ಭಾರಿ ಉದ್ಯೋಗ ಕಡಿತದಿಂದ ಕಂಗಾಲಾದ ಐಟಿ ಕ್ಷೇತ್ರ

ಪ್ರಸಕ್ತ ಹಣಕಾಸು ವರ್ಷದ ಮೊದಲ 6 ತಿಂಗಳಲ್ಲಿ ಕಾಗ್ನಿಜೆಂಟ್‌, ಇನ್ಫೋಸಿಸ್‌, ವಿಪ್ರೊ ಮತ್ತು ಟೆಕ್‌ ಮಹೀಂದ್ರಾ ಮತ್ತಿತರ ಕಂಪನಿಗಳಲ್ಲಿ ಉದ್ಯೋಗಿಗಳ ಸಂಖ್ಯೆ ಇಳಿಕೆಯಾಗಿದೆ.

ದೇಶದ ಪ್ರಮುಖ ಐಟಿ ಕಂಪನಿಗಳಲ್ಲಿ ಕಂಪನಿಗಳಲ್ಲಿ ಭಾರಿ ಉದ್ಯೋಗ ಕಡಿತದ ಪ್ರಕ್ರಿಯೆ ಕಂಡು ಬಂದಿದ್ದು, ಐಟಿ ಕ್ಷೇತ್ರದಲ್ಲಿ ಆತಂಕ ಸೃಷ್ಟಿಯಾಗಿದೆ.

ಪ್ರಸಕ್ತ ಹಣಕಾಸು ವರ್ಷದ ಮೊದಲ 6 ತಿಂಗಳಲ್ಲಿ ಕಾಗ್ನಿಜೆಂಟ್‌, ಇನ್ಫೋಸಿಸ್‌, ವಿಪ್ರೊ ಮತ್ತು ಟೆಕ್‌ ಮಹೀಂದ್ರಾ ಮತ್ತಿತರ ಕಂಪನಿಗಳಲ್ಲಿ ಉದ್ಯೋಗಿಗಳ ಸಂಖ್ಯೆ ಇಳಿಕೆಯಾಗಿದೆ.

ಐಟಿ ಕ್ಷೇತ್ರದಲ್ಲಿ ಉದ್ಯೋಗ ಕಡಿತ

ಕಾಗ್ನಿಜೆಂಟ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಅಂದರೆ 5,000 ಕ್ಕೂ ಅಧಿಕ ಉದ್ಯೋಗಿಗಳನ್ನು ಮನೆಗೆ ಕಳುಹಿಸಲಾಗಿದೆ. ಇನ್ಫೋಸಿಸ್‌ನಲ್ಲಿ 1,924 ಉದ್ಯೋಗಗಳು ಕಡಿತಗೊಂಡಿವೆ. ವಿಪ್ರೊದಲ್ಲಿ ಈ ವರ್ಷ 1,722 ಉದ್ಯೋಗಗಳು ಕಡಿತವಾಗಿವೆ.

ಟಿಸಿಎಸ್‌, ಕಾಗ್ನಿಜೆಂಟ್‌, ಇನ್ಫೋಸಿಸ್‌, ವಿಪ್ರೊ, ಎಚ್‌ಸಿಎಲ್‌, ಟೆಕ್‌ ಮಹೀಂದ್ರಾದಲ್ಲಿ 2016ರ ಏಪ್ರಿಲ್‌-ಸೆಪ್ಟೆಂಬರ್‌ ಅವಧಿಯಲ್ಲಿ 59,940 ಹೊಸ ಉದ್ಯೋಗಗಳು ಸೃಷ್ಟಿಯಾಗಿದ್ದವು. ಆದರೆ, ಈಗ 9 ಸಾವಿರಕ್ಕೂ ಅಧಿಕ ಉದ್ಯೋಗಗಳು ಕಣ್ಮರೆಯಾಗಿವೆ!

ಸುಮಾರು 156 ಶತಕೋಟಿ ಡಾಲರ್‌ ಗಾತ್ರದ ಭಾರತದ ಐಟಿ ಉದ್ಯಮವನ್ನು ಸಂಘಟಿತ ವಲಯದಲ್ಲಿ ದೊಡ್ಡ ಉದ್ಯೋಗದಾತ ಎಂದೇ ಗುರ್ತಿಸಲಾಗುತ್ತದೆ. ಆದರೆ, ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಹೊಸ ಉದ್ಯೋಗಗಳ ಸೃಷ್ಟಿ ಅಲ್ಪ ಪ್ರಮಾಣದಲ್ಲಿದೆ.

