ಅಬಕಾರಿ ಇಲಾಖೆಯಲ್ಲಿನ 952 ಅಬಕಾರಿ ರಕ್ಷಕ ಹುದ್ದೆಗೆ ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ್ದ ಸ್ಪರ್ಧಾತ್ಮಕ ಪರೀಕ್ಷೆಯ ಅರ್ಹತಾ ಪಟ್ಟಿ ಪ್ರಕಟಿಸಲಾಗಿದೆ.
ಅಂಕ ಹಾಗೂ ಅವರ ಮಿಸಲಾತಿಗಳಿಗೆ ಅನುಗುಣವಾಗಿ ಹೆಸರು, ನೋಂದಣಿ ಸಂಖ್ಯೆಯುಳ್ಳ ಪಟ್ಟಿಯನ್ನು ಆಯೋಗದ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದೆ. ದೇಹದಾರ್ಢ್ಯ ಪರೀಕ್ಷೆಗೆ ಹಾಜರಾಗಲು ಸೂಚನಾ ಪತ್ರ ಕಳುಹಿಸಲಾಗುತ್ತದೆ.

1:5 ರ ಅನುಪಾತದಲ್ಲಿ ಅರ್ಹತಾ ಪಟ್ಟಿ ಪ್ರಕಟಿಸಿದ್ದು, ಪುರುಷ ಅಭ್ಯರ್ಥಿಗಳ ಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಲಾಗಿದೆ.
ಅರ್ಹತಾ ಪಟ್ಟಿ ನೋಡುವ ವಿಧಾನ
- ಆಯೋಗದ ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ
- ಬಲಭಾಗದಲ್ಲಿ ಕಾಣುವ Cut-off Percentage ಲಿಂಕ್ ಕ್ಲಿಕ್ ಮಾಡಿ
- ಅಬಕಾರಿ ಇಲಾಖೆಗೆ ಸಂಬಂಧಪಟ್ಟ ಮಾಹಿತಿ ಇರುವ ಲಿಂಕ್ ಕ್ಲಿಕ್ ಮಾಡಿ
- ಅರ್ಹತಾ ಪಟ್ಟಿ ತೆರೆದುಕೊಳ್ಳುತ್ತದೆ.
ದೇಹದಾರ್ಢ್ಯತೆ ಪರೀಕ್ಷೆ
ಎತ್ತರ: ಕನಿಷ್ಠ 163 ಸೆಂ.ಮೀ. ಎದೆಯ ಸುತ್ತಳತೆ ಕನಿಷ್ಠ 81 ಸೆಂ.ಮೀ. ಓಟ, ಎತ್ತರ ಜಿಗಿತ, ಉದ್ದ ಜಿಗಿತ ಹಾಗೂ ಗುಂಡೆಸೆತಗಳ ಮೂಲಕ ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಸಲಾಗುತ್ತದೆ.
ನೇಮಕಾತಿ ಪ್ರಕ್ರಿಯೆ
ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಅರ್ಹತೆ, ಲಿಖಿತ ಪರೀಕ್ಷೆಯಲ್ಲಿ ಪಡೆಯುವ ಅಂಕಗಳು ಹಾಗೂ ಮೀಸಲಾತಿ ನಿಯಮಗಳ ಅನ್ವಯ ಅರ್ಹರ ಆಯ್ಕೆ ಮಾಡಲಾಗುತ್ತದೆ.
ಪರೀಕ್ಷಾ ವೇಳಾಪಟ್ಟಿ
ಪರೀಕ್ಷಾ ವೇಳಾಪಟ್ಟಿಯನ್ನು ಹಾಗೂ ಪರೀಕ್ಷಾ ಕೇಂದ್ರಗಳ ವಿವರಗಳನ್ನು ಆಯೋಗದ ಅಂತರ್ಜಾಲದಲ್ಲಿ ಪ್ರಕಟಿಸಲಾಗುವುದು, ಹೆಚ್ಚಿನ ಮಾಹಿತಿಯನ್ನು ಆನ್-ಲೈನ್ ವಿಳಾಸದಲ್ಲಿ ಪಡೆಯಿರಿ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications











