ದೇಶದ 20 ವಿಶ್ವವಿದ್ಯಾಲಯಗಳಿಗೆ 10 ಸಾವಿರ ಕೋಟಿ ಅನುದಾನ

ಅತ್ಯುತ್ತಮ ಶಿಕ್ಷಣ ಒದಗಿಸುವ ದಿಸೆಯಿಂದ ದೇಶದ 10 ಖಾಸಗಿ ಹಾಗೂ 10 ಸರ್ಕಾರಿ ವಿಶ್ವವಿದ್ಯಾಲಯಗಳಿಗೆ ಐದು ವರ್ಷಗಳ ಕಾಲ 10 ಸಾವಿರ ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು.

ಭಾರತೀಯ ವಿಶ್ವವಿದ್ಯಾಲಯಗಳು ವಿಶ್ವದರ್ಜೆಯ ಶಿಕ್ಷಣ ವ್ಯವಸ್ಥೆಯನ್ನು ಹೊಂದಲು ಸಹಕಾರಿಯಾಗುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ 10 ಸಾವಿರ ಕೋಟಿ ರೂ. ನೆರವು ಘೋಷಿಸಿದ್ದಾರೆ.

ವಿಶ್ವದ 500 ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಭಾರತದ ಯಾವೊಂದು ವಿಶ್ವವಿದ್ಯಾಲಯವೂ ಸ್ಥಾನ ಪಡೆದಿಲ್ಲ. ಇದನ್ನು ಗಮನದಲ್ಲಿರಿಸಿಕೊಂಡು ಅತ್ಯುತ್ತಮ ಶಿಕ್ಷಣ ಒದಗಿಸುವ ದಿಸೆಯಿಂದ ದೇಶದ 10 ಖಾಸಗಿ ಹಾಗೂ 10 ಸರ್ಕಾರಿ ವಿಶ್ವವಿದ್ಯಾಲಯಗಳಿಗೆ ಐದು ವರ್ಷಗಳ ಕಾಲ 10 ಸಾವಿರ ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು.

20 ವಿವಿಗಳಿಗೆ 10 ಸಾವಿರ ಕೋಟಿ

ಶನಿವಾರ ಪಾಟ್ನಾ ವಿಶ್ವವಿದ್ಯಾಲಯದ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಮೂಲಕ ಅವುಗಳನ್ನು ವಿಶ್ವದ ಅತ್ಯುತ್ತಮ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವಂತೆ ಮಾಡಲಾಗುವುದು. ಇದು ಕೇಂದ್ರೀಯ ವಿಶ್ವವಿದ್ಯಾಲಯದ ಸ್ಥಾನಮಾನಕ್ಕೂ ಮಿಗಿಲಾದುದು ಎಂದು ಹೇಳಿದರು.

ಪಾಟ್ನಾ ವಿಶ್ವವಿದ್ಯಾಲಯವು ಶತಮಾನದಿಂದ ಜ್ಞಾನದ ದಾಹ ನೀಗಿಸುತ್ತಿದ್ದು ಭಾರತಕ್ಕೆ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡಿದೆ, ಪ್ರತಿವರ್ಷವೂ ಐಎಎಸ್ ಟಾಪರ್​ಗಳ ಪಟ್ಟಿಯಲ್ಲಿ ಈ ವಿಶ್ವವಿದ್ಯಾಲಯದ ಪ್ರಭಾವ ಎದ್ದುಕಾಣುತ್ತದೆ.

ಪಾಟ್ನಾ ವಿಶ್ವವಿದ್ಯಾಲಯದಲ್ಲಿ ಕಲಿತು ಐಎಎಸ್ ಅಧಿಕಾರಿಯಾದವರು ಪ್ರತಿ ರಾಜ್ಯದಲ್ಲಿ ಕಾಣಸಿಗುತ್ತಾರೆ. ಇಲ್ಲಿ ಕಲಿತು ಐಎಎಸ್ ಆದವರು ಪ್ರತಿ ರಾಜ್ಯದ ಪ್ರಮುಖ ಐಎಎಸ್ ಅಧಿಕಾರಿಗಳ ಪಟ್ಟಿಯಲ್ಲಿ ಒಬ್ಬರಿರುತ್ತಾರೆ. ಇಂಥ ಹಲವು ಪ್ರತಿಭಾವಂತರ ಜತೆ ಕೆಲಸ ಮಾಡಲು ನನಗೆ ಅವಕಾಶ ಸಿಕ್ಕಿದೆ ಎಂದು ಪ್ರಧಾನಿ ಹೇಳಿದರು.

ಐಐಎಂಗಳನ್ನು ಸರ್ಕಾರದ ಕಠಿಣ ನಿಯಮಗಳ ಸಂಕೋಲೆಯಿಂದ ಬಿಡುಗಡೆ ಮಾಡಲು ಕ್ರಮಕೈಗೊಳ್ಳಲಾಗಿದ್ದು, ಇದೇ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳನ್ನು ರೂಪಿಸಲಾಗುವುದು ಎಂದು ಅವರು ವಿವರಿಸಿದರು.

More News  

For Quick Alerts
ALLOW NOTIFICATIONS  
For Daily Alerts

English summary
PM Narendra modi announced to provide an assistance of Rs 10,000 crore to 10 private universities and an equal number of government ones for a period of five years.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+