗಳನ್ನು ಭರ್ತಿ ಮಾಡಲು ಆಯ್ಕೆಗಳನ್ನು ಪಡೆಯುತ್ತಾರೆ. ಆಯ್ಕೆ ಭರ್ತಿ ಪ್ರಕ್ರಿಯೆಯ ನಂತರ ಅಣಕು ಸೀಟು ಹಂಚಿಕೆ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ. ವರದಿ ಮಾಡುವ ಸುತ್ತಿನಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ತಮ್ಮ ಪ್ರವೇಶವನ್ನು ದೃಢೀಕರಿಸಲು ಅವರಿಗೆ ನಿಗದಿಪಡಿಸಿದ ಸಂಸ್ಥೆಗಳಿಗೆ ವರದಿ ಮಾಡಬೇಕಾಗುತ್ತದೆ.
KCET 2022 ಸ್ಕೋರ್‌ಕಾರ್ಡ್ ಅನ್ನು ಡೌನ್‌ಲೋಡ್ ಮಾಡಲು ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ kea.kar.nic.in ಗೆ ಭೇಟಿ ನೀಡಿ KCET ಫಲಿತಾಂಶ ಲಿಂಕ್ ಅನ್ನು ಕ್ಲಿಕ್ ಮಾಡಬೇಕಾಗುತ್ತದೆ. ಅಗತ್ಯವಿರುವ ಎಲ್ಲಾ ರುಜುವಾತುಗಳನ್ನು ನಮೂದಿಸಿ *CET ಫಲಿತಾಂಶ 2022 ಅನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ. KCET 2022 ಅಂಕಪಟ್ಟಿ ಡೌನ್‌ಲೋಡ್ ಮಾಡಿ ಮತ್ತು ಹೆಚ್ಚಿನ ಉಲ್ಲೇಖಕ್ಕಾಗಿ ಪ್ರಿಂಟ್‌ಔಟ್ ತೆಗೆದುಕೊಳ್ಳಿ.
KCET ಅಂಕಪಟ್ಟಿಯು ಅಭ್ಯರ್ಥಿಯ ವೈಯಕ್ತಿಕ ವಿವರಗಳು, ರೋಲ್ ಸಂಖ್ಯೆ, ವಿಷಯವಾರು ಅಂಕಗಳು ಮತ್ತು ಪ್ರವೇಶ ಪರೀಕ್ಷೆಯಲ್ಲಿ ಪಡೆದ ಒಟ್ಟು ಅಂಕಗಳು ಸೇರಿದಂತೆ ವಿವರಗಳನ್ನು ಒಳಗೊಂಡಿರುತ್ತದೆ. ಕರ್ನಾಟಕ ಕೆಸಿಇಟಿ 2022 ಪರೀಕ್ಷೆಯು ಜೂನ್ 16 ಮತ್ತು 18 ರ ನಡುವೆ ನಡೆಯಿತು. ರಾಜ್ಯದ ಕಾಲೇಜುಗಳಲ್ಲಿ ಎಂಜಿನಿಯರಿಂಗ್, ಫಾರ್ಮಸಿ ಕೃಷಿ, ಪಶುವೈದ್ಯಕೀಯ ಮತ್ತು ಇತರ ತಾಂತ್ರಿಕ ಕೋರ್ಸ್‌ಗಳ ಪ್ರವೇಶಕ್ಕಾಗಿ ಕೆಸಿಇಟಿ 2022 ಪರೀಕ್ಷೆಯನ್ನು ನಡೆಸಲಾಗುತ್ತಿದೆ.


Click it and Unblock the Notifications











