ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA), ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET) ಯುಜಿ ಅಥವಾ NEET-UG 2022ರ ಅಧಿಕೃತ ಉತ್ತರ ಕೀಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಕೀ ಉತ್ತರಗಳು ಪ್ರಕಟವಾದ ಬಳಿಕ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ಕೀ ಉತ್ತರಗಳನ್ನು ವೀಕ್ಷಿಸಬಹುದು.

ಜುಲೈ 17 ರಂದು ನಡೆದ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳಿಗೆ, NTA ಉತ್ತರದ ಕೀಗಳ ಜೊತೆಗೆ NEET 2022ರ OMR ಶೀಟ್ ಅನ್ನು ಸಹ ಬಿಡುಗಡೆ ಮಾಡುತ್ತದೆ. 2022 ರ ನೀಟ್ ಫಲಿತಾಂಶಕ್ಕಾಗಿ 16 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನಿರೀಕ್ಷಿಸುತ್ತಿದ್ದು, ಫಲಿತಾಂಶವು ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

NEET 2022 ಅಧಿಕೃತ ಉತ್ತರ ಕೀಯನ್ನು ಡೌನ್‌ಲೋಡ್ ಮಾಡುವುದು ಹೇಗೆ ? :
ಸ್ಟೆಪ್ 1 : ಅಧಿಕೃತ ವೆಬ್‌ಸೈಟ್ neet.nta.nic.in ಗೆ ಭೇಟಿ ನೀಡಿ
ಸ್ಟೆಪ್ 2 : ಹೋಂ ಪೇಜ್ ನಲ್ಲಿ 'NEET ಅಧಿಕೃತ ಉತ್ತರ ಕೀ 2022' ಲಿಂಕ್ ಅನ್ನು ಕ್ಲಿಕ್ ಮಾಡಿ.
ಸ್ಟೆಪ್ 3 : ನೀಟ್ 2022ರ ಅಧಿಕೃತ ಉತ್ತರ ಕೀಯನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ
ಸ್ಟೆಪ್ 4 : ಪ್ರಶ್ನೆ ಪತ್ರಿಕೆಯ ಕೋಡ್ ಪ್ರಕಾರ ನೀಟ್ ಉತ್ತರ ಕೀಯನ್ನು ಹುಡುಕಿ
ಸ್ಟೆಪ್ 5 : ಉತ್ತರ ಕೀಲಿಯಲ್ಲಿ ಉಲ್ಲೇಖಿಸಲಾದ ಪ್ರತಿಕ್ರಿಯೆಗಳನ್ನು ಹೊಂದಿಸಿ
ಸ್ಟೆಪ್ 6 : ನಂತರ ಅಭ್ಯರ್ಥಿಗಳು ಅಂಕಗಳನ್ನು ಲೆಕ್ಕ ಹಾಕಿ
NEET 2022 ಉತ್ತರದ ಕೀಲಿಗಳಿಗೆ ಆಕ್ಷೇಪಣೆ ಸಲ್ಲಿಕೆ ವಿವರ :
ನೀಟ್ 2022ರ ಕೀ ಉತ್ತರಗಳಿಗೆ ಆಕ್ಷೇಪಣೆಯನ್ನು ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ರೂ 200 ಶುಲ್ಕವನ್ನು ಪಾವತಿಸಬೇಕಿರುತ್ತದೆ. ಆಕ್ಷೇಪಣೆಗೆ ಸಲ್ಲಿಸಿದ ಹಣವನ್ನು ಹಿಂತಿರುಗಿಸಲಾಗುವುದಿಲ್ಲ. ಅಭ್ಯರ್ಥಿಗಳು ಸಲ್ಲಿಸಿದ ದೂರುಗಳ ಆಧಾರದ ಮೇಲೆ NEET 2022ರ ಅಂತಿಮ ಉತ್ತರ ಕೀಯನ್ನು ಫಲಿತಾಂಶಗಳ ಪ್ರಕಟಣೆಗೆ ಕೆಲವು ಗಂಟೆಗಳ ಮೊದಲು ಲಭ್ಯವಾಗುವಂತೆ ಬಿಡುಗಡೆ ಮಾಡಲಾಗುತ್ತದೆ. MBBS, BDS, BSc ನರ್ಸಿಂಗ್ ಮತ್ತು ಆಯುಷ್ ಕಾರ್ಯಕ್ರಮಗಳಿಗೆ ಪ್ರವೇಶವನ್ನು NEET 2022 ಫಲಿತಾಂಶಗಳಿಂದ ನಿರ್ಧರಿಸಲಾಗುತ್ತದೆ.


Click it and Unblock the Notifications











