NEET UG Counselling 2021 : ಯಾವೆಲ್ಲಾ ರಾಜ್ಯಗಳಲ್ಲಿ ನೀಟ್ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭ ?

ವೈದ್ಯಕೀಯ ಕೌನ್ಸೆಲಿಂಗ್ ಸಮಿತಿಯು ಅಖಿಲ ಭಾರತ ಕೋಟಾ NEET UG 2021 ಕೌನ್ಸೆಲಿಂಗ್ ಅಧಿಸೂಚನೆಯನ್ನು ಇನ್ನೂ ಬಿಡುಗಡೆ ಮಾಡದಿದ್ದರೂ, ಹಲವಾರು ರಾಜ್ಯಗಳು ವೈದ್ಯಕೀಯ ಯುಜಿ ಕೋರ್ಸ್ ಗಳ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಪ್ರಾರಂಭಿಸಿವೆ. ರಾಜ್ಯ ಕೌನ್ಸೆಲಿಂಗ್ ಸಂಸ್ಥೆಗಳು ನಡೆಸುವ ರಾಜ್ಯ ಕೋಟಾ ಕೌನ್ಸೆಲಿಂಗ್ ಪ್ರಕ್ರಿಯೆ ಮೂಲಕ ಪದವಿಪೂರ್ವ ವೈದ್ಯಕೀಯ ಸೀಟುಗಳಿಗೆ ಶೇ. 85ರಷ್ಟು ಪ್ರವೇಶವನ್ನು ನೀಡಲಾಗುತ್ತದೆ. ರಾಜಸ್ಥಾನ, ತಮಿಳುನಾಡು, ಹಿಮಾಚಲ ಪ್ರದೇಶ, ಅರುಣಾಚಲ ಪ್ರದೇಶ, ಕರ್ನಾಟಕ, ಅಸ್ಸಾಂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು NEET 2021 ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಪ್ರಾರಂಭಿಸಿವೆ.

ಇತ್ತೀಚೆಗೆ NEET 2021 ಕೌನ್ಸೆಲಿಂಗ್ ಅನ್ನು ನಾಲ್ಕು ಸುತ್ತುಗಳಲ್ಲಿ ನಡೆಸಲಾಗುವುದು ಎಂದು MCC ಹೇಳಲಾಗಿತ್ತು. ಸಮಿತಿಯು AIQ NEET ಕೌನ್ಸೆಲಿಂಗ್ ನೀತಿಗೆ ಕೆಲವು ಇತರ ಬದಲಾವಣೆಗಳನ್ನು ಮಾಡಿದೆ. ಅಖಿಲ ಭಾರತ ಕೋಟಾದ ಸೀಟುಗಳನ್ನು 2ನೇ ಸುತ್ತಿನ ಕೌನ್ಸೆಲಿಂಗ್‌ನ ನಂತರ ರಾಜ್ಯಗಳಿಗೆ ಹಿಂತಿರುಗಿಸಲಾಯಿತು, ಈಗ AIQ ಕೌನ್ಸೆಲಿಂಗ್‌ನ ಮಾಪ್ ಅಪ್ ಮತ್ತು ಖಾಲಿ ಸುತ್ತುಗಳಲ್ಲಿ ಭರ್ತಿ ಮಾಡಲಾಗುತ್ತಿದೆ.

ನೀಟ್ ಯುಜಿ ಕೌನ್ಸೆಲಿಂಗ್ : ಈ ರಾಜ್ಯಗಳಲ್ಲಿ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭ

NEET 2021 ಕೌನ್ಸೆಲಿಂಗ್‌ನ ರಾಜ್ಯವಾರು ಅಪ್‌ಡೇಟ್‌ಗಳು ಇಲ್ಲಿವೆ :

ರಾಜಸ್ಥಾನ NEET ಕೌನ್ಸೆಲಿಂಗ್ 2021 :

ರಾಜಸ್ಥಾನ NEET ಕೌನ್ಸೆಲಿಂಗ್ 2021 ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ. ಅರ್ಜಿ ನಮೂನೆಯನ್ನು ಸಲ್ಲಿಸಲು rajneetug2021.com ವೆಬ್‌ಸೈಟ್ ಗೆ ಭೇಟಿ ನೀಡಬಹುದು.

