ಇದು ಸ್ಕೂಲೋ ರೈಲೋ..! ಕೇರಳದಲ್ಲೊಂದು ವಿಶೇಷ ಶಾಲೆ

ಇಷ್ಟು ದಿನ ರಜೆಯ ಮಜದಲ್ಲಿದ್ದ ಹುಡುಗಳು ಶಾಲೆಗಳತ್ತ ಮುಖ ಮಾಡತ್ತಿದ್ದಾರೆ. ಶಾಲೆಗೆ ಬರುವ ಮಕ್ಕಳನ್ನು ಸ್ವಾಗತಿಸಲೆಂದೇ ಶಾಲಾ ಸಿಬ್ಬಂದಿ ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಿವೆ.

ಇಷ್ಟು ದಿನ ರಜೆಯ ಮಜದಲ್ಲಿದ್ದ ಹುಡುಗಳು ಶಾಲೆಗಳತ್ತ ಮುಖ ಮಾಡತ್ತಿದ್ದಾರೆ. ಶಾಲೆಗೆ ಬರುವ ಮಕ್ಕಳನ್ನು ಸ್ವಾಗತಿಸಲೆಂದೇ ಶಾಲಾ ಸಿಬ್ಬಂದಿ ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಿವೆ. ಆದರೆ ಇದೆಲ್ಲ ಖಾಸಗಿ ಶಾಲೆಗಳಲ್ಲಿ ಮಾತ್ರ ಕಾಣಸಿಗುತ್ತವೆ. ಆದರೆ ಕೇರಳದ ಸರ್ಕಾರಿ ಶಾಲೆಯೊಂದು ವಿನೂತನ ಪ್ರಯತ್ನ ಮಾಡಿ ಕೇವಲ ಮಕ್ಕಳನ್ನು ಮಾತ್ರವಲ್ಲದೇ ದೇಶವನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡಿದೆ.

ಕೇರಳ ಭಾಗಕ್ಕೆ ಸೇರುವ ಕಾಸರಗೋಡಿನ ಪಿಲಿಕೋಡುವಿನ ಸರ್ಕಾರಿ ಶಾಲೆ ವಿಭಿನ್ನವಾಗಿ ರೂಪುಗೊಂಡು ಎಲ್ಲರನ್ನು ಆಕರ್ಷಿಸುತ್ತಿದೆ. ಸರ್ಕಾರಿ ಶಾಲೆಗಳ ಕಟ್ಟಡ ನೋಡಿ ಮೂಗುಮುರಿಯುತ್ತಿದ್ದ ಮಂದಿಗೆ ಈ ಶಾಲೆ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ.

ರೈಲಿನ ಬೋಗಿಯ ರೀತಿಯಲ್ಲಿ ಬಣ್ಣ ಬಳಿದುಕೊಂಡು ಈ ಶಾಲೆ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ. ರಜೆಯನ್ನು ಮುಗಿಸಿ ಶಾಲೆಗೆ ವಾಪಸ್ಸಾದ ಹುಡುಗರಿಗೆ ಮತ್ತು ಹೊಸದಾಗಿ ಸೇರಿದ ಚಿಕ್ಕ ಮಕ್ಕಳಿಗೆ ಮೊದಲ ದಿನ ಅಚ್ಚರಿಯ ಜೊತೆಗೆ ಖುಷಿಯೋ ಖುಷಿ. ಶಾಲೆಗೆ ಕಾಲಿಟ್ಟ ಹುಡುಗರು ರೈಲಿನ ರೀತಿಯಲ್ಲಿರುವ ಶಾಲೆಯ ಬಣ್ಣ ನೋಡಿ ಅಚ್ಚರಿ ಪಡುವುದರ ಜೊತೆಗೆ ಸಂಭ್ರಮಿಸಿದ್ದಾರೆ.

ಶಾಲೆಯ ತರಗತಿಗೆ ರೈಲಿನ ರೂಪ

ರೈಲು ಬೋಗಿಯ ರೀತಿಯಲ್ಲಿ ಬದಲಾಗಿರುವ ಶಾಲಾ ಕೊಠಡಿಯ 'ಐಡಿಯಾ' ಕೇರಳ ಸರ್ಕಾರದ್ದು. ನೂತನವಾಗಿ ಏನನ್ನಾದರು ಮಾಡಬೇಕೆಂದು ನಿರ್ಧರಿಸಿ ಕೊಠಡಿಗೆ ಈ ರೂಪ ನೀಡಿದ್ದಾರೆ. ಕೇಲವ ಕೊಠಡಿಯ ಹೊರಭಾಗ ಮಾತ್ರವಲ್ಲ, ತರಗತಿಯ ಒಳಗೂ ವಿವಿಧ ರೀತಿಯ ಮಕ್ಕಳಿಗೆ ಖುಷಿ ನೀಡುವ ಚಿತ್ರಗಳನ್ನು ಬಿಡಿಸಿ ತರಗತಿಯ ವಾತಾವರಣವನ್ನೇ ಬದಲಾಯಿಸಲಾಗಿದೆ.

ಕೇರಳದಲ್ಲೊಂದು ವಿಶೇಷ ರೈಲು ಶಾಲೆ

ಈ ಶಾಲೆಗೆ ರೈಲಿನ ರೂಪ ನೀಡಲು ಖರ್ಚಾಗಿರುವುದು 2.5ಲಕ್ಷ ರೂಗಳು. ಸಾರ್ವಜನಿಕರಿಂದ ಸಂಗ್ರಹ ಮಾಡಿ ಸ್ಥಳೀಯ ಕಲಾವಿದ ಸಂಜೇಶ್ ವೆಂಗಾರ ಎಂಬ ಕಲಾವಿದನಿಂದ ಶಾಲಾ ಕೊಠಡಿಯನ್ನು ವಿನ್ಯಾಸಗೊಳಿಸಲಾಗಿದೆ.

ಈ ಶಾಲೆಯಲ್ಲಿ ಏಳನೇ ತರಗತಿಯವರೆಗೂ ಶಿಕ್ಷಣ ನೀಡಲಾಗುತ್ತಿದ್ದು ಸುಮಾರು 400 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಈ ವರ್ಷ 160 ಮಕ್ಕಳು ಹೊಸದಾಗಿ ಪ್ರವೇಶ ಪಡೆದಿವೆ.

ಒಟ್ಟಿನಲ್ಲಿ ಉಚಿತ ಸಮವಸ್ತ್ರ, ಪುಸ್ತಕ, ಪೆನ್ನು ಊಟ ನೀಡಿ ಮಕ್ಕಳನ್ನು ಸರ್ಕಾರಿ ಶಾಲೆಗಳತ್ತ ಮುಖಮಾಡುವಂತೆ ಮಾಡುತ್ತಿರುವ ಸರ್ಕಾರಿ ಶಾಲೆಗಳು ಈಗ ಶಾಲೆಯ ವಿನ್ಯಾಸವನ್ನೇ ಬದಲಾಯಿಸುವ ಹೊಸ ಕೆಲಸಕ್ಕೆ ಕೈ ಹಾಕಿ ಎಲ್ಲರಿಂದ ಪ್ರಶಂಸೆ ಪಡೆಯುತ್ತಿದೆ.

More News  

For Quick Alerts
ALLOW NOTIFICATIONS  
For Daily Alerts

English summary
Government UP School in Kasargod's Pilicode, Kerala has the entire school building revamped like a train!
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+