List Of States Summer Vacation 2021: ಏಪ್ರಿಲ್ ತಿಂಗಳಿನಿಂದ ಶಾಲೆಗಳಿಗೆ ಬೇಸಿಗೆ ರಜೆ ಘೋಷಿಸಿದ ರಾಜ್ಯಗಳಿವು !

ಏಪ್ರಿಲ್ ತಿಂಗಳಿನಿಂದ ಶಾಲೆಗಳಿಗೆ ಬೇಸಿಗೆ ರಜೆ ಘೋಷಿಸಿದ ರಾಜ್ಯಗಳ ಪಟ್ಟಿ

ಭಾರತದೆಲ್ಲೆಡೆ ಕೊರೋನಾ ಸೋಂಕು ಹೆಚ್ಚಳವಾಗುತ್ತಲೇ ಇದೆ. ಇನ್ನೂ ಶಿಕ್ಷಣ ಇಲಾಖೆಗೆ ಇದರಿಂದ ಅಪಾರವಾದ ಪೆಟ್ಟು ಬೀಳುತ್ತಲೇ ಇದೆ. ಕಳೆದ ವರ್ಷದಿಂದ ವಿದ್ಯಾರ್ಥಿಗಳು ಶಾಲೆ, ಪರೀಕ್ಷೆಗಳ ಕುರಿತು ಕಳವಳದಿಂದಿದ್ದಾರೆ. ಆದರೂ ಈ ನಡುವೆಯೇ ವಿದ್ಯಾರ್ಥಿಗಳಿಗೆ ಬೇಸಿಗೆಯ ಆರಂಭದ ರಜಾದಿನಗಳನ್ನು ಘೋಷಿಸಲು ರಾಜ್ಯ ಸರ್ಕಾರಗಳು ಮುಂದಾಗಿವೆ. ಹಾಗಾದ್ರೆ ಯಾವೆಲ್ಲಾ ರಾಜ್ಯಗಳು ಏಪ್ರಿಲ್ ತಿಂಗಳಿನಿಂದ ಬೇಸಿಗೆ ರಜೆಯನ್ನು ಘೋಷಿಸಿವೆ ಎನ್ನುವುದನ್ನು ವೀಕ್ಷಿಸೋಣ.

ಹರಿಯಾಣ:

ಹರಿಯಾಣ ರಾಜ್ಯ ಸರ್ಕಾರವು ಏಪ್ರಿಲ್ 22 ರಿಂದ ಮೇ 31 ರವರೆಗೆ ಎಲ್ಲಾ ಶಾಲೆಗಳಿಗೆ ಬೇಸಿಗೆ ರಜೆ ಘೋಷಿಸಿದೆ. ಈ ಹಿಂದೆ ಎಲ್ಲಾ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ಏಪ್ರಿಲ್ 30 ರವರೆಗೆ ಮುಚ್ಚುವಂತೆ ರಾಜ್ಯ ಸರ್ಕಾರ ಆದೇಶಿಸಿತ್ತು.

ರಾಜ್ಯದಲ್ಲಿ ಈ ತಿಂಗಳ ಆರಂಭದಲ್ಲಿ 8 ನೇ ತರಗತಿಯವರೆಗೆ ಶಾಲೆಗಳನ್ನು ಏಪ್ರಿಲ್ 30 ರವರೆಗೆ ಮುಚ್ಚಲು ನಿರ್ಧರಿಸಲಾಗಿತ್ತು. ಕರೋನವೈರಸ್ ಪ್ರಕರಣಗಳು ತೀವ್ರವಾಗಿ ಏರಿಕೆ ಆದ ಹಿನ್ನೆಲೆಯಲ್ಲಿ ತದನಂತರ ಎಲ್ಲಾ ತರಗತಿಗಳನ್ನು ಮುಚ್ಚಲಾಯಿತು. ಹರಿಯಾಣ ಶಿಕ್ಷಣ ಸಚಿವ ಕನ್ವರ್ ಲಾಲ್, "ಮಕ್ಕಳ ಸುರಕ್ಷತೆಯ ಜೊತೆಗೆ, ಶಿಕ್ಷಕರ ಸುರಕ್ಷತೆಯೂ ನಮ್ಮ ಜವಾಬ್ದಾರಿಯಾಗಿದೆ, ಆದ್ದರಿಂದ ಬೇಸಿಗೆ ರಜೆಯನ್ನು ಮುಂಚಿತವಾಗಿ ಘೋಷಿಸಲಾಗಿದೆ " ಎಂದು ಹೇಳಿದ್ದಾರೆ.

ರಾಜಸ್ಥಾನ:

ರಾಜಸ್ಥಾನ ರಾಜ್ಯ ಸರ್ಕಾರವು ಏಪ್ರಿಲ್ 22 ರಿಂದ ಜೂನ್ 6 ರವರೆಗೆ ಬೇಸಿಗೆ ರಜೆಯನ್ನು ಘೋಷಿಸಿದೆ. ರಾಜ್ಯ ಸರ್ಕಾರವು 1೪ ದಿನಗಳ ಕಾಲ ಲಾಕ್‌ಡೌನ್ ವಿಧಿಸಿದ ನಂತರ ಮತ್ತು ಮೇ 3 ರವರೆಗೆ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಮುಚ್ಚುವುದಾಗಿ ಘೋಷಿಸಿದೆ. ಶಿಕ್ಷಕರು ಮನೆಯಿಂದ ಕೆಲಸ ಮಾಡಲು ಮತ್ತು ಪರೀಕ್ಷೆಯ ಫಲಿತಾಂಶಗಳನ್ನು ತಯಾರಿಸಲು ನಿರ್ದೇಶಿಸಲಾಗಿದೆ.

