ಬ್ರಿಟನ್ ವಿವಿಗಳ ಮೇಲೆ ದಕ್ಷಿಣ ಭಾರತ ವಿದ್ಯಾರ್ಥಿಗಳ ಒಲವು

ಲಂಡನ್ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಲು ದಕ್ಷಿಣ ಭಾರತದ ಮಂದಿ ಹೆಚ್ಚು ಆಸಕ್ತಿ ತೋರಿದ್ದಾರೆ. ಲಂಡನ್ ವಿವಿಗಳಲ್ಲಿ ಆಧ್ಯಯನಕ್ಕೆ ತೆರಳಲು ವೀಸಾಗೆ ಅರ್ಜಿ ಸಲ್ಲಿಸುವವರಲ್ಲಿ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ.

2016 ರಲ್ಲಿ ಬ್ರಿಟನ್ ಗೆ ಹೋಗುವವರ ಸಂಖ್ಯೆ ಶೇ. 6 ರಷ್ಟಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ 9ರಷ್ಟು ಹೆಚ್ಚಳ ಆಗಿದೆ ಎಂದು ಚೆನ್ನೈನಲ್ಲಿರುವ ಬ್ರಿಟನ್ ರಾಯಭಾರ ಕಚೇರಿಯ ಉಪ ರಾಯಭಾರಿ ಭರತ್ ಜೋಷಿ ತಿಳಿಸಿದ್ದಾರೆ.

ದಕ್ಷಿಣ ಭಾರತದ ವಿದ್ಯಾರ್ಥಿಗಳ ಬ್ರಿಟನ್ ಒಲವು

 

ಭಾರತದ ವಿದ್ಯಾರ್ಥಿಗಳು ಬ್ರಿಟನ್ ದೇಸದಲ್ಲಿರುವ ವ್ಯವಸ್ಥೆಯನ್ನು ಹೆಚ್ಚು ಅಭ್ಯಾಸ ಮಾಡಲು ಬಯಸುತ್ತಾರೆ. ಅಲ್ಲದೇ ಬ್ರಿಟನ್ ವಿಶ್ವವಿದ್ಯಾಲಯಗಳು ಭಾರತದ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಸೇವೆ ನೀಡುತ್ತಿವೆ ಎಂದು ಅವರು ಹೇಳಿದ್ದಾರೆ.

ಭಾರತೀಯ ರೈಲ್ವೆ ಇಲಾಖೆಯಲ್ಲಿ ಶೀಘ್ರದಲ್ಲೇ ಒಂದು ಲಕ್ಷ ಉದ್ಯೋಗ

ಭಾರತದಲ್ಲಿ ಅದರಲ್ಲೂ ದಕ್ಷಿಣ ಭಾರತದ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣದ ವಿದ್ಯಾರ್ಥಿಗಳಿಂದ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಪ್ರವಾಸಿ ವೀಸಾ ಕೋರಿ ಶೇ 80ರಷ್ಟು ಹಾಗೂ ಉದ್ಯೋಗ ವೀಸಾ ಕೋರಿ ಶೇ 20ರಷ್ಟು ಅರ್ಜಿಗಳು ಸಲ್ಲಿಕೆಯಾಗುತ್ತವೆ.

ವಿಶ್ವವಿದ್ಯಾಲಯಗಳಿಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಲ್ಲಿ ಸುಧಾರಣೆಯಾಗಿದೆ. ಭಾರತೀಯರಿಗೆ ನೀಡಲಾಗುತ್ತಿರುವ ಪ್ರವಾಸಿ ವೀಸಾಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ ಎನ್ನುವ ಮಾಹಿತಿಯನ್ನು ಅವರು ನೀಡಿದ್ದಾರೆ.

2017ರ ಮಾರ್ಚ್‌ ಕೊನೆಯಲ್ಲಿ ಬಿಡುಗಡೆಯಾಗಿರುವ ಮಾಹಿತಿ ಪ್ರಕಾರ 11,700 ವಿದ್ಯಾರ್ಥಿ ವೀಸಾ ಹಾಗೂ 5,000 ಅಲ್ಪಾವಧಿ ಅಧ್ಯಯನ ವೀಸಾ ನೀಡಲಾಗಿದೆ. ಇದೇ ಅವಧಿಯಲ್ಲಿ 60,000 ಉದ್ಯೋಗ ವೀಸಾಗಳನ್ನು ಜಾರಿ ಮಾಡಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಹೆಚ್ಚಿನ ಭಾರತೀಯರು ಬ್ರಿಟನ್ ನತ್ತ ಒಲವು ತೋರಿರುವುದು ಎರಡೂ ದೇಶಗಳ ಬಾಂಧವ್ಯ ವೃದ್ಧಿಯ ಮೇಲೂ ಉತ್ತಮ ಪರಿಣಾಮ ಬೀರಲಿದೆ. ಈಗಾಗಲೇ ಭಾರತ ಮತ್ತು ಬ್ರಿಟನ್ ನಡುವೆ ಎಲ್ಲಾ ವ್ಯವಹಾರಗಳು ಮುಕ್ತವಾಗಿವೆ. ಭಾರತ ಪ್ರಮುಖ ದೇಶವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ಬ್ರಿಟನ್ ಗೆ ಭೇಟಿ ನೀಡುತ್ತಿರುವುದು ಉತ್ತಮ ವಿಚಾರವಾಗಿದೆ ಎಂದು ಅವರು ಹೇಳಿದ್ದಾರೆ.

ನೈರುತ್ಯ ರೈಲ್ವೆ: 136 ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ

For Quick Alerts
ALLOW NOTIFICATIONS  
For Daily Alerts

English summary
UK Universities has witnessed a growth of nine per cent last year in number of student application from South India compared to previous years, a top British envoy said.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X