ಮೈಸೂರು ವಿಶ್ವವಿದ್ಯಾಲಯ ಕೆಸೆಟ್ 2020 ಪರೀಕ್ಷೆಯ ಅಂತಿಮ ಕೀ ಉತ್ತರವನ್ನು ಪ್ರಕಟ ಮಾಡಿದೆ.
ಕೆಸೆಟ್ 2020 ಪರೀಕ್ಷೆಯು ಸೆಪ್ಟೆಂಬರ್ 27,2020ರಂದು ನಡೆಸಲಾಗಿತ್ತು. ನಂತರ ಅಕ್ಟೋಬರ್ 5,2020ರಂದು ತಾತ್ಕಾಲಿಕ ಸರಿ ಉತ್ತರಗಳನ್ನು ಪ್ರಕಟಿಸಲಾಗಿತ್ತು ಮತ್ತು ಅಭ್ಯರ್ಥಿಗಳಿಂದ ಅಕ್ಟೋಬರ್ 19,2020ರೊಳಗೆ ಆಕ್ಷೇಪಣೆಯನ್ನು ಆಹ್ವಾನಿಸಲಾಗಿತ್ತು. ಇದೀಗ ಈ ಪರೀಕ್ಷೆಯ ಅಂತಿಮ ಕೀ ಉತ್ತರಗಳನ್ನು ಅಧಿಕೃತ ವೆಬ್ಸೈಟ್ ನಲ್ಲಿ ಪ್ರಕಟ ಮಾಡಲಾಗಿದೆ.
ಕೆಸೆಟ್ 2020 ಪರೀಕ್ಷೆಯ ಅಂತಿಮ ಕೀ ಉತ್ತರ ಚೆಕ್ ಮಾಡುವುದು ಹೇಗೆ?:
ಸ್ಟೆಪ್ 1: ಅಭ್ಯರ್ಥಿಗಳು ಮೈಸೂರು ವಿಶ್ವವಿದ್ಯಾಲಯದ ಅಧಿಕೃತ ವೆಬ್ಸೈಟ್ http://kset.uni-mysore.ac.in/ ಗೆ ಭೇಟಿ ನೀಡಿ.
ಸ್ಟೆಪ್ 2: ಹೋಂ ಪೇಜ್ ನಲ್ಲಿ ಲಭ್ಯವಿರುವ "2020ರ ಅಂತಿಮ ಕೀ ಉತ್ತರ" ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ನಂತರ ತಾವು ಪರೀಕ್ಷೆ ಬರೆದ ವಿಷಯದ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 4: ನಂತರ ಕೀ ಉತ್ತರಗಳ ಪಟ್ಟಿ ಲಭ್ಯವಾಗುವುದು
ಸ್ಟೆಪ್ 5: ಅಭ್ಯರ್ಥಿಗಳು ತಾವು ನೀಡಿದ ಉತ್ತರಗಳೊಂದಿಗೆ ಕೀ ಉತ್ತರಗಳನ್ನು ಚಿಕ್ ಮಾಡಿಕೊಳ್ಳಿ.
ಅಭ್ಯರ್ಥಿಗಳು ಕೀ-ಉತ್ತರಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.