ಟಿಸಿಎಸ್‌ನಲ್ಲಿ 2016ರ ಏಪ್ರಿಲ್‌-ಸೆಪ್ಟೆಂಬರ್‌ ಅವಧಿಯಲ್ಲಿ 17,676 ಹೊಸ ಉದ್ಯೋಗಗಳು ಸೇರ್ಪಡೆಯಾಗಿದ್ದರೆ, ಈ ಸಲ ಕೇವಲ 1,990 ಉದ್ಯೋಗಗಳು ಸೃಷ್ಟಿಯಾಗಿವೆ.

ಇನ್ಫೋಸಿಸ್‌ನಲ್ಲಿ 1,924 ಉದ್ಯೋಗಗಳು ಕಡಿತಗೊಂಡಿವೆ. ಕಳೆದ ವರ್ಷದ ಇದೇ ಅವಧಿಯಲ್ಲಿ 1,326 ಉದ್ಯೋಗಗಳು ಸೇರ್ಪಡೆಯಾಗಿದ್ದವು. ವಿಪ್ರೊದಲ್ಲಿ ಕಳೆದ ವರ್ಷದ ಇದೇ ಅವಧಿಯಲ್ಲಿ 1,326 ಉದ್ಯೋಗಗಳು ಸೇರ್ಪಡೆಯಾಗಿದ್ದರೆ, ಈ ವರ್ಷ 1,722 ಉದ್ಯೋಗಗಳು ಕಡಿತವಾಗಿವೆ.

ಎಚ್‌ಸಿಎಲ್‌ನಲ್ಲಿ ಕಳೆದ ವರ್ಷ 4,899 ಹೊಸ ಉದ್ಯೋಗ ಸೃಷ್ಟಿಯಾಗಿದ್ದರೆ, ಈ ವರ್ಷ 3,067 ಉದ್ಯೋಗಗಳಿಗೆ ಕತ್ತರಿ ಬಿದ್ದಿದೆ. ಟೆಕ್‌ ಮಹೀಂದ್ರಾದಲ್ಲಿ 7,454 ಉದ್ಯೋಗಗಳು ಕಳೆದ ವರ್ಷದ ಏಪ್ರಿಲ್‌-ಸೆಪ್ಟೆಂಬರ್‌ ಅವಧಿಯಲ್ಲಿ ಸೃಷ್ಟಿಯಾಗಿದ್ದವು.

ಆಟೋಮೇಷನ್‌ನಿಂದ ಆರಂಭಿಕ ಹಂತದ ಸಾವಿರಾರು ಉದ್ಯೋಗಗಳಿಗೆ ಕತ್ತರಿ ಬಿದ್ದಿದೆ. ಆದರೆ ಡೇಟಾ ಸೈನ್ಸ್‌, ಮೆಷಿನ್‌ ಲರ್ನಿಂಗ್‌, ಎಐ ಆ್ಯಂಡ್‌ ಐಒಟಿ ಕೌಶಲವುಳ್ಳವರಿಗೆ ಬೇಡಿಕೆ ಇದೆ. ಉದ್ಯೋಗಿಗಳ ಬಳಕೆ ಮಟ್ಟವನ್ನು ಕಂಪನಿಗಳು ಹೆಚ್ಚಿಸಿದ್ದು, ಮಲ್ಟಿ ಟಾಸ್ಕ್‌ಗಳಿಗೆ ಬಳಸಿಕೊಂಡು ವೆಚ್ಚ ಕಡಿತಕ್ಕೆ ಮುಂದಾಗಿವೆ.

ಡಿಜಿಟಲೀಕರಣ ಮತ್ತು ಆಟೋಮೇಷನ್‌ಗಳು ಉದ್ಯಮದ ಪಾಲಿಗೆ ಸಮೃದ್ಧ ಅವಕಾಶಗಳನ್ನು ಸೃಷ್ಟಿಸಿದೆ. ಆದರೆ, ಉದ್ಯೋಗ ಕಡಿತಕ್ಕೆ ಕಾರಣವಾಗಿದೆ. ಇದೇ ಮೊದಲ ಸಲ ಉದ್ಯೋಗ ಕುಸಿತ ನೋಡುತ್ತಿದ್ದೇನೆ. ಎಂದು ಎಚ್‌ಎಫ್‌ಎಸ್‌ ರೀಸರ್ಚ್‌ನ ಹಿರಿಯ ಉಪಾಧ್ಯಕ್ಷ ಟಾಮ್‌ ರೇನರ್‌ ಹೇಳಿದ್ದಾರೆ.

More News  

For Quick Alerts
ALLOW NOTIFICATIONS  
For Daily Alerts

English summary
The biggest job cuts in companies in the country's leading IT firms have been the result of anxiety in the IT sector. Cognizant, Infosys, Wipro and Tech Mahindra have dropped the number of employees in the first six months of the current financial year.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+