ಕೆ-ಸೆಟ್ ಪರೀಕ್ಷೆ ಫಲಿತಾಂಶ ಪ್ರಕಟ

ಮೈಸೂರು ವಿಶ್ವವಿದ್ಯಾಲಯ ನಡೆಸಿದ್ದ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆಯಲ್ಲಿ ಸುಮಾರು 60 ಸಾವಿರಕ್ಕೂ ಹೆಚ್ಚಿನ ಅಭ್ಯರ್ಥಿಗಳು ಡಿಸೆಂಬರ್ ತಿಂಗಳಲ್ಲಿ ಪರೀಕ್ಷೆ ಬರೆದಿದ್ದು, ಅವರಲ್ಲಿ 4,004 ಅಭ್ಯರ್ಥಿಗಳು ತೇರ್ಗಡೆಹೊಂದಿದ್ದಾರೆ.

ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆ (ಕೆ-ಸೆಟ್‌) ಫಲಿತಾಂಶ ಪ್ರಕಟಗೊಂಡಿದ್ದು ಶೇ.7 ರಷ್ಟು ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ.

ಮೈಸೂರು ವಿಶ್ವವಿದ್ಯಾಲಯ ನಡೆಸಿದ್ದ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆಯಲ್ಲಿ ಸುಮಾರು 60 ಸಾವಿರಕ್ಕೂ ಹೆಚ್ಚಿನ ಅಭ್ಯರ್ಥಿಗಳು ಡಿಸೆಂಬರ್ ತಿಂಗಳಲ್ಲಿ ಪರೀಕ್ಷೆ ಬರೆದಿದ್ದು, ಅವರಲ್ಲಿ 4,004 ಅಭ್ಯರ್ಥಿಗಳು ತೇರ್ಗಡೆಹೊಂದಿದ್ದಾರೆ.

ಕೆ-ಸೆಟ್ ಪರೀಕ್ಷೆಯಲ್ಲಿ 4,004 ಅಭ್ಯರ್ಥಿಗಳು ಉಪನ್ಯಾಸಕರಾಗಲು ಅರ್ಹತೆ ಪಡೆದಿದ್ದಾರೆ. ಕೆ-ಸೆಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಯು ಕರ್ನಾಟಕದಲ್ಲಿ ಮಾತ್ರ ಉಪನ್ಯಾಸಕ ಹುದ್ದೆಗೆ ನೇಮಕಗೊಳ್ಳಲು ಅರ್ಹರಾಗಿರುತ್ತಾರೆ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದವರಿಗೆ ಮೈಸೂರು ವಿಶ್ವವಿದ್ಯಾಲಯವು ಕೆ-ಸೆಟ್‌ ಅರ್ಹತಾ ಪತ್ರ ನೀಡುತ್ತದೆ.

ವಿವಿಧ 39 ವಿಷಯಗಳಿಗೆ ಬೆಂಗಳೂರು, ಬೆಳಗಾವಿ, ಬಳ್ಳಾರಿ, ವಿಜಯಪುರ, ದಾವಣಗೆರೆ, ಧಾರವಾಡ, ಕಲಬುರ್ಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು ಸೇರಿ ಒಟ್ಟು ಹನ್ನೊಂದು ನೋಡಲ್ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು.

ಫಲಿತಾಂಶ ಪ್ರಕಟ

ಫಲಿತಾಂಶ ಪಡೆಯುವ ವಿಧಾನ

  • ಮೈಸೂರು ವಿಶ್ವವಿದ್ಯಾಲಯದ ಅಧಿಕೃತ ವೆಬ್ಸೈಟ್ ವಿಳಾಸ ಅಥವಾ ಕೆ-ಸೆಟ್ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ
  • ಬಲಭಾಗದಲ್ಲಿ ಕಾಣುವ ರಿಸಲ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಕೆ-ಸೆಟ್ 2016 ರಿಸಲ್ಟ್ ಬಟನ್ ಕ್ಲಿಕ್ ಮಾಡಿ
  • ನಿಮ್ಮ ನೋಂದಣಿ ಸಂಖ್ಯೆ ನಮೂದಿಸಿ
  • ರಿಸಲ್ಟ್ ಅನ್ನು ಪ್ರಿಂಟ್ ತೆಗೆದುಕೊಳ್ಳಿ

