ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪೋಸ್ಟ್ ಗ್ರಾಜುಯೇಟ್ ಸಿಇಟಿ (ಪಿಜಿಸಿಇಟಿ) ಮತ್ತು ಡಿಪ್ಲೋಮಾ ಸಿಇಟಿ (ಡಿಸಿಇಟಿ) 2020ರ ಪರೀಕ್ಷೆಗಳ ತಾತ್ಕಾಲಿಕ ಕೀ ಉತ್ತರಗಳನ್ನು ಬಿಡುಗಡೆ ಮಾಡಿದೆ.
ಕರ್ನಾಟಕ ಪಿಜಿಸಿಇಟಿ 2020 ಪರೀಕ್ಷೆಯು ಅಕ್ಟೋಬರ್ 13,2020 ಮತ್ತು 14,2020 ರಂದು ಮತ್ತು ಡಿಸಿಇಟಿ 2020 ಪರೀಕ್ಷೆಯು ಅಕ್ಟೋಬರ್ 14,2020ರಂದು ಪೇಪರ್ ಪೆನ್ ಮಾದರಿಯಲ್ಲಿ ನಡೆಸಲಾಗಿತ್ತು. ಈ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಇದೀಗ ಕೀ ಉತ್ತರಗಳನ್ನು ಚೆಕ್ ಮಾಡಿಕೊಳ್ಳಬಹುದು.
ಅಭ್ಯರ್ಥಿಗಳು ಕೀ ಉತ್ತರಗಳನ್ನು ಚೆಕ್ ಮಾಡಿದ ಬಳಿಕ ಆಕ್ಷೇಪಣೆಗಳನ್ನು ಸಲ್ಲಿಸುವುದಿದ್ದಲ್ಲಿ ಆನ್ಲೈನ್ ಮೂಲಕ ಅಕ್ಟೋಬರ್ 21 ರಿಂದ ಅಕ್ಟೋಬರ್ 24,2020ರೊಳಗೆ ಅಗತ್ಯ ದಾಖಲೆಗಳೊಂಧಿಗೆ ಸಲ್ಲಿಸಬೇಕಿರುತ್ತದೆ. ಅಭ್ಯರ್ಥಿಗಳು ಆಕ್ಷೇಪಣೆ ಸಲ್ಲಿಸುವುದು ಹೇಗೆ ಎನ್ನುವುದನ್ನು ತಿಳಿಯಲು ಮುಂದೆ ಓದಿ.
ಅಭ್ಯರ್ಥಿಗಳು ಆಕ್ಷೇಪಣೆ ಸಲ್ಲಿಸುವುದು ಹೇಗೆ ? :
ಸ್ಟೆಪ್ 1: ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ https://cetonline.karnataka.gov.in/kea/ ಗೆ ಭೇಟಿ ನೀಡಿ.
ಸ್ಟೆಪ್ 2: ನಂತರ ಹೋಂ ಪೇಜ್ ಗೆ ಹೋಗಿ ಕೀ ಉತ್ತರಗಳಿಗೆ ಆಪ್ಷೇಪಣೆ ಸಲ್ಲಿಕೆಯ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ನಂತರ ಅರ್ಜಿದಾರರು ನಿಮ್ಮ ಸಿಇಟಿ ಸಂಖ್ಯೆ ಮತ್ತು ಜನ್ಮದಿನಾಂಕವನ್ನು ನಮೂದಿಸಿ. ನೀವು ಅರ್ಜಿದಾರರಾಗಿರದಿದ್ದಲ್ಲಿ ನಿಮ್ಮ ಹೆಸರು, ಮೊ.ಸಂಖ್ಯೆ ಮತ್ತು ಇ-ಮೇಲ್ ವಿಳಾಸ ನೀಡಿ ನಂತರ ಓಟಿಪಿ ಬರುತ್ತದೆ ಅದನ್ನು ನಮೂದಿಸಿ
ಸ್ಟೆಪ್ 4: ಬಳಿಕ ಅಭ್ಯರ್ಥಿಗಳು ಕೀ ಉತ್ತರಗಳಿಗೆ ಆಕ್ಷಪಣೆಯನ್ನು ಸಲ್ಲಿಸಿ