KPSC Group B And C (Technical) Answer Key : ಕೀ ಉತ್ತರ ಪ್ರಕಟ... ಆಕ್ಷೇಪಣೆ ಸಲ್ಲಿಸಲು ಜ.12 ಕೊನೆಯ ದಿನ

ಕರ್ನಾಟಕ ಲೋಕಸೇವಾ ಆಯೋಗವು ಗ್ರೂಪ್ ಬಿ ಮತ್ತು ಸಿ ತಾಂತ್ರಿಕ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯ ಕೀ ಉತ್ತರಗಳನ್ನು ಪ್ರಕಟ ಮಾಡಲಾಗಿದೆ. ಈ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಇದೀಗ ಕೀ ಉತ್ತರಗಳನ್ನು ವೀಕ್ಷಿಸಬಹುದು. ಕೀ ಉತ್ತರಗಳಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ ಜನವರಿ 12,2022ರೊಳಗೆ ಸಲ್ಲಿಸಲು ಅವಕಾಶ ನೀಡಲಾಗಿದೆ.

ಕೆಪಿಎಸ್ಸಿ ಗ್ರೂಪ್ ಬಿ ಮತ್ತು ಸಿ ಹುದ್ದೆಗಳ ಕೀ ಉತ್ತರ ಪ್ರಕಟ.. ಆಕ್ಷೇಪಣೆ ಸಲ್ಲಿಸಲು ಜ.12 ಕೊನೆಯ ದಿನ

ಕರ್ನಾಟಕ ಲೋಕಸೇವಾ ಆಯೋಗವು ಲೋಕೋಪಯೋಗಿ ಇಲಾಖೆಯಲ್ಲಿನ 990 ಗ್ರೂಪ್ 'ಬಿ' ಮತ್ತು ಗ್ರೂಪ್ 'ಸಿ' ವೃಂದದ ತಾಂತ್ರಿಕ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಸೆಪ್ಟೆಂಬರ್ 16,2020ರೊಳಗೆ ಅರ್ಜಿಯನ್ನು ಆಹ್ವಾನಿಸಲಾಗಿತ್ತು.

ಈ ಹುದ್ದೆಗಳಿಗೆ ಬಿ.ಇ/ಬಿ.ಟೆಕ್/ಪದವಿ/ಸಿವಿಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್ ಅಥವಾ ಸಂಸ್ಥೆಯಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿತ್ತು. ಕನಿಷ್ಟ 18 ರಿಂದ ಗರಿಷ್ಟ 35 ವರ್ಷ ವಯೋಮಿತಿಯೊಳಗಿರುವ ಅಭ್ಯರ್ಥಿಗಳು ಮತ್ತು ಹಿಂದುಳಿದ ವರ್ಗಗಳಿಗೆ ಗರಿಷ್ಟ 38 ವರ್ಷ ಮತ್ತು ಪ.ಜಾ/ಪ.ಪಂ/ಪ್ರವರ್ಗ-1ರ ಗರಿಷ್ಟ 40 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಹಾಕಲು ಅರ್ಹರಾಗಿದ್ದರು.

ಕೆಪಿಎಸ್ಸಿ ನೇಮಕಾತಿಯ ಸಹಾಯಕ ಇಂಜಿನಿಯರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 43,100/- ರಿಂದ 83,900/-ರೂ ಮತ್ತು ಕಿರಿಯ ಇಂಜಿನಿಯರ್ ಹುದ್ದೆಗಳಿಗೆ ತಿಂಗಳಿಗೆ 33,450/- ರಿಂದ 62,600/-ರೂ ವೇತನವನ್ನು ನೀಡಲಾಗುವುದು ಎಂದು ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಕೆಪಿಎಸ್ಸಿ ನೇಮಕಾತಿಯ ತಾಂತ್ರಿಕ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇರ ನೇಮಕಾತಿ ಮಾಡಲಾಗುವುದು. ಸಹಾಯಕ ಅಭಿಯಂತರರು ಹುದ್ದೆಗಳಿಗೆ ಡಿಸೆಂಬರ್ 14 ರಿಂದ 29,2021ರಂದು ಮತ್ತು ಕಿರಿಯ ಅಭಿಯಂತರರು ಹುದ್ದೆಗಳಿಗೆ ಡಿಸೆಂಬರ್ 13,2021ರಂದು ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲಾಗಿರುತ್ತದೆ. ಈ ಪರೀಕ್ಷೆಯ ಕೀ ಉತ್ತರಗಳನ್ನು ಇದೀಗ ಪ್ರಕಟ ಮಾಡಲಾಗಿದ್ದು, ಅಭ್ಯರ್ಥಿಗಳು ಕೀ ಉತ್ತರಗಳನ್ನು ವೀಕ್ಷಿಸಬಹುದು ಮತ್ತು ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಬಹುದು.

