ಮುಂದಿನ ಶೈಕ್ಷಣಿಕ ವರ್ಷದಿಂದ ಆಯುಷ್ ಕೋರ್ಸ್ ಗಳಿಗೆ ನೀಟ್ ಕಡ್ಡಾಯ

ಆಯುರ್ವೆದ ಶಿಕ್ಷಣದಲ್ಲಿ ಗುಣಮಟ್ಟ ಕಾಪಾಡಿಕೊಳ್ಳುವ ಸಲುವಾಗಿ ಈ ಕೋರ್ಸ್​ಗಳಿಗೆ ಪ್ರವೇಶಾತಿಯನ್ನು ನೀಟ್ ಮಾನದಂಡಕ್ಕೆ ಅನುಗುಣವಾಗಿ ನಡೆಸಲು ನಿರ್ಧರಿಸಿದೆ.

ಮುಂದಿನ (2018-19) ಶೈಕ್ಷಣಿಕ ವರ್ಷದಿಂದ ವಿವಿಧ ಆಯುಷ್ ಕೋರ್ಸ್​ಗಳಿಗೆ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೀಟ್) ಮೂಲಕ ಪ್ರವೇಶ ಕಲ್ಪಿಸಲು ಆಯುಷ್ ಸಚಿವಾಲಯ ತೀರ್ಮಾನಿಸಿದೆ.

ಆಯುಷ್ ಕೋರ್ಸ್ ಗಳಿಗೆ ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳು ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಎದುರಿಸಬೇಕಾಗುತ್ತದೆ.

ಆಯುಷ್ (ಆಯುರ್ವೆದ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ) ಕೋರ್ಸ್​ಗಳನ್ನು ಮೇಲ್ದರ್ಜೆಗೇರಿಸುವ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸೆಳೆಯುವ ಪ್ರಯತ್ನವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಲ್ಲದೆ ಆಯುರ್ವೆದ ಶಿಕ್ಷಣದಲ್ಲಿ ಗುಣಮಟ್ಟ ಕಾಪಾಡಿಕೊಳ್ಳುವ ಸಲುವಾಗಿ ಈ ಕೋರ್ಸ್​ಗಳಿಗೆ ಪ್ರವೇಶಾತಿಯನ್ನು ನೀಟ್ ಮಾನದಂಡಕ್ಕೆ ಅನುಗುಣವಾಗಿ ನಡೆಸಲು ನಿರ್ಧರಿಸಿದೆ.

ಆಯುಷ್ ಕೋರ್ಸ್ ಗಳಿಗೆ ನೀಟ್ ಕಡ್ಡಾಯ

ಆಯುಷ್ ಸಚಿವಾಲಯವು ಈ ಸಂಬಂಧ ರಾಜ್ಯ ಸರ್ಕಾರಗಳಿಗೆ ಮಾರ್ಗಸೂಚಿಗಳನ್ನು ಕಳುಹಿಸಿದೆ. ನೀಟ್ ಅಳವಡಿಕೆಯೊಂದಿಗೆ ಆಯುಷ್ ಕಾಲೇಜುಗಳಲ್ಲಿ ಸೀಟು ಭರ್ತಿಗಾಗಿ ಪ್ರತ್ಯೇಕ ಪರೀಕ್ಷೆಗಳನ್ನು ನಡೆಸುವುದು ಕೂಡ ತಪ್ಪಲಿದೆ.

ಆಯುಷ್ ಅಡಿಯಲ್ಲಿ ಬರುವ ಕೋರ್ಸುಗಳು

ಯೋಗ: ಯೋಗವು ವ್ಯಕ್ತಿಯೊಬ್ಬನ ಒಳಗಿನ ಶಕ್ತಿಯನ್ನು ಒಂದು ಸಂತುಲಿತ ರೀತಿಯಲ್ಲಿ ಸುಧಾರಿಸಲು ಅಥವಾ ವೃದ್ಧಿಪಡಿಸಲು ಇರುವ ಒಂದು ವಿಧಾನ.

ಯೂನಾನಿ: ಯೂನಾನಿ ವೈದ್ಯಕೀಯ ