ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ನೇಮಕಾತಿಯ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳ ಪ್ರಿಲಿಮಿನರಿ ಪರೀಕ್ಷಾ ಫಲಿತಾಂಶ ಪ್ರಕಟ. ಪರೀಕ್ಷೆ ಬರೆದ ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಬಹುದು.

ನಬಾರ್ಡ್ ನಲ್ಲಿ ಖಾಲಿ ಇರುವ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಭರ್ತಿ ಮಾಡಲಾಗುವುದು. ನೇಮಕಾತಿ ಪ್ರಕ್ರಿಯೆಯನುಸಾರ ಫೆಬ್ರವರಿ 25,2020ರಂದು ಪ್ರಿಲಿಮಿನರಿ ಪರೀಕ್ಷೆಯನ್ನು ನಡೆಸಲಾಗಿದ್ದು, ಇದೀಗ ಪರೀಕ್ಷಾ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಮುಂದಿನ ಹಂತಕ್ಕೆ ಅರ್ಹರಾಗಿರುತ್ತಾರೆ.
ಫಲಿತಾಂಶ ವೀಕ್ಷಿಸುವುದು ಹೇಗೆ?:
ಸ್ಟೆಪ್ 1: ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್ https://www.nabard.org/ ಗೆ ಭೇಟಿ ನೀಡಿ.
ಸ್ಟೆಪ್ 2: ನಂತರ ಹೋಂ ಪೇಜ್‌ನಲ್ಲಿ ಲಭ್ಯವಿರುವ Assistant Manger In Grade A Results ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ಹೊಸ ಪುಟಕ್ಕೆ ಹೋಗುವಿರಿ ಅಲ್ಲಿ Assistant Manager in Grade A Results ಕೆಳಗಿರುವ Pdf ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 4: ಅಭ್ಯರ್ಥಿಗಳು ಅಲ್ಲಿ ತಮ್ಮ ರೋಲ್ ನಂಬರ್ ಎಂದು ಚೆಕ್ ಮಾಡಿಕೊಳ್ಳುವ ಮೂಲಕ ಫಲಿತಾಂಶ ವೀಕ್ಷಿಸಿ.
ಅಭ್ಯರ್ಥಿಗಳು ನೇರವಾಗಿ ಫಲಿತಾಂಶ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications











