ಪಠ್ಯದಲ್ಲಿ ಲಿವ್‌ಇನ್‌,ಸಲಿಂಗ ಮತ್ತು ಸಿಂಗಲ್‌ಪೇರೆಂಟ್‌ ಬಗೆಗೂ ಮಾಹಿತಿ ನೀಡಲಿದೆ ಮಹಾರಾಷ್ಟ್ರ

ಅನೇಕ ಬದಲಾವಣೆಗಳತ್ತ ಮುಖ ಮಾಡುತ್ತಿರುವ ಇಂದಿನ ಶತಮಾನದಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಸಲಿಂಗ ಪೋಷಕರು ಹಾಗೂ ಲಿವ್ ಇನ್ ರಿಲೇಷನ್‌ ಕುಟುಂಬಗಳ ಬಗೆಗೆ ಪಠ್ಯಕ್ರಮವನ್ನು ತರಲು ಮಹಾರಾಷ್ಟ್ರ ಮುಂದಾಗಿದೆ. ಅಷ್ಟೇ ಅಲ್ಲದೇ ವಿಭಕ್ತ, ಅವಿಭಕ್ತ ಕುಟುಂಬಗಳ ಮಾಹಿತಿ ಜೊತೆಗೆ ಇತ್ಯಾದಿಗಳ ಬಗ್ಗೆಯೂ ಪಠ್ಯದಲ್ಲಿ ಮಾಹಿತಿ ಅಳವಡಿಸಲಾಗಿದೆ.

ಪಠ್ಯದಲ್ಲಿ ತೃತೀಯ ಸಲಿಂಗಿಗಳ ಮಾಹಿತಿಯ ಅಳವಡಿಕೆಗೆ ಮುಂದಾದ ಮಹಾರಾಷ್ಟ್ರ

ಅದೇ ರೀತಿಯಾಗಿ 11ನೇ ತರಗತಿಯ ಸಮಾಜಶಾಸ್ತ್ರ ಪಠ್ಯಪುಸ್ತಕದಲ್ಲಿ ಲಿವ್‌ಇನ್‌, ಸಿಂಗಲ್‌ ಪೇರೆಂಟ್‌, ಸಲಿಂಗಿ ಕುಟುಂಬಗಳು ವ್ಯವಸ್ಥೆಯ ಭಾಗವೇ ಆಗಿರುತ್ತದೆ ಹಾಗಾಗಿ ವಿದ್ಯಾರ್ಥಿಗಳಿಗೂ ಈ ಬಗೆಗೆ ತಿಳಿಸುವ ಅಗತ್ಯವಿದೆ. ವಿದ್ಯಾರ್ಥಿಗಳು ಕೇವಲ ಪುಸ್ತಕಗಳಲ್ಲಿನ ಪಾಠಗಳನ್ನು ತಿಳಿಯುವುದು ಮಾತ್ರವಲ್ಲದೇ ಸಮಾಜದ ಆಗುಹೋಗುಗಳ ಬಗೆಗೂ ಹೆಚ್ಚು ತಿಳಿಯುವ ಅಗತ್ಯವಿದೆ. ಹಾಗಾಗಿ ಈ ವಿಚಾರಗಳನ್ನು ಪಠ್ಯದಲ್ಲಿ ಅಳವಡಿಸುವ ಉದ್ದೇಶವನ್ನು ಹೊಂದಿರುವುದಾಗಿ ಪಠ್ಯಪುಸ್ತಕ ರಚನೆ ಸಮಿತಿ ಅಧ್ಯಕ್ಷರಾದ ವೈಶಾಲಿ ದಿವಾಕರ್‌ ಅವರು ಸಮರ್ಥಿಸಿಕೊಂಡಿದ್ದಾರೆ.

ಈ ಹಿಂದೆ ಪಠ್ಯಕ್ರಮಗಳಲ್ಲಿ ಸಾಮಾನ್ಯವಾಗಿ ವಿಭಕ್ತ ಮತ್ತು ಅವಿಭಕ್ತ ಕುಟುಂಬಗಳ ಬಗೆಗೆ ಮಾಹಿತಿಗಳನ್ನು ನೀಡಲಾಗಿತ್ತು. ಆದರೆ ಇದೀಗ ಕಾಲಮಾನಕ್ಕೆ ತಕ್ಕಂತೆ ಪೋಷಕರಲ್ಲಿ ಒಬ್ಬರು ಮಾತ್ರ ಇರುವವರು, ಸಲಿಂಗ ಪೋಷಕರು ಹಾಗೂ ಸ್ಟೆಪ್‌ ಪೇರೆಂಟ್ಸ್‌ ಕುಟುಂಬಗಳ ಬಗೆಯೂ ತಿಳಿಸಲಿದೆ.

ಯುರೋಪ್‌ ದೇಶಗಳು ಸೇರಿದಂತೆ ಭಾರತದ ಅನೇಕ ಕಡೆಗಳಲ್ಲಿ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿರುವ ಅನೇಕ ಮಂದಿಗಳನ್ನು ನಾವು ನೋಡುತಲೇ ಇದ್ದೇವೆ. ಹಾಗಾಗಿ ಇಂದಿನ ಯುವಜನರು ಪಾಲಿಸುವ ಈ ಸಂಸ್ಕೃತಿಯ ಬಗೆಗೂ ವಿದ್ಯಾರ್ಥಿಗಳಿಗೆ ತಿಳಿಸಲು ಪಠ್ಯದಲ್ಲಿ ಮಾಹಿತಿಯನ್ನು ಅಳವಡಿಸಲಾಗಿದೆ ಎಂದು ಹೇಳಲಾಗಿದೆ.

ಸಮಾಜದಲ್ಲಿ ಆಗುವ ಅನೇಕ ಬದಲಾವಣೆಗಳ ಬಗೆಗೆ ಮಕ್ಕಳಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ಅವರಿಗೆ ಮಾಹಿತಿ ನೀಡಿದ್ದಲ್ಲಿ ಅವರೂ ಕೂಡ ಸಮಾಜದ ದೃಷ್ಟಿಕೋನಗಳನ್ನು ತಿಳಿಯುತ್ತಾರೆ ಎಂದು ಎಂದು ವಿಜಿ ವೇಜ್ ಕಾಲೇಜಿನ ಸಮಾಜಶಾಸ್ತ್ರದ ಮುಖ್ಯಸ್ಥೆ ತ್ರಿಪ್ತಿ ವೈಟಿ ಹೇಳಿದ್ದಾರೆ.

ಇಂದಿನ ಕಾಲಕ್ಕೆ ತಕ್ಕಂತೆ ಪಠ್ಯವನ್ನು ಅಳವಡಿಸುವ ಅಗತ್ಯ ನಮ್ಮ ಮುಂದೆ ಇದೆ. ವಿದ್ಯಾರ್ಥಿಗಳು ಈ ಬಗೆಗೆ ತಿಳಿಯುವ ಅಗತ್ಯ ಹೆಚ್ಚಿರುವುದರಿಂದ ಪಠ್ಯವನ್ನು ಅಳವಡಿಸಲಾಗುವುದು ಎಂದು
ಬಾಲಭಾರತಿ ಮುಖ್ಯ ಸಮನ್ವಯ ಅಧಿಕಾರಿ ಪ್ರಾಚಿ ಸಾಥೆ ಹೇಳಿದ್ದಾರೆ.

For Quick Alerts
ALLOW NOTIFICATIONS  
For Daily Alerts

English summary
Maharastra going to include the information regarding same parent and single parent families in text books
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X