KPSC Main Exam 2022 : ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗಳ ಮುಖ್ಯ ಪರೀಕ್ಷೆಗೆ ಅರ್ಜಿ ಆಹ್ವಾನ

ಕರ್ನಾಟಕ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯಲ್ಲಿನ 2019-20ನೇ ಸಾಲಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ 16 ಹುದ್ದೆಗಳ ನೇಮಕಾತಿಯ ಮುಖ್ಯ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ.

ಕೆಪಿಎಸ್ಸಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗಳ ಮುಖ್ಯ ಪರೀಕ್ಷೆಗೆ ಅರ್ಜಿ ಅಹ್ವಾನ

2019-20ನೇ ಸಾಲಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ 16 ಹುದ್ದೆಗಳಿಗೆ ಅಕ್ಟೋಬರ್ 31,2021ರಂದು ಪೂರ್ವಭಾವಿ ಪರೀಕ್ಷೆಯನ್ನು ನಡೆಸಲಾಗಿರುತ್ತದೆ. ಡಿಸೆಂಬರ್ 28,2021ರಂದು 1:10 ಅನುಪಾತದಲ್ಲಿ ಪೂರ್ವಭಾವಿ ಪರೀಕ್ಷೆಯಿಂದ ಮುಖ್ಯ ಪರೀಕ್ಷೆಗೆ ಅರ್ಹರಾದ ಅಭ್ಯರ್ಥಿಗಳ ಅರ್ಹತಾ ಪಟ್ಟಿಯನ್ನು ಪ್ರಕಟಿಸಲಾಗಿರುತ್ತದೆ. ಮುಖ್ಯ ಪರೀಕ್ಷೆಯನ್ನು ಮೇ 5,2022 ರಿಂದ ನಡೆಸಲು ನಿಗದಿಪಡಿಸಲಾಗಿದೆ. ವಿವರವಾದ ವೇಳಾಪಟ್ಟಿಯನ್ನು ಶೀಘ್ರದಲ್ಲಿ ಪ್ರಕಟಿಸಲಾಗುತ್ತದೆ.

ಕರ್ನಾಟಕ ಲೋಕಸೇವಾ ಆಯೋಗ, ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯಲ್ಲಿ 2019-20ನೇ ಸಾಲಿನ ಗ್ರೂಪ್ -"ಎ" ವೃಂದದ 16 ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು 2 ವರ್ಷಗಳ ಡಿಪ್ಲೋಮಾ ಕೋರ್ಸ್ ಇನ್ ಫಾರೆಸ್ಟ್ರಿ ತರಬೇತಿಗಾಗಿ ಆಯ್ಕೆ ಮಾಡಲು ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗೆ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ನವೆಂಬರ್ 20,2020ರೊಳಗೆ ಅರ್ಜಿಯನ್ನು ಆಹ್ವಾನಿಸಲಾಗಿತ್ತು.

ಬಿ.ಎಸ್ಸಿ ಪದವಿ ಮತ್ತು ಬಿ.ಎಸ್ಸಿ ಪದವಿ ಹೊರತುಪಡಿಸಿ ಇತರೆ ವಿಜ್ಞಾನ/ಇಂಜಿನಿಯರಿಂಗ್ ಪದವೀಧರರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಗ್ರೂಪ್ 'ಎ' ವೃಂದದ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 52,650/- ರಿಂದ 97,100/-ರೂ ವೇತನವನ್ನು ನೀಡಲಾಗುವುದು.

