ಕೆಪಿಟಿಸಿಎಲ್ ನೇಮಕಾತಿ ಇ-ಅಡ್ಮಿಟ್ ಪತ್ರ ಡೌನ್ಲೋಡ್ ಮಾಡಿಕೊಳ್ಳುವ ಬಗ್ಗೆ

ಕರ್ನಾಟಕ ವಿದ್ಯತ್ ಪ್ರಸರಣ ನಿಗಮ ನಿಯಮಿತ ಮತ್ತು ವಿವಿಧ ಎಸ್ಕಾಂಗಳಲ್ಲಿ ಸಹಾಯಕ ಇಂಜಿನಿಯರ್ (ವಿದ್ಯುತ್), ಸಹಾಯಕ ಲೆಕ್ಕಾಧಿಕಾರಿ, ಕಿರಿಯ ಇಂಜಿನಿಯರ್ (ವಿದ್ಯುತ್/ಸಿವಿಲ್), ಸಹಾಯಕ ಹಾಗೂ ಕಿರಿಯ ಸಹಾಯಕ ಹುದ್ದೆಗಳ ನೇಮಕಾತಿಗೆ ಆನ್-ಲೈನ್ ಆಪ್ಟಿಟ್ಯೂಡ್ ಟೆಸ್ಟ್ ಅನ್ನು ದಿನಾಂಕ 07-07-2017 ರಿಂದ 11-07-2017 ರವರೆಗೆ ರಾಜ್ಯಾದ್ಯಂತ ವಿವಿಧ ಕೇಂದ್ರಗಳಲ್ಲಿ ನಡೆಸಲಾಗುವುದು.

ನಿಗದಿತ ಅರ್ಜಿ ಶುಲ್ಕವನ್ನು ಪಾವತಿಸಿರುವ ಅಭ್ಯರ್ಥಿಗಳು, ವಿಕಲಚೇತನ ಅಭ್ಯರ್ಥಿಗಳು ಹಾಗೂ ಸಹಾಯಕ ಇಂಜಿನಿಯರ್ (ವಿದ್ಯುತ್) ಹಾಗೂ ಸಹಾಯಕ ಲೆಕ್ಕಾಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಕನ್ನಡ ಭಾಷಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಅರ್ಹರಿರುವ ಅಭ್ಯರ್ಥಿಗಳು ಮಾತ್ರ ಆನ್-ಲೈನ್ ಆಪ್ಟಿಟ್ಯೂಡ್ ಟೆಸ್ಟ್ ಗೆ ಹಾಜರಾಗಲು ಅರ್ಹರಾಗಿರುತ್ತಾರೆ.

ಒಂದೇ ಹುದ್ದೆಗೆ, ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಮತ್ತು ಒಂದಕ್ಕಿಂತ ಹೆಚ್ಚು ಕಂಪನಿಗಳ ಕೆಲವು ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿಗಳನ್ನು ತೆಗೆದುಹಾಕಲಾಗಿದೆ.

ಕೆಪಿಟಿಸಿಎಲ್ ಪ್ರವೇಶ ಪತ್ರ

 

ದಿನಾಂಕ: 28-06-2017 ರ ನಂತರ ಇ-ಅಡ್ಮಿಟ್ ಪತ್ರಗಳನ್ನು (TAT) ಕವಿಪ್ರನಿನಿ ಮತ್ತು ಎಸ್ಕಾಂಗಳ ವೆಬ್ಸೈಟ್ www.kptcl.com ಗಳಲ್ಲಿ ಲಭ್ಯಪಡಿಸಲಾಗುವುದು. ಅಭ್ಯರ್ಥಿಗಳು, ತಿಳಿಸಲಾದ ವೆಬ್ಸೈಟ್ ಗಳಿಗೆ ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕದೊಂದಿಗೆ ಲಾಗ್-ಆನ್ ಮಾಡುವುದರೊಂದಿಗೆ ಇ-ಅಡ್ಮಿಟ್ ಮುದ್ರಿತ ಪ್ರತಿಯನ್ನು ಪಡೆದುಕೊಳ್ಳಬಹುದಾಗಿದೆ.

