ನೀಟ್ ಪರೀಕ್ಷಾ ಕೇಂದ್ರಗಳನ್ನು ಹೆಚ್ಚಿಸಿದ ಹಿನ್ನೆಲೆ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳನ್ನು ಆಯ್ಕೆ ಮಾಡಿಕೊಳ್ಳಲು ಇಂದು ಕೊನೆಯ ದಿನವಾಗಿದೆ.
ಈ ಬಾರಿ ದೇಶಾದ್ಯಂತ ಏಕಕಾಲಕ್ಕೆ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪರೀಕ್ಷೆಗಳು ನಡೆಯುತ್ತಿರುವುದರಿಂದ ಪರೀಕ್ಷಾರ್ಥಿಗಳ ಸಂಖ್ಯೆ ಹೆಚ್ಚಿದೆ. ಅತೀ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಯನ್ನು ತೆಗೆದುಕೊಂಡಿರುವುದರಿಂದ ಕಳೆದ ವಾರ ಮಾನವ ಸಂಪನ್ಮೂಲ ಸಚಿವಾಲಯವು ನೀಟ್ ಪರೀಕ್ಷಾ ಕೇಂದ್ರಗಳನ್ನು ಹೆಚ್ಚಿಸಿರುವುದರ ಬಗ್ಗೆ ಮಾಹಿತಿ ನೀಡಿತ್ತು.
ಪರೀಕ್ಷಾ ಕೇಂದ್ರಗಳು ಹೆಚ್ಚಾದ ಕಾರಣ ಮೊದಲಿಗೆ ನೀಡಿದ ಅಧಿಸೂಚನೆಯಂತೆ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳನ್ನು ಆಯ್ಕೆ ಮಾಡಿಕೊಳ್ಳಲು ನಾಲ್ಕು ದಿನಗಳ ಅವಕಾಶ ಮಾತ್ರ ನೀಡಲಾಗಿತ್ತು . ದಿನಾಂಕ 24-03-2017 ರಿಂದ ದಿನಾಂಕ 27-03-2017 ರವರೆಗೂ ವಿದ್ಯಾರ್ಥಿಗಳು ಸಿಬಿಎಸ್ಇ ನೀಟ್ ಅಧಿಕೃತ ವೆಬ್ಸೈಟ್ ಮೂಲಕ ಲಾಗಿನ್ ಆಗಿ ಪರೀಕ್ಷಾ ಕೇಂದ್ರಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿತ್ತು, ಆನಂತರ ನಿಗಧಿ ಪಡಿಸಲಾದ ಅವಧಿಯನ್ನು ಮಾರ್ಚ್ 31 ರವರೆಗೆ ವಿಸ್ತರಿಸಲಾಯಿತು. ಕೊನೆಯ ದಿನವಾದ ಇಂದು ಮಧ್ಯರಾತ್ರಿವರೆಗೂ ಪರೀಕ್ಷಾ ಕೇಂದ್ರ ಆಯ್ಕೆ ಮಾಡಲು ಅವಕಾಶವಿದೆ.

ಪರೀಕ್ಷಾ ಕೇಂದ್ರ ಆಯ್ಕೆ ಮಾಡುವ ವಿಧಾನ
- ನೀಟ್ ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ
- ನಿಮ್ಮ ನೋಂದಣಿ ಸಂಖ್ಯೆಯೊಂದಿಗೆ ಲಾಗಿನ್ ಆಗಿ
- ಪರೀಕ್ಷಾ ಕೇಂದ್ರಗಳ ಪಟ್ಟಿಯಲ್ಲಿ ನಿಮ್ಮ ಅನುಕೂಲದ ಕೇಂದ್ರ ಆಯ್ಕೆ ಮಾಡಿಕೊಳ್ಳಿ
ಭಾರತೀಯ ವೈದ್ಯಕೀಯ ಪರಿಷತ್ (ಎಂ.ಸಿ.ಐ) ಮತ್ತು ಭಾರತೀಯ ದಂತ ವೈದ್ಯಕೀಯ ಪರಿಷತ್ (ಡಿ.ಸಿ.ಐ) ಅನುಮೋದನೆಯೊಂದಿಗೆ ನಡೆಯುತ್ತಿರುವ ದೇಶದ ಎಲ್ಲಾ ಸರ್ಕಾರಿ, ಖಾಸಗಿ, ಡೀಮ್ಡ್ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಲ್ಲಿನ ಸೀಟುಗಳ ಪ್ರವೇಶ ಮೇ 07 ರಂದು ಏಕಕಾಲಕ್ಕೆ ದೇಶಾದ್ಯಂತ 103 ನಗರಗಳ 2200 ಕ್ಕೂ ಹೆಚ್ಚು ಪರೀಕ್ಷಾ ಕೇಂದ್ರಗಳಲ್ಲಿ ನೀಟ್ ನಡೆಯಲಿದೆ. ಒಟ್ಟು 11,35,104 ವಿದ್ಯಾರ್ಥಿಗಳು ಬರೆಯಲಿದ್ದಾರೆ.
