ಕೆಪಿಎಸ್ಸಿ ಮುಖ್ಯ ಪರೀಕ್ಷೆ: ನಕಲು ಮಾಡುತ್ತಿದ್ದ ಅಭ್ಯರ್ಥಿ ಡಿಬಾರ್

ಕೆಪಿಎಸ್ಸಿಯ ಗೆಜೆಟೆಡ್ ಪ್ರೊಬೆಷನರಿ ಮುಖ್ಯ ಪರೀಕ್ಷೆಯ ಸಾಮಾನ್ಯ ಜ್ಞಾನ ಪ್ರಥಮ ಪತ್ರಿಕೆಯನ್ನು ಬರೆಯುವಾಗ ಆಧುನಿಕ ತಂತ್ರಜ್ಞಾನ ಬಳಸಿ ನಕಲು ಮಾಡುತ್ತಿದ್ದ ಅಭ್ಯರ್ಥಿ ರಾಜಕುಮಾರ್ ಗೌಡಪ್ಪಗೋಳನನ್ನ ಡಿಬಾರ್ ಮಾಡಲಾಗಿದೆ.

ಕೆಎಎಸ್ ಮುಖ್ಯ ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ ಅಭ್ಯರ್ಥಿಯನ್ನು ಡಿಬಾರ್ ಮಾಡಿದ ಘಟನೆ ಧಾರವಾಡದಲ್ಲಿ ಮಂಗಳವಾರ ನಡೆದಿದೆ.

ಕೆಪಿಎಸ್ಸಿಯ ಗೆಜೆಟೆಡ್ ಪ್ರೊಬೆಷನರಿ ಮುಖ್ಯ ಪರೀಕ್ಷೆಯ ಸಾಮಾನ್ಯ ಜ್ಞಾನ ಪ್ರಥಮ ಪತ್ರಿಕೆಯನ್ನು ಬರೆಯುವಾಗ ಆಧುನಿಕ ತಂತ್ರಜ್ಞಾನ ಬಳಸಿ ನಕಲು ಮಾಡುತ್ತಿದ್ದ ಅಭ್ಯರ್ಥಿ ರಾಜಕುಮಾರ್ ಗೌಡಪ್ಪಗೋಳನನ್ನ ಡಿಬಾರ್ ಮಾಡಲಾಗಿದೆ.

ಕೆಪಿಎಸ್ಸಿ: ನಕಲು ಮಾಡುತ್ತಿದ್ದ ಅಭ್ಯರ್ಥಿ ಡಿಬಾರ್

ಪರೀಕ್ಷಾ ಉಪಸಮನ್ವಯಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಪರೀಕ್ಷಾ ವೀಕ್ಷಕ ರಮೇಶ್ ಕೋನರಡ್ಡಿ ಗುರತಿಸಿ ಡಿಬಾರ್ ಮಾಡಿದ್ದಾರೆ.

ಅಭ್ಯರ್ಥಿಯು ಬನಿಯನ್ ನಲ್ಲಿ ಚಿಪ್, ವೈರ್ ಅಳವಡಿಸಿಕೊಂಡಿದ್ದರು. ರಾಜಕುಮಾರ್ ವಿರುದ್ಧ ಪೊಲೀಸ್ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ಪರೀಕ್ಷೆ ಆರಂಭವಾಗುತ್ತಿದ್ದಂತೆ ರಾಜಕುಮಾರ ಕೆಲಹೊತ್ತು ಪರೀಕ್ಷೆ ಬರೆದಿದ್ದಾನೆ. 11 ಗಂಟೆಯ ಸುಮಾರಿಗೆ ಆತನ ಚಲನವಲನದ ಬಗ್ಗೆ ಅನುಮಾನಗೊಂಡ ಪರೀಕ್ಷಾ ಮೇಲ್ವಿಚಾರಕರು ಮುಖ್ಯಸ್ಥರ ಗಮನಕ್ಕೆ ತಂದಿದ್ದಾರೆ.

ಕೇಂದ್ರದ ಮುಖ್ಯಸ್ಥೆ ವೀಣಾ ತುಪ್ಪದ ಕೂಡಲೇ ಪರೀಕ್ಷಾ ಉಪ ಸಮನ್ವಯಾಧಿಕಾರಿ ಹಾಗು ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ ಮತ್ತು ಪರೀಕ್ಷಾ ವೀಕ್ಷಕ ರಮೇಶ್ ಕೋನರೆಡ್ಡಿ ಗಮನಕ್ಕೆ ತಂದಿದ್ದಾರೆ.

ಸ್ಥಳಕ್ಕೆ ತೆರಳಿ ರಾಜಕುಮಾರನ ತಪಾಸಣೆ ನಡೆಸಿದಾಗ ಆತ ಧರಿಸಿದ್ದ ಕಪ್ಪು ಜಾಕೆಟ್ ಒಳಗೆ ಇಲೆಕ್ಟ್ರಾನಿಕ್ ಡಿವೈಸ್, ವೈರ್ ಪತ್ತೆಯಾಗಿದೆ. ಅಲ್ಲದೆ ಸಣ್ಣ ಅಕ್ಷರದಲ್ಲಿ ಬರೆದಿದ್ದ ಹಾಳೆಗಳ ಬಂಡಲ್ ಕೂಡ ಸಿಕ್ಕಿದೆ. ಕೂಡಲೇ ಆತನನ್ನು ಪರೀಕ್ಷಾ ಕೇಂದ್ರದಿಂದ ಹೊರ ಹಾಕಿ ವಿದ್ಯಾಗಿರಿ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.

For Quick Alerts
ALLOW NOTIFICATIONS  
For Daily Alerts

English summary
An aspirant of Civil service officer has been debarred in preliminary exams conducted by Karnataka state Public Service Commission in Dharwad who tried to use device for malpractice.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X