ಕೆ ಎಸ್ ಓ ಯು: ನಕಲಿ ಅಂಕಪಟ್ಟಿಯಿಂದ ವಿದ್ಯಾರ್ಥಿಗಳು ಕಂಗಾಲು

ಮೈಸೂರಿನ ಮುಕ್ತ ವಿಶ್ವವಿದ್ಯಾನಿಲಯ ಕೆಎಸ್ಓಯು ಮತ್ತೊಮ್ಮೆ ವಿದ್ಯಾರ್ಥಿಗಳ ಜೀವನದಲ್ಲಿ ಆತಂಕ ಸೃಷ್ಟಸಿದೆ. ಈ ಬಾರಿ ನಕಲಿ ಅಂಕಪಟ್ಟಿ ಮೂಲಕ 850 ವಿದ್ಯಾರ್ಥಿಗಳ ಜೀವನ ಅತಂತ್ರ ಸ್ಥಿತಿಗೆ ತಲುಪಿದೆ.

ಮೈಸೂರಿನ ಮುಕ್ತ ವಿಶ್ವವಿದ್ಯಾನಿಲಯ ಕೆಎಸ್ಓಯು ಮತ್ತೊಮ್ಮೆ ವಿದ್ಯಾರ್ಥಿಗಳ ಜೀವನದಲ್ಲಿ ಆತಂಕ ಸೃಷ್ಟಸಿದೆ. ಈ ಬಾರಿ ನಕಲಿ ಅಂಕಪಟ್ಟಿ ಮೂಲಕ 850 ವಿದ್ಯಾರ್ಥಿಗಳ ಜೀವನ ಅತಂತ್ರ ಸ್ಥಿತಿಗೆ ತಲುಪಿದೆ. ಇದರ ಜೊತೆಗೆ ಬ್ರಿಡ್ಜ್ ಕೋರ್ಸ್ ಪಡೆದ ವಿದ್ಯಾರ್ಥಿಗಳು ಹಾಗೂ ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳು ಬೀದಿಗೆ ಬಿದ್ದಿದ್ದಾರೆ.

ಬ್ರಿಡ್ಜ್ ಕೋರ್ಸ್ ಮಾನ್ಯತೆ ಇಲ್ಲದಿರುವುದು ಒಂದೆಡೆಯಾದರೆ, ಕೆಎಸ್ಓಯುಗೆ ಮಾನ್ಯತೆ ಇಲ್ಲದಿರುವುದು ಮತ್ತೊಂದು ಸಮಸ್ಯೆಯಾಗಿದ್ದು, ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ.

ನಕಲಿ ಅಂಕಪಟ್ಟಿಯಿಂದ ವಿದ್ಯಾರ್ಥಿಗಳು ಕಂಗಾಲು

ಜಿಸಿಎಂಸಿ ಕಾಲೇಜು, ಶ್ರೀಮೇಧಾ ಕಾಲೇಜು, ಇಂಡೋ ಅಮೇರಿಕನ್ ಕಾಲೇಜು ಸೇರಿದಂತೆ ಧಾರವಾಡದ ನೂರಾರು ವಿದ್ಯಾರ್ಥಿಗಳು ಸದ್ಯ ದಿನನಿತ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ಅಲೆದಾಡುತ್ತಿದ್ದಾರೆ.

ಸದ್ಯ ಅಂಕಪಟ್ಟಿಗಳ ನೈಜತೆ ಕುರಿತು ಪರಿಶೀಲನೆಗೆ ಕೋರ್ಟ್ ಆದೇಶಿಸಿದೆ. ಈ ಹಿನ್ನೆಲೆ ಇವರೆಲ್ಲರಿಗೂ ನಾಲ್ಕು ಸೆಮ್ ಓದಿದ ವಿದ್ಯಾರ್ಥಿಗಳಿಗೆ 5 ನೇ ಸೆಮ್ ಗೆ ಪ್ರವೇಶಾತಿಗೆ ನಿರಾಕರಿಸಲಾಗಿದೆ.

ಇದೇ ಬೆನ್ನಲ್ಲೇ ಕೆ‌ಎಸ್ ಓಯು ಅಂಕಪಟ್ಟಿಗೆ ಮಾನ್ಯತೆ ಇಲ್ಲದ ಕಾರಣ ಪ್ರವೇಶಾತಿ ಸಾಧ್ಯವಿಲ್ಲ ಎಂದು ಕಾಲೇಜುಗಳು ತಿಳಿಸಿವೆ. ಅಂತಿಮ ಬಿಕಾಂ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಎರಡು ವರ್ಷ ಇಲ್ಲದ ಸಮಸ್ಯೆ ಮೂರನೇ ವರ್ಷ ಉದ್ಭವವಾಗಿದೆ. ಮಾನ್ಯತೆ ಕಳೆದುಕೊಂಡಿರುವ ಕಾರಣ ಪ್ರವೇಶಾತಿ ಇಲ್ಲವಾಗಿದೆ. ಪ್ರವೇಶಾತಿ ನೀಡುವಂತೆ ವಿದ್ಯಾರ್ಥಿಗಳು ಕೋರ್ಟ್ ಮೊರೆ ಹೋಗಿದ್ದಾರೆ.

ಅಂಕಪಟ್ಟಿಯ ನೈಜತೆ, ಸತ್ಯಾಸತ್ಯತೆಗೆ ಕೋರ್ಟ್ ಆದೇಶಿಸಿದೆ. ಬ್ರಿಡ್ಜ್ ಕೋರ್ಸ್ ಆಧಾರದ ಮೇಲೆ ಪ್ರವೇಶಾತಿ ಸಾಧ್ಯವಿಲ್ಲ ಎಂದು ಸಂಸ್ಥೆಗಳು ತಿಳಿಸಿವೆ. ಹಿಂದಿನ ಕುಲಪತಿಗಳ ನಡೆಗೆ ನೂರಾರು ವಿದ್ಯಾರ್ಥಿಗಳ ಭವಿಷ್ಯ ಅತಂತ್ರ ವಾಗಿದೆ.

ಸಿಸಿಬಿಯಿಂದ ತನಿಖೆ ಚುರುಕು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಅಂಕಪಟ್ಟಿ ಹಗರಣ ಬಗೆದಷ್ಟು ಆಳಕ್ಕೆ ಹೋಗುತ್ತಿದೆ. ಮೈಸೂರಿನ ಸಿಸಿಬಿ ಪೊಲೀಸರು ತೀವ್ರ ವಿಚಾರಣೆಗೆ ಮುಂದಾಗಿದ್ದಾರೆ.

More News  

For Quick Alerts
ALLOW NOTIFICATIONS  
For Daily Alerts

English summary
More than 850 students of Karnataka State Open University (KSOU) are in trouble, due to fake marks card issue.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+