ಪಶ್ಚಿಮ ಬಂಗಾಳ:

ಪಶ್ಚಿಮ ಬಂಗಾಳ ಸರ್ಕಾರವು ಏಪ್ರಿಲ್ 20 ರಿಂದ ಎಲ್ಲಾ ಶಾಲೆಗಳಿಗೆ ಬೇಸಿಗೆ ರಜೆಯನ್ನು ಘೋಷಿಸಿದೆ. ಶಿಕ್ಷಣ ಸಚಿವ ಪಾಥಾ ಚಟರ್ಜಿ, "ಬೇಸಿಗೆ ವಿರಾಮ ಸಾಮಾನ್ಯವಾಗಿ ಮೇ ಮೊದಲ ವಾರದಿಂದ ಪ್ರಾರಂಭವಾಗುತ್ತದೆ. ಆದರೆ, ಪ್ರಸ್ತುತ COVID-19 ಪರಿಸ್ಥಿತಿಯಿಂದಾಗಿ, ಬೇಸಿಗೆ ರಜೆಯನ್ನು ಪ್ರೀ-ಪೋನ್ ಮಾಡಲು ನಾವು ಒತ್ತಾಯಿಸುತ್ತೇವೆ " ಎಂದು ಹೇಳಿದ್ದಾರೆ. ಖಾಸಗಿ ಶಾಲೆಗಳು ಈ ಪ್ರಕಟಣೆಯನ್ನು ಅನುಸರಿಸಿ ಬೇಸಿಗೆ ರಜಾದಿನಗಳನ್ನು ಘೋಷಿಸುವಂತೆ ಸರ್ಕಾರ ಹೇಳಿದೆ. ಕಳೆದ ಎರಡು ತಿಂಗಳಲ್ಲಿ ಶಾಲೆಗಳಲ್ಲಿ ಅನೇಕ ಶಿಕ್ಷಕರು ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು ಹಾಗೂ ಅವರ ವರದಿಗಳು ಪಾಸಿಟಿವ್ ಬಂದಿದ್ದವು ಹಾಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಆಂಧ್ರಪ್ರದೇಶ:

ಆಂಧ್ರಪ್ರದೇಶ ರಾಜ್ಯ ಸರ್ಕಾರವು 1 ರಿಂದ 9 ನೇ ತರಗತಿಯ ವಿದ್ಯಾರ್ಥಿಗಳಿಗೆ ಏಪ್ರಿಲ್ 20 ರಂದು ಬೇಸಿಗೆ ರಜೆಗಳನ್ನು ಘೋಷಿಸಿತ್ತು. ಮಕ್ಕಳ ಪೌಷ್ಠಿಕಾಂಶದ ಅವಶ್ಯಕತೆಗಳನ್ನು ಪೂರೈಸಲು ಮತ್ತು COVID-19 ಸಮಯದಲ್ಲಿ ಅವರ ರೋಗನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳಲು ಸರ್ಕಾರವು ಅಂತಹ ವಿದ್ಯಾರ್ಥಿಗಳಿಗೆ ಶುಷ್ಕ ಪಡಿತರವನ್ನು ನೀಡುವುದಾಗಿ ಭರವಸೆ ನೀಡಿದೆ ಮತ್ತು ಈ ಎಲ್ಲಾ ವಿದ್ಯಾರ್ಥಿಗಳಿಗೆ ಮುಂದಿನ ತರಗತಿಗೆ ಬಡ್ತಿ ನೀಡಲಾಗಿದೆ. ಇನ್ನು 10 ನೇ ತರಗತಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಮಿಡ್ ಡೇ ಮೀಲ್ಸ್ ಅನ್ನು ಅನ್ನು ಘೋಷಿಸಿದೆ.

ಮಧ್ಯಪ್ರದೇಶ:

ಮಧ್ಯಪ್ರದೇಶ ರಾಜ್ಯದ ಶಾಲೆಗಳಲ್ಲಿ ಅಭ್ಯಸಿಸುವ ವಿದ್ಯಾರ್ಥಿಗಳಿಗೆ ಏಪ್ರಿಲ್ 15 ರಿಂದ ಜೂನ್ 13 ರವರೆಗೆ 1 ರಿಂದ 8 ನೇ ತರಗತಿ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆಯನ್ನು ಘೋಷಿಸಿದೆ. ಸರ್ಕಾರಿ ಮತ್ತು ರಾಜ್ಯ ಅನುದಾನಿತ ಶಾಲೆಗಳಿಗೆ ರಜೆಯನ್ನು ಘೋಷಿಸಲಾಗಿದೆ. ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರಾಜ್ಯ ಶಿಕ್ಷಣ ಸಚಿವ ಇಂದರ್ ಸಿಂಗ್ ಹೇಳಿದ್ದಾರೆ.

More News  

For Quick Alerts
ALLOW NOTIFICATIONS  
For Daily Alerts

English summary
Here is the list of states which announcing summer vacations for schools from april.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+