ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ನಾಗರಿಕ ಪೊಲೀಸ್ ಕಾನ್ಸ್ ಟೇಬಲ್ (ಪುರುಷ ಮತ್ತು ಮಹಿಳೆ) ಹುದ್ದೆಗಳ ನೇಮಕಾತಿಗೆ ನಡೆಸಿದ ಲಿಖಿತ ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರಗಳನ್ನು ಬಿಡುಗಡೆ ಮಾಡಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳು ಕೀ-ಉತ್ತರವನ್ನು ಚೆಕ್ ಮಾಡಿಕೊಳ್ಳಬಹುದು.

ಇಲಾಖೆಯು ಒಟ್ಟು 387 ನಾಗರಿಕ ಪೊಲೀಸ್ ಕಾನ್ಸ್ ಟೇಬಲ್ (ಪುರುಷ ಮತ್ತು ಮಹಿಳೆ) ಹುದ್ದೆಗಳನ್ನು ಭರ್ತಿ ಮಾಡಲು ಸೆಪ್ಟೆಂಬರ್ 13,2021ರೊಳಗೆ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಅರ್ಜಿ ಶುಲ್ಕವನ್ನು ಪಾವತಿಸಲು ಸೆಪ್ಟೆಂಬರ್ 15,2021ರ ವರೆಗೆ ಅವಕಾಶ ನೀಡಲಾಗಿತ್ತು.
ನಾಗರಿಕ ಪೊಲೀಸ್ ಕಾನ್ಸ್ ಟೇಬಲ್ (ಪುರುಷ ಮತ್ತು ಮಹಿಳೆ) ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುವುದು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯನ್ನು ನವೆಂಬರ್ 21,2021ರಂದು ನಡೆಸಲಾಗಿದ್ದು, ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರಗಳನ್ನು ಇದೀಗ ಬಿಡುಗಡೆ ಮಾಡಲಾಗಿದೆ.
ಅಭ್ಯರ್ಥಿಗಳು ತಾವು ಪರೀಕ್ಷೆ ಬರೆದ ಪ್ರಶ್ನೆ ಪತ್ರಿಕೆ ಸೀರೀಸ್ ಪ್ರಕಾರ ಉತ್ತರಗಳನ್ನು ಚೆಕ್ ಮಾಡಿಕೊಳ್ಳಬಹುದು. ಅಭ್ಯರ್ಥಿಯು ತಾತ್ಕಾಲಿಕ ಕೀ ಉತ್ತರಗಳನ್ನು ವೀಕ್ಷಿಸಿದ ಬಳಿಕ ಯಾವುದೇ ಉತ್ತರಗಳಿಗೆ ಆಕ್ಷೇಪಣೆಗಳಿದ್ದಲ್ಲಿ ಡೆಪ್ಯುಟಿ ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್, ನೇಮಕಾತಿ ವಿಭಾಗ, ಕಾರ್ಲ್ಟನ್ ಹೌಸ್, ಪ್ಯಾಲೇಸ್ ರಸ್ತೆ, ಬೆಂಗಳೂರು-560001 ವಿಳಾಸಕ್ಕೆ ಡಿಸೆಂಬರ್ 10,2021ರೊಳಗೆ ಆಧಾರ ಸಹಿತ ಸಲ್ಲಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೆಎಸ್‌ಪಿ ನಾಗರಿಕ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳ ತಾತ್ಕಾಲಿಕ ಕೀ ಉತ್ತರ ವೀಕ್ಷಿಸುವುದು ಹೇಗೆ ? :
* ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್ http://rec21.ksp-online.in/ ಗೆ ಭೇಟಿ ನೀಡಿ.
* ಹೋಂ ಪೇಜ್ ನಲ್ಲಿ ಲಭ್ಯವಿರುವ "ನ್ಯೂಸ್ ಮತ್ತು ಈವೆಂಟ್ಸ್" ಮೇಲೆ ಕ್ಲಿಕ್ ಮಾಡಿ
* ನಂತರ ಡ್ರಾಪ್ ಡೌನ್ ಮೆನುವಿನಲ್ಲಿ ಆಕ್ಷೇಪಣೆ ಸಲ್ಲಿಕೆಯ ಪಿಡಿಎಫ್ ಮೇಲೆ ಕ್ಲಿಕ್ ಮಾಡಿ
* ಅಲ್ಲಿ ಲಭ್ಯವಿರುವ ಸರಣಿ - ಎ, ಬಿ, ಸಿ, ಡಿ ಮತ್ತು ಇ ಗಳಲ್ಲಿ ನಿಮ್ಮ ಆದ್ಯತೆಯನ್ನು ಕ್ಲಿಕ್ ಮಾಡಿ
* ಕೆಸ್‌ಪಿ ನಾಗರಿಕ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳ ಕೀ ಉತ್ತರ ವೀಕ್ಷಿಸಿ ಮತ್ತು ನಿಮ್ಮ ಆಕ್ಷೇಪಣೆಯನ್ನು ಡಿ.10ರೊಳಗೆ ಸಲ್ಲಿಸಿ.
ಅಭ್ಯರ್ಥಿಗಳು ಪರೀಕ್ಷಾ ತಾತ್ಕಾಲಿಕ ಕೀ-ಉತ್ತರವನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.


Click it and Unblock the Notifications











