NEET Answer Key 2020: ನೀಟ್ ಕೀ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು, ಬಿಡುಗಡೆ ಮಾಡಿದ್ದ ನೀಟ್ ಯುಜಿ 2020 ಪರೀಕ್ಷೆಯ ಕೀ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳು ಕೀ ಉತ್ತರಗಳಿಗೆ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಬಹುದು.

ನೀಟ್ ಕೀ-ಉತ್ತರಗಳಿಗೆ ಸೆ.29ರೊಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ

ದೇಶದಾದ್ಯಂತ ಸೆಪ್ಟೆಂಬರ್ 13,2020 ರಂದು 3,900 ಕೇಂದ್ರಗಳಲ್ಲಿ ನೀಟ್ ಯುಜಿ ಪರೀಕ್ಷೆಯನ್ನು ಎನ್‌ಟಿಎ ನಡೆಸಿತ್ತು. ಪರೀಕ್ಷೆ ಬರೆದ ಅಭ್ಯರ್ಥಿಗಳು ಸೆಪ್ಟೆಂಬರ್ 27,2020ರ ಮಧ್ಯಾಹ್ನ 2 ಗಂಟೆಯೊಳಗೆ ಕೀ ಉತ್ತರಗಳಿಗೆ ಆಕ್ಷೇಪಣೆಯನ್ನು ಸಲ್ಲಿಸಬಹುದು. ಅಭ್ಯರ್ಥಿಗಳು ಪ್ರತಿ ಪ್ರಶ್ನೆಯ ಸರಿ ಉತ್ತರಕ್ಕೆ ಆಕ್ಷೇಪಣೆ ಸಲ್ಲಿಸಲು ರೂ.1000 ಪ್ರೋಸೆಸಿಂಗ್ ಶುಲ್ಕ ಪಾವತಿಸಬೇಕಿರುತ್ತದೆ.

ಅಭ್ಯರ್ಥಿಗಳು ಪ್ರೊಸೆಸಿಂಗ್ ಶುಲ್ಕವನ್ನು ಡೆಬಿಟ್ ಕಾರ್ಡ್‌, ಕ್ರೆಡಿಟ್ ಕಾರ್ಡ್‌ ಬಳಸಿ ಅಥವಾ ನೆಟ್‌ ಬ್ಯಾಂಕಿಂಗ್ ಮೂಲಕ ಸೆಪ್ಟೆಂಬರ್ 29 ರ ಸಂಜೆ 4 ಗಂಟೆಯೊಳಗೆ ಆನ್‌ಲೈನ್‌ ಮೂಲಕ ಪಾವತಿಸಬಹುದು. ಆಕ್ಷೇಪಣೆ ಸಲ್ಲಿಸಿದ ಸರಿಯುತ್ತರಕ್ಕೆ, ಅಭ್ಯರ್ಥಿಯ ಉತ್ತರ ಸರಿ ಇದ್ದಲ್ಲಿ ಪ್ರೊಸೆಸಿಂಗ್ ಶುಲ್ಕ ಮರುಪಾವತಿ ಮಾಡಲಾಗುತ್ತದೆ.

ಆಕ್ಷೇಪಣೆ ಅರ್ಜಿಯನ್ನು ಪೋಸ್ಟ್‌ ಮೂಲಕವಾಗಲಿ, ಇ-ಮೇಲ್‌ ಮೂಲಕವಾಗಿ ಕಳುಹಿಸಿದಲ್ಲಿ ಪರಿಗಣಿಸಲಾಗುವುದಿಲ್ಲ. ಹಾಗೂ ಪ್ರೊಸೆಸಿಂಗ್ ಶುಲ್ಕ ಪಾವತಿಸದೇ ಇದ್ದಲ್ಲಿ, ಅಂತಹ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಆದ್ದರಿಂದ ಎನ್‌ಟಿಎ ವೆಬ್‌ ಸೈಟ್ https://ntaneet.nic.in/ntaneet/Welcome.aspx ನಲ್ಲಿ ನೀಡಲಾದ ನಿಯಮಗಳನ್ನು ಪಾಲಿಸುವ ಮೂಲಕ ಆಕ್ಷೇಪಣೆ ಅರ್ಜಿ ಸಲ್ಲಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

More News  

For Quick Alerts
ALLOW NOTIFICATIONS  
For Daily Alerts

English summary
NEET answer key challenge window opened. Candidates can raise objections before september 29. Know more.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+