ನಿಗದಿತ ಪರೀಕ್ಷಾ ಕೇಂದ್ರಗಳಲ್ಲಿ ಆಪ್ಟಿಟ್ಯೂಡ್ ಟೆಸ್ಟ್ ಗೆ ಹಾಜರಾಗುವ ಅಭ್ಯರ್ಥಿಗಳು ಇ-ಅಡ್ಮಿಟ್ ಪತ್ರದ ಮುದ್ರಿತ ಪ್ರತಿಯನ್ನು 2 ಪ್ರತಿಗಳನ್ನು ಹಾಜರುಪಡಿಸತಕ್ಕದ್ದು. (ಇ-ಅಡ್ಮಿಟ್) ಪತ್ರದ ಮೇಲೆ ಅಭ್ಯರ್ಥಿಯು ಇತ್ತೀಚಿನ ಭಾವಚಿತ್ರವನ್ನು ಅಂಟಿಸುವುದು)

ಸೂಚನೆ

  • ಪರೀಕ್ಷಾ ಕೇಂದ್ರಗಳ ಬದಲಾವಣೆಗೆ ಯಾವುದೇ ಅವಕಾಶವಿರುವುದಿಲ್ಲ.
  • ಪ್ರವೇಶ ಪತ್ರಗಳನ್ನು ಪ್ರತ್ಯೇಕವಾಗಿ ಅಂಚೆ ಮೂಲಕ ರವಾನಿಸಲಾಗುವುದಿಲ್ಲ.
  • ಅಭ್ಯರ್ಥಿಗಳು ಆಪ್ಟಿಟ್ಯೂಡ್ ಟೆಸ್ಟ್ ಗೆ ಹಾಜರಾಗುವ ಸಮಯದಲ್ಲಿ ಇ-ಅಡ್ಮಿಟ್ ಪತ್ರದಲ್ಲಿ ಸೂಚಿಸಿರುವ ಯಾವುದಾದರು ಒಂದು ಮೂಲ ಗುರುತಿನ ಪತ್ರದೊಂದಿಗೆ ಒಂದು ನಕಲು ಪ್ರತಿಯನ್ನು ಹಾಜರುಪಡಿಸತಕ್ಕದ್ದು.

ಇ-ಅಡ್ಮಿಟ್ ಪತ್ರವನ್ನು ಪಡೆದುಕೊಳ್ಳುವ ಸಂದರ್ಭದಲ್ಲಿ ತೊಂದರೆ ಉಂಟಾದಲ್ಲಿ, ಕಛೇರಿಯ ಕೆಲಸದ ವೇಳೆಯಲ್ಲಿ ಈ ಕೆಳಕಂಡ ಸಹಾಯವಾಣಿ ಸಂಪರ್ಕಿಸಬಹುದಾಗಿದೆ.

ನಿಗಮ/ಕಂಪನಿ ಹೆಸರುಸಹಾಯವಾಣಿ ಸಂಖ್ಯೆ
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕವಿಪ್ರನಿನಿ)080-22211527
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ)080-22085061
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್)0821-2343384
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಹೆಸ್ಕಾಂ)0836-2223867,2223865
ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಜೆಸ್ಕಾಂ)08472-256647,239004

ಪರೀಕ್ಷೆ ವೇಳಾಪಟ್ಟಿ

For Quick Alerts
ALLOW NOTIFICATIONS  
For Daily Alerts

English summary
E-Admit cards are available for The ONLINE APTITUDE TEST FOR THE POST of Asst.Engineer(Ele), Asst Accounts Officer, Junior Engineer (Ele/Civil), Assistant, Junior Assistant in KPTCL and ESCOMS.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X