ಕೀ ಉತ್ತರಗಳಿಗೆ ಆಕ್ಷೇಪಣೆಗಳನ್ನು ವೆಬ್‌ಸೈಟ್ ನಲ್ಲಿ ಪ್ರಕಟಿಸಿರುವ ನಮೂನೆಯಲ್ಲಿಯೇ ಸಲ್ಲಿಸಬೇಕಿರುತ್ತದೆ. ಜೊತೆಗೆ ಪ್ರತಿ ಪ್ರಶ್ನೆಗೆ 50/-ರೂ ಶುಲ್ಕವನ್ನು ಪಾವತಿಸುವ ಮೂಲಕ ಜನವರಿ 12,2022ರ ಸಂಜೆ 5:30ರೊಳಗಾಗಿ ಪರೀಕ್ಷಾ ನಿಯಂತ್ರಕರು, ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗಸೌಧ, ಬೆಂಗಳೂರು-560001 ಈ ವಿಳಾಸಕ್ಕೆ ಮಾತ್ರ ತಲುಪುವಂತೆ ಆಕ್ಷೇಪಣೆಗಳನ್ನು ಕಳುಹಿಸಿಕೊಡಬಹುದು. ತದನಂತರ ಸ್ವೀಕೃತವಾಗುವ ಆಕ್ಷೇಪಣೆಗಳನ್ನು ತಿರಸ್ಕರಿಸಲಾಗುವುದು ಎಂದು ಕೆಪಿಎಸ್ಸಿ ಪ್ರಕಟಣೆಯಲ್ಲಿ ಹೇಳಿದೆ.

ಕೆಪಿಎಸ್ಸಿ ಗ್ರೂಪ್ ಬಿ ಮತ್ತು ಸಿ ತಾಂತ್ರಿಕ ಹುದ್ದೆಗಳ ಕೀ ಉತ್ತರ ವೀಕ್ಷಿಸುವುದು ಹೇಗೆ ?:

ಸ್ಟೆಪ್ 1: ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್ http://www.kpsc.kar.nic.in/ ಗೆ ಭೇಟಿ ನೀಡಿ.
ಸ್ಟೆಪ್ 2: ಹೋಂ ಪೇಜ್ ನಲ್ಲಿ ಲಭ್ಯವಿರುವ ಗ್ರೂಪ್ ಬಿ ಮತ್ತು ಸಿ ವೃಂದದ ತಾಂತ್ರಿಕ ಹುದ್ದೆಗಳ ಕೀ ಉತ್ತರಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ಇನ್ನೊಂದು ಪುಟಕ್ಕೆ ಹೋಗುವಿರಿ ಅಲ್ಲಿ ಕ್ರ.ಸಂಖ್ಯೆ ಜೊತೆಗೆ ಕೀ-ಉತ್ತರಗಳು ಲಭ್ಯವಿರುತ್ತವೆ ಅದನ್ನು ಪರಿಶೀಲಿಸಬಹುದು.
ಸ್ಟೆಪ್ 4: ಅಭ್ಯರ್ಥಿಗಳು ಕೀ ಉತ್ತರಗಳನ್ನು ವೀಕ್ಷಿಸಿದ ಬಳಿಕ ಆಕ್ಷೇಪಣೆಗಳು ಇದ್ದಲ್ಲಿ ಜನವರಿ 12,2022ರೊಳಗೆ ಸಲ್ಲಿಸಬಹುದು.

More News  

For Quick Alerts
ALLOW NOTIFICATIONS  
For Daily Alerts

English summary
KPSC released group B and C (Technical) answer key. Applicants can check answer key and raise objections before january 12.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+