ಪ್ರಮುಖ ದಿನಾಂಕಗಳು :

ಆನ್‌ಲೈನ್ ಅರ್ಜಿ ಸಲ್ಲಿಕೆ ಮಾಡುವ ಪ್ರಾರಂಭ ದಿನಾಂಕ : ಮಾರ್ಚ್ 30,2022
ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : ಏಪ್ರಿಲ್ 16,2022
ಶುಲ್ಕ ಪಾವತಿಗೆ ಕೊನೆಯ ದಿನಾಂಕ : ಏಪ್ರಿಲ್ 18,2022

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ :

* ಮುಖ್ಯ ಪರೀಕ್ಷೆ
* ಶಾರೀರಿಕ ದಾರ್ಢ್ಯತೆ
* ವ್ಯಕ್ತಿತ್ವ ಪರೀಕ್ಷೆ

ಅರ್ಜಿ ಶುಲ್ಕ :

ಪರಿಶಿಷ್ಟ್ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಮಾಜಿ ಸೈನಿಕ ಅಭ್ಯರ್ಥಿಗಳು 300/-ರೂ
ಇತರೆ ಅಭ್ಯರ್ಥಿಗಳು 500/-ರೂ
ವಿಶೇಷ ಸೂಚನೆ: 35/-ರೂ ಪ್ರಕ್ರಿಯೆ ಶುಲ್ಕವನ್ನು ಎಲ್ಲಾ ಅಭ್ಯರ್ಥಿಗಳು ಕಡ್ಡಾಯವಾಗಿ ಪಾವತಿಸಬೇಕಿರುತ್ತದೆ.

ಆನ್‌ಲೈನ್ ಅರ್ಜಿ ಸಲ್ಲಿಸುವುದು ಹೇಗೆ ?:

ಸ್ಟೆಪ್ 1 : ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್ https://kpsc.kar.nic.in/ ಗೆ ಭೇಟಿ ನೀಡಿ
ಸ್ಟೆಪ್ 2 : ಹೋಂ ಪೇಜ್ ನಲ್ಲಿ ಮುಖ್ಯ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಎಂದು ಮೂಡುತ್ತದೆ ಮತ್ತು ಮುಖ್ಯ ಪರೀಕ್ಷೆಗೆ ಹೊರಡಿಸಲಾದ ಅಧಿಸೂಚನೆ/ಪರೀಕ್ಷಾ ಶುಲ್ಕದ ವಿವರಗಳು ಮೂಡುತ್ತವೆ
ಸ್ಟೆಪ್ 3 : ಅಭ್ಯರ್ಥಿಯು ಪೂರ್ವಭಾವಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಯೂಸರ್ ನೇಮ್ ಮತ್ತು ಪಾಸ್‌ವರ್ಡ್ ಅನ್ನು ಬಳಸಿ ಲಾಗಿನ್ ಆಗಿ
ಸ್ಟೆಪ್ 4 :ಲಾಗಿನ್ ಆದ ಬಳಿಕ ಅರ್ಜಿ ಸಲ್ಲಿಕೆಯ ಮೇಲೆ ಕ್ಲಿಕ್ ಮಾಡಿ ನಂತರ ಪೂರ್ವಭಾವಿ ಪರೀಕ್ಷೆಯ ಅರ್ಜಿಯಲ್ಲಿ ಭರ್ತಿ ಮಾಡಿದ ಎಲ್ಲಾ ವೈಯಕ್ತಿಕ ವಿವರ, ವಿದ್ಯಾರ್ಹತೆ ಮತ್ತು ಇತರೆ ಮಾಹಿತಿ ಭರ್ತಿ ಮಾಡಿ
ಸ್ಟೆಪ್ 5: ಅರ್ಜಿಯನ್ನು ಕೂಲಂಕುಶವಾಗಿ ಪರಿಶೀಲಿಸಿ. ನಂತರ ಸಬ್‌ಮಿಟ್ ಮಾಡಿ
ಸ್ಟೆಪ್ 6: ಪರೀಕ್ಷಾ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬಹುದು. ಬೇರೆ ಯಾವುದೇ ತಂತ್ರಾಂಶ ಬಳಸಿ ಪಾವತಿಸಲು ಅವಕಾಶವಿರುವುದಿಲ್ಲ.

More News  

For Quick Alerts
ALLOW NOTIFICATIONS  
For Daily Alerts

English summary
KPSC invited application for main exam 2022 for assistant conservator of forest posts. Interested candidates can apply before April 16.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+