9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಎನ್‌ಸಿಇಆರ್‌ಟಿ ಸಿದ್ದಪಡಿಸಿರುವ ಶೈಕ್ಷಣಿಕ ಪರ್ಯಾಯ ಕ್ಯಾಲೆಂಡರ್ ಅನ್ನು ಸೆಪ್ಟೆಂಬರ್ 15,2020ರಂದು ಕೇಂದ್ರ ಶಿಕ್ಷಣ ಸಚಿವ ಡಾ. ರಮೇಶ್ ಪೋಖ್ರಿಯಾಲ್ ನಿಶಾಂಕ್ ಪ್ರಕಟಿಸಿದ್ದಾರೆ.
8 ವಾರಗಳಿಗೆ ಪ್ರಕಟಿಸಿದ ಪರ್ಯಾಯ ಕ್ಯಾಲೆಂಡರ್ ಇದಾಗಿದೆ.

ಎನ್‌ಸಿಇಆರ್‌ಟಿ 9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಅಭಿವೃದ್ಧಿ ಪಡಿಸಲಾದ ಪರ್ಯಾಯ ಕ್ಯಾಲೆಂಡರ್ ಇದಾಗಿದ್ದು, ವಿದ್ಯಾರ್ಥಿಗಳು ಮನೆಯಿಂದ ಕಲಿಯಲು ತಂತ್ರಜ್ಞಾನ ಮತ್ತು ಸಾಮಾಜಿಕ ಮಾಧ್ಯಮಗಳನ್ನು ಬಳಸುವ ಉದ್ದೇಶವನ್ನು ಹೊಂದಿದೆ.
ಶಿಕ್ಷಣ ಇಲಾಖೆಯು ಅಧಿಕೃತ ಟ್ವಿಟ್ಟರ್ ಖಾತೆ ಮೂಲಕ ಪರ್ಯಾಯ ಶೈಕ್ಷಣಿಕ ಕ್ಯಾಲೆಂಡರ್ ಬಿಡುಗಡೆ ಮಾಡಿರುವ ಕುರಿತು ಮಾಹಿತಿ ತಿಳಿಸಿದೆ. ಈ ಹಿಂದೆ ಸೆಕೆಂಡರಿ ಮತ್ತು ಹೈಯರ್ ಸೆಕೆಂಡರಿ ಹಂತಗಳಿಗೆ 04 ವಾರಗಳ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಲಾಗಿತ್ತು. ಪ್ರಸ್ತುತ 12 ವಾರಗಳಿಗೆ ಡಿಸೈನ್ ಮಾಡಲಾಗಿದೆ.
ಮಿನಿಸ್ಟ್ರಿ ಆಫ್ ಎಜುಕೇಷನ್ ಪ್ರಕಾರ, ಪ್ರಸ್ತುತ ಬಿಡುಗಡೆ ಮಾಡಲಾದ ಶೈಕ್ಷಣಿಕ ಪರ್ಯಾಯ ಕ್ಯಾಲೆಂಡರ್ ನಿಂದ ವಿದ್ಯಾರ್ಥಿಗಳು, ಶಿಕ್ಷಕರು, ಶಾಲಾ ಪ್ರಾಂಶುಪಾಲರು, ಪೋಷಕರಿಗೆ ಕೋವಿಡ್-19 ವಿರುದ್ಧ ಹೋರಾಡುವ ಸಕಾರಾತ್ಮಕ ಭಾವನೆಗಳನ್ನು ಮೂಡಿಸುವ ಉದ್ದೇಶ ಹೊಂದಿದೆ. ಕ್ಯಾಲೆಂಡರ್ ಪ್ರತಿವಾರದ ಕಲಿಕಾ ಚಟುವಟಿಕೆಗಳು ಮತ್ತು ಚಾಲೆಂಜ್‌ಗಳನ್ನು ಪಠ್ಯಕ್ರಮದ ಆಧಾರದ ಮೇಲೆ ನಿರ್ಮಿಸಲಾಗಿದೆ.
ವಿದ್ಯಾರ್ಥಿಗಳು ಮತ್ತು ಪೋಷಕರು ಆನ್‌ಲೈನ್ ಕಲಿಕೆಗೆ ಸಹಕಾರ ನೀಡಬೇಕು. ತಂತ್ರಜ್ಞಾನ ಮತ್ತು ಸಾಮಾಜಿಕ ಮಾಧ್ಯಮಗಳನ್ನು ಬಳಸಿ ಮಕ್ಕಳ ಕಲಿಕೆಗೆ ಸಹಾಯ ಮಾಡಬೇಕು ಎಂದು ಶಿಕ್ಷಣ ಸಚಿವರು ಮನವಿ ಮಾಡಿದ್ದಾರೆ.


Click it and Unblock the Notifications