ತಮಿಳುನಾಡು NEET ಕೌನ್ಸೆಲಿಂಗ್ 2021 :

MBBS ಮತ್ತು BDS ಕೋರ್ಸ್‌ಗಳ ಪ್ರವೇಶಕ್ಕಾಗಿ ತಮಿಳುನಾಡು NEET 2021 ಕೌನ್ಸೆಲಿಂಗ್ ಪ್ರಕ್ರಿಯೆ ಪ್ರಾರಂಭವಾಗಿದೆ. ಅಭ್ಯರ್ಥಿಗಳು ಜನವರಿ 7 ರೊಳಗೆ ಅರ್ಜಿ ಸಲ್ಲಿಸಬಹುದು.

ಕರ್ನಾಟಕ NEET ಕೌನ್ಸೆಲಿಂಗ್ 2021:

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಯುಜಿ ನೀಟ್ ಕೌನ್ಸೆಲಿಂಗ್‌ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಿದೆ. ಅಭ್ಯರ್ಥಿಗಳು kea.kar.nic.in ವೆಬ್‌ಸೈಟ್ ನಲ್ಲಿ ತಮ್ಮ ಅರ್ಜಿಯನ್ನು ಡಿಸೆಂಬರ್ 22ರೊಳಗೆ ಸಲ್ಲಿಸಬಹುದು.

ಅಸ್ಸಾಂ NEET ಕೌನ್ಸೆಲಿಂಗ್ 2021 :

ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ (DME) ಅಸ್ಸಾಂ ರಾಜ್ಯ ಕೋಟಾ ವೈದ್ಯಕೀಯ ಸೀಟುಗಳಿಗೆ NEET ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಮತ್ತು ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ dme.assam.gov.in ವೆಬ್‌ಸೈಟ್ಗೆ ಭೇಟಿ ನೀಡಿ.

ಹಿಮಾಚಲ ಪ್ರದೇಶ NEET ಕೌನ್ಸೆಲಿಂಗ್ 2021 :

ಹಿಮಾಚಲ ಪ್ರದೇಶ NEET ಕೌನ್ಸೆಲಿಂಗ್‌ನ ನೋಂದಣಿ ಪ್ರಕ್ರಿಯೆ ಡಿಸೆಂಬರ್ 19ರಂದು ಕೊನೆಗೊಂಡಿತು. ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಅರ್ಜಿ ನಮೂನೆ ತಿದ್ದುಪಡಿ ವಿಂಡೋ ಡಿಸೆಂಬರ್ 20 ಮತ್ತು 23 ರ ನಡುವೆ ಲಭ್ಯವಿರುತ್ತದೆ. HP NEET ಕೌನ್ಸೆಲಿಂಗ್ ಸಂಬಂಧಿತ ಚಟುವಟಿಕೆಗಳ ಇತರ ದಿನಾಂಕಗಳು ಬದಲಾಗದೆ ಇರುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಂಜಾಬ್ NEET ಕೌನ್ಸೆಲಿಂಗ್ 2021 :

ಬಾಬಾ ಫರೀದ್ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸಸ್ (BFUHS), ಪಂಜಾಬ್ NEET ಕೌನ್ಸೆಲಿಂಗ್ ನ ತಾತ್ಕಾಲಿಕ ಮೆರಿಟ್ ಪಟ್ಟಿಯನ್ನು ಅಧಿಕೃತ ವೆಬ್‌ಸೈಟ್ bfuhs.ac.in ನಲ್ಲಿ ಬಿಡುಗಡೆ ಮಾಡಿದೆ.

ಗುಜರಾತ್ NEET ಕೌನ್ಸೆಲಿಂಗ್ 2021:

ಗುಜರಾತ್‌ನ ವೃತ್ತಿಪರ ಪದವಿಪೂರ್ವ ವೈದ್ಯಕೀಯ ಶೈಕ್ಷಣಿಕ ಕೋರ್ಸ್‌ಗಳ ಪ್ರವೇಶ ಸಮಿತಿಯು (ACPUGMEC), NEET UG ಕೌನ್ಸೆಲಿಂಗ್‌ಗಾಗಿ ನೋಂದಣಿ ಪೋರ್ಟಲ್ ಅನ್ನು ಪುನಃ ತೆರೆದಿದ್ದು, ಡಿಸೆಂಬರ್ 10 ರಿಂದ 14 ರವರೆಗೆ ಅವಕಾಶ ನೀಡಲಾಗಿತ್ತು. ನಂತರ NEET ಮೆರಿಟ್ ಪಟ್ಟಿಯನ್ನು medadmgujarat.org ವೆಬ್‌ಸೈಟ್ನಲ್ಲಿ ಪ್ರಕಟಿಸಲಾಗುತ್ತದೆ.

