ಎನ್‌ಸಿಇಆರ್‌ಟಿ: 10ನೇ ತರಗತಿ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಅಳೆಯಲು ಪರೀಕ್ಷೆ

ಇದೆ ಮೊದಲ ಬಾರಿಗೆ ಹತ್ತನೇ ತರಗತಿ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಅಳೆಯಲು ಪರೀಕ್ಷೆ ನಡೆಸಲಾಗುತ್ತಿದ್ದು, 36 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ 640 ಜಿಲ್ಲೆಗಳಲ್ಲಿ ಪರೀಕ್ಷೆ ನಡೆಯಲಿದೆ.

ಹತ್ತನೇ ತರಗತಿ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು ಅಳೆಯುವುದಕ್ಕಾಗಿ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಫೆಬ್ರವರಿ 5 ರಂದು ದೇಶದಾದ್ಯಂತ ಪರೀಕ್ಷೆ ನಡೆಸಲಿದೆ.

ನೀಟ್‌ 2018: ದೇಶಾದ್ಯಂತ ಒಂದೇ ಮಾದರಿಯ ಪ್ರಶ್ನೆ ಪತ್ರಿಕೆನೀಟ್‌ 2018: ದೇಶಾದ್ಯಂತ ಒಂದೇ ಮಾದರಿಯ ಪ್ರಶ್ನೆ ಪತ್ರಿಕೆ

ಇದೆ ಮೊದಲ ಬಾರಿಗೆ ಹತ್ತನೇ ತರಗತಿ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಅಳೆಯಲು ಪರೀಕ್ಷೆ ನಡೆಸಲಾಗುತ್ತಿದ್ದು,
36 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ 640 ಜಿಲ್ಲೆಗಳಲ್ಲಿ ಪರೀಕ್ಷೆ ನಡೆಯಲಿದೆ.

ಕೆಪಿಜೆಪಿ ಸಂಭಾವ್ಯ ಪ್ರಣಾಳಿಕೆ(ಭಾಗ 3): ಸೂಪರ್ ಶಿಕ್ಷಣದ ಬಗ್ಗೆ ಉಪೇಂದ್ರ ಸೂಪರ್ ಐಡಿಯಾ ಕೆಪಿಜೆಪಿ ಸಂಭಾವ್ಯ ಪ್ರಣಾಳಿಕೆ(ಭಾಗ 3): ಸೂಪರ್ ಶಿಕ್ಷಣದ ಬಗ್ಗೆ ಉಪೇಂದ್ರ ಸೂಪರ್ ಐಡಿಯಾ

ಎನ್‌ಸಿಇಆರ್‌ಟಿ ಪರೀಕ್ಷೆ

ರಾಷ್ಟ್ರೀಯ ಸಾಧನೆ ಸಮೀಕ್ಷೆಯ (ಎನ್ಎಎಸ್) ಅಡಿಯಲ್ಲಿ ನಡೆಸಲಾಗುತ್ತಿರುವ ಈ ಪರೀಕ್ಷೆಯಲ್ಲಿ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ) ಮತ್ತು ಕೌನ್ಸಿಲ್ ಫಾರ್ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (ಸಿಐಎಸ್‌ಸಿಇ) ಸೇರಿದಂತೆ ದೇಶಾದ್ಯಂತ ಸುಮಾರು 30 ಶಾಲಾ ಶಿಕ್ಷಣ ಮಂಡಳಿಗಳ ವ್ಯಾಪ್ತಿಯಲ್ಲಿ ಬರುವ 23 ಲಕ್ಷ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.

ಒಟ್ಟು 51,200 ಮಾದರಿ ಶಾಲೆಗಳನ್ನು ಈ ಪರೀಕ್ಷೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಪ್ರತಿ ಮಾದರಿ (ಸ್ಯಾಂಪಲ್) ಶಾಲೆಯ 45 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಈ ಪರೀಕ್ಷೆಯು 90 ನಿಮಿಷ ಅವಧಿಯದಾಗಿರುತ್ತದೆ.

ಮಂಡಳಿಯು ಎರಡು ವರ್ಷಗಳಿಂದ ಈ ಸಮೀಕ್ಷೆ ನಡೆಸುತ್ತಿದ್ದು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದಕ್ಕಾಗಿ ಪ್ರತಿ ಜಿಲ್ಲೆಯಲ್ಲೂ ಅನುಸರಿಸಲಾಗುತ್ತಿರುವ ವಿನೂತನ ಬೋಧನಾ ವಿಧಾನಗಳ ಮೌಲ್ಯಮಾಪನವನ್ನೂ ಎನ್‌ಸಿಇಆರ್‌ಟಿ ಸಮೀಕ್ಷೆ ಮೂಲಕ ಮಾಡಲಿದೆ. ರಾಷ್ಟ್ರಮಟ್ಟದ ಅಂತಿಮ ವರದಿಯನ್ನು ಈ ವರ್ಷದ ಮಾರ್ಚ್‌ನಲ್ಲಿ ಬಿಡುಗಡೆಗೊಳಿಸಲು ಎನ್‌ಸಿಇಆರ್‌ಟಿ ಚಿಂತನೆ ನಡೆಸಿದೆ.

ಕಳೆದ ನವೆಂಬರ್ 13 ರಂದು ಎನ್‌ಸಿಇಆರ್‌ಟಿ ಯು ಮೂರನೇ, ಐದನೇ ಮತ್ತು ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ದೇಶಾದ್ಯಂತ ಕಲಿಕಾ ಸಾಮರ್ಥ್ಯ ಪರೀಕ್ಷೆ ನಡೆಸಿತ್ತು.

ಈ ಶೈಕ್ಷಣಿಕ ಸಮೀಕ್ಷೆಯ ಜಿಲ್ಲಾವಾರು ತಾತ್ಕಾಲಿಕ ವರದಿಯನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಅವರು ಇತ್ತೀಚೆಗೆ ಬಿಡುಗಡೆ ಮಾಡಿದ್ದರು.

For Quick Alerts
ALLOW NOTIFICATIONS  
For Daily Alerts

English summary
The National Council for Educational Research and Training (NCERT) has developed a test to identify the potential and inherent abilities of children to help them zero in on the streams they should opt for in higher classes.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X