ಕೆ-ಸೆಟ್ ವೆಬ್ಸೈಟ್ ವಿಳಾಸ kset.uni-mysore.ac.in

ಕೀ ಆನ್ಸರ್ಸ್ ಮತ್ತು ಕಟ್ಆಫ್

  • ಕೆ-ಸೆಟ್ ಪರೀಕ್ಷೆಗೆ ಸಂಬಂಧಿಸಿದಂತೆ ಫೆಬ್ರವರು 28 , 2017 ರಂದು ಕೆ-ಸೆಟ್ ಅಧಿಕೃತ ವೆಬ್ಸೈಟ್ ವಿಳಾಸದಲ್ಲಿ ಸಾಮಾನ್ಯ ಮತ್ತು ವಿಷಯವಾರು ಪತ್ರಿಕೆಗಳ ಕೀ ಆನ್ಸರ್ಸ್ ಗಳನ್ನು ಪ್ರಕಟಿಸಲಾಗಿತ್ತು.
  • ಮಾರ್ಚ್ ತಿಂಗಳಲ್ಲಿ ಕೆ ಸೆಟ್ ಪರೀಕ್ಷೆಗೆ ಸಂಬಂಧಿಸಿದಂತೆ ಮೈಸೂರು ವಿಶ್ವವಿದ್ಯಾಲಯವು ಕಟ್ಆಫ್ ಪರ್ಸೆಂಟೇಜ್ ಬಿಡುಗಡೆಗೊಳಿಸಿತ್ತು.

ಕಟ್ ಆಫ್ ಪರ್ಸೆಂಟೇಜ್ 39 ವಿಷಯಗಳಿಗೆ ಸಂಬಂಧಿಸಿದಂತೆ ಯುಜಿಸಿ ನಿಯಮಾನುವಳಿಯಂತೆ ವಿಷಯವಾರು ಮತ್ತು ಪ್ರವರ್ಗವಾರು ಮೆರಿಟ್ ಪಟ್ಟಿಯನ್ನು ಪಿಡಿಎಫ್ ಮಾದರಿಯಲ್ಲಿ ಪ್ರಕಟಿಸಲಾಗಿತ್ತು.

ಕಟ್ ಆಫ್ ಪರ್ಸೆಂಟೇಜ್ ವೀಕ್ಷಿಸುವ ವಿಧಾನ

  • ಮೈಸೂರು ವಿಶ್ವವಿದ್ಯಾನಿಲಯದ ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ
  • ಬಲಭಾಗದಲ್ಲಿ ಕಾಣುವ "KSET-2016 EXAMINATION CUTOFF % ANNOUNCED " ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ ಪಿಡಿಎಫ್ ನಮೂನೆಯನ್ನು ಸೇವ್ ಮಾಡಿ ಅಥವಾ ಡೌನ್ಲೋಡ್ ಮಾಡಿಕೊಳ್ಳಿ