AP NEET ಕೌನ್ಸೆಲಿಂಗ್ 2021 :

ಡಾ ಎನ್‌ಟಿಆರ್ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸಸ್ NEET 2021ರ ಕೌನ್ಸೆಲಿಂಗ್ ನ ಅಭ್ಯರ್ಥಿಗಳ ಪಟ್ಟಿಯನ್ನು ಮತ್ತು ಕಳೆದ ವರ್ಷದ MBBS, BDS ಪ್ರವೇಶ ಕಟ್-ಆಫ್ ಶ್ರೇಣಿಗಳನ್ನು ಬಿಡುಗಡೆ ಮಾಡಿದೆ. ನೋಂದಣಿ ಪ್ರಕ್ರಿಯೆಯನ್ನು ಅಧಿಕೃತ ವೆಬ್‌ಸೈಟ್ ntruhs.ap.nic.in ನಲ್ಲಿ ನಡೆಸಲಾಗುವುದು.

NEET ಕೌನ್ಸೆಲಿಂಗ್ 2021: ಅಪ್‌ಡೇಟ್ಸ್

ಯುಪಿ NEET UG ಕೌನ್ಸೆಲಿಂಗ್ 2021:

ಕೌನ್ಸೆಲಿಂಗ್ ಪ್ರಕ್ರಿಯೆ ಇನ್ನೂ ಪ್ರಾರಂಭವಾಗಬೇಕಿದೆ.
ಅಧಿಕೃತ ವೆಬ್‌ಸೈಟ್: upneet.gov.in

ಕೇರಳ NEET ಕೌನ್ಸೆಲಿಂಗ್ 2021 :

ಕೌನ್ಸೆಲಿಂಗ್ ಪ್ರಕ್ರಿಯೆ ಇನ್ನೂ ಪ್ರಾರಂಭವಾಗಬೇಕಿದೆ.
ಅಧಿಕೃತ ವೆಬ್‌ಸೈಟ್: cee.kerala.gov.in

MP NEET ಕೌನ್ಸೆಲಿಂಗ್ 2021 :

ಕೌನ್ಸೆಲಿಂಗ್ ಪ್ರಕ್ರಿಯೆ ಅತೀ ಶೀಘ್ರದಲ್ಲಿ ಪ್ರಾರಂಭವಾಗಲಿದೆ.
ಅಧಿಕೃತ ವೆಬ್‌ಸೈಟ್: dme.mponline.gov.in

ಮಹಾರಾಷ್ಟ್ರ NEET ಕೌನ್ಸೆಲಿಂಗ್ 2021 :

ಕೌನ್ಸೆಲಿಂಗ್ ಪ್ರಕ್ರಿಯೆ ಅತೀ ಶೀಘ್ರದಲ್ಲಿ ಪ್ರಾರಂಭವಾಗಲಿದೆ.
ಅಧಿಕೃತ ವೆಬ್‌ಸೈಟ್: cetcell.mahacet.org

ಒಡಿಶಾ NEET ಕೌನ್ಸೆಲಿಂಗ್ 2021:

ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಮುಂದೂಡಲಾಗಿದೆ.
ವೆಬ್‌ಸೈಟ್: odishajee.com

ಹರಿಯಾಣ NEET ಕೌನ್ಸೆಲಿಂಗ್ 2021 :

ಕೌನ್ಸೆಲಿಂಗ್ ಪ್ರಕ್ರಿಯೆ ಕುರಿತು ಯಾವುದೇ ಅಧಿಸೂಚನೆಯನ್ನು ಇನ್ನೂ ಹೊರಡಿಸಲಾಗಿಲ್ಲ.
ಅಧಿಕೃತ ವೆಬ್‌ಸೈಟ್: dmer.haryana.gov.in

NEET UG 2021 ಕೌನ್ಸೆಲಿಂಗ್ ನಿರೀಕ್ಷಿತ ದಿನಾಂಕ :

ಅಖಿಲ ಭಾರತ ಕೋಟಾ ಸೀಟುಗಳಿಗೆ NEET UG ಕೌನ್ಸೆಲಿಂಗ್ 2021 ಪ್ರಕ್ರಿಯೆಯು ಜನವರಿ 6, 2022ರ ನಂತರ ಪ್ರಾರಂಭವಾಗಬಹುದು.

More News  

For Quick Alerts
ALLOW NOTIFICATIONS  
For Daily Alerts

English summary
In These states have started the neet 2021 counselling process. Here is the list.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+