ಕರ್ನಾಟಕದಲ್ಲಿ ಬೆಂಗಳೂರು, ಮಂಗಳೂರು, ಗುಲ್ಬರ್ಗ ಮತ್ತು ಬೆಳಗಾವಿ ನಗರಗಳಿಗೆ ಮಾತ್ರ ನೀಟ್ ಪರೀಕ್ಷೆಗೆ ಅವಕಾಶ ಕಲ್ಪಿಸಲಾಗಿತ್ತು. ಈಗ ಹೆಚ್ಚುವರಿ ನಾಲಕ್ಕು ನಗರಗಳನ್ನು ನೀಡಲಾಗಿದೆ. ಒಟ್ಟು ಕರ್ನಾಟಕದ ಎಂಟು ನಗರಗಳಲ್ಲಿ ಪರೀಕ್ಷೆ ನಡೆಯಲಿದೆ.
ಕರ್ನಾಟಕದಲ್ಲಿರುವ ಪರೀಕ್ಷಾ ಕೇಂದ್ರಗಳು
- ಬೆಂಗಳೂರು
- ಬೆಳಗಾವಿ
- ಗುಲ್ಬರ್ಗ
- ಮಂಗಳೂರು
- ಹುಬ್ಬಳ್ಳಿ
- ಮೈಸೂರು
- ದಾವಣಗೆರೆ
- ಉಡುಪಿ
ಪ್ರಮುಖ ದಿನಾಂಕಗಳು
- ಪರೀಕ್ಷಾ ಕರೆ ಪತ್ರವನ್ನು ವೆಬ್ಸೈಟ್ಗೆ ಅಪ್ಲೋಡ್ ಮಾಡುವ ದಿನಾಂಕ 15 -04 -2017
- ಪರೀಕ್ಷೆ ನಡೆಯುವ ದಿನಾಂಕ 07-05-2017
- ಫಲಿತಾಂಶ ಪ್ರಕಟಗೊಳ್ಳುವ ದಿನಾಂಕ 08 -06 -2017
ಸೂಚನೆ
- ಪರೀಕ್ಷಾ ಕೊಠಡಿಗೆ ಹಾಜರಾಗುವಾಗ ವಿದ್ಯಾರ್ಥಿಯು ಕರೆಪತ್ರದೊಂದಿಗೆ ಪಾಸ್ಪೋರ್ಟ್ ಅಳತೆಯ ಫೋಟೋ ಮತ್ತು ಸ್ಟ್ಯಾಂಪ್ ಸೈಜಿನ ಫೋಟೋವನ್ನು ಹೊಂದಿರಬೇಕು.
- ಸರ್ಕಾರಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಲ್ಲಿನ ಸೀಟುಗಳನ್ನು ಆಲ್ ಇಂಡಿಯಾ ಕೋಟ (ಎನ್.ಐ. ಆರ್) ಮತ್ತು ರಾಜ್ಯ ಸರ್ಕಾರಿ ಕೋಟಾದಡಿ ಹಂಚಿಕೆ ಮಾಡಲಾಗುತ್ತದೆ.
- ಖಾಸಗಿ ಕಾಲೇಜುಗಳ ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿನ ಸೀಟುಗಳನ್ನು ಎನ್.ಐ.ಆರ್ ಕೋಟ, ರಾಜ್ಯ ಸರ್ಕಾರಿ ಕೋಟ ಮತ್ತು ಆಡಳಿತ ಮಂಡಳಿ ಕೋಟ ಸೀಟುಗಳಾಗಿ ವರ್ಗೀಕರಣ ಮಾಡಲಾಗಿದೆ.
- ಒಟ್ಟಾರೆ ಎಲ್ಲ ಸೀಟುಗಳನ್ನು ನೀಟ್ ರ್ಯಾಂಕಿಂಗ್ ಆಧಾರದಲ್ಲಿಯೇ ಭರ್ತಿ ಮಾಡಲಾಗುತ್ತದೆ. ಆಲ್ ಇಂಡಿಯಾ ರ್ಯಾನ್ಕ್ ನ ಮೆರಿಟ್ ಪಟ್ಟಿ ಆಧರಿಸಿ ತಮ್ಮ ಕೋಟ ಸೀಟುಗಳ ಭರ್ತಿಗೆ ಸಂಬಂಧಿಸಿದ ದಾಖಲಾತಿ ಸಂಸ್ಥೆಗಳು ಕೌನ್ಸೆಲಿಂಗ್ ನಡೆಸುತ್ತದೆ.
ಇದನ್ನು ಗಮನಿಸಿ: 23 ಹೆಚ್ಚುವರಿ ನಗರಗಳಲ್ಲಿ ಪರೀಕ್ಷೆ


Click it and Unblock the Notifications