ಕೆ ಸೆಟ್ ಪರೀಕ್ಷೆ

ಕರ್ನಾಟಕ ಉಪನ್ಯಾಸಕರ ಅರ್ಹತಾ ಪರೀಕ್ಷೆ (ಕೆ-ಸೆಟ್) ರಾಜ್ಯದ ವಿಶ್ವವಿದ್ಯಾಲಯಗಳಿಂದ ನಡೆಸಲ್ಪಡುವುದು. ಯುಜಿಸಿ ಅಥವಾ ಯುಜಿಸಿ-ಸಿಎಸ್ಐಆರ್ /ಸಿಬಿಎಸ್ಇ ನಡೆಸುವ ಈ ಅರ್ಹತಾ ಪರೀಕ್ಷೆಯ ಹೊರತಾಗಿ, ರಾಜ್ಯ ಮಟ್ಟದಲ್ಲಿ ನೆಟ್ ಪರೀಕ್ಷೆ ಮಾದರಿಯಲ್ಲಿ ರಾಜ್ಯ ಮಟ್ಟದ ಅರ್ಹತಾ ಪರೀಕ್ಷೆಯನ್ನು (SET) ನಡೆಸಲೂ ಸಹ ಯುಜಿಸಿ ಅವಕಾಶ ಮಾಡಿಕೊಟ್ಟಿದೆ.

ರಾಷ್ಟ್ರಮಟ್ಟದಲ್ಲಿ ಉಪನ್ಯಾಸಕ ಅರ್ಹತಾ ಪರೀಕ್ಷೆಗಳು ವರ್ಷಕ್ಕೆರಡು ಬಾರಿ ಅತ್ಯಂತ ಸುವ್ಯವಸ್ಥಿತವಾಗಿ ಕ್ರಮ ತಪ್ಪದಂತೆ ನಡೆದುಕೊಂಡು ಬಂದಿವೆ. ವರ್ಷದಿಂದ ವರ್ಷಕ್ಕೆ ಪಾರದರ್ಶಕತೆಯನ್ನು ಹೆಚ್ಚಿಸಿಕೊಳ್ಳುತ್ತ, ಮೌಲ್ಯವರ್ಧಿಸಿಕೊಂಡು ಈ ಪರೀಕ್ಷೆಗಳು ಸಾಗುತ್ತಿವೆ. ಆದರೂ ರಾಷ್ಟ್ರಮಟ್ಟದ ಪರೀಕ್ಷೆಯಾಗಿರುವುದರಿಂದ ಉತ್ತೀರ್ಣತಾ ಪ್ರಮಾಣ ಕಡಿಮೆಯಾಗಿರುತ್ತದೆ. ಹಾಗಾಗಿ ರಾಜ್ಯಗಳಿಗೆ ತಮ್ಮದೇ ಆದ ರಾಜ್ಯಮಟ್ಟದ ಅರ್ಹತಾ ಪರೀಕ್ಷೆಗಳನ್ನು ನಡೆಸಲು ಯುಜಿಸಿ ಅನುವು ಮಾಡಿಕೊಟ್ಟಿದೆ.

2010 ನೇ ಇಸವಿಯಿಂದ ಮೈಸೂರು ವಿಶ್ವವಿದ್ಯಾಲಯವು ಪರೀಕ್ಷೆಯನ್ನು ಆಯೋಜಿಸುತ್ತಿದ್ದು ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಳ್ಳುತ್ತಾರೆ. ಪರೀಕ್ಷಾ ಕ್ರಮ ಸಿಬಿಎಸ್ಇ /ಯುಜಿಸಿ ನಡೆಸುವ ನೆಟ್ ಪರೀಕ್ಷೆಗಳಂತೆ ಕೆ-ಸೆಟ್ ಪರೀಕ್ಷೆ ಕೂಡ ಬಹು ಆಯ್ಕೆಯ ಪ್ರಶ್ನಾಪತ್ರಿಕೆಯಾಗಿದ್ದು ಮೂರು ಪ್ರಶ್ನೆಪತ್ರಿಕೆಗಳನ್ನು ಒಳಗೊಂಡಿರುತ್ತದೆ.

ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌ kset.uni-mysore.ac.in ಸಂಪರ್ಕಿಸಬಹುದು

More News  

For Quick Alerts
ALLOW NOTIFICATIONS  
For Daily Alerts

English summary
kset 2016 results announced. candidates can view and download the results in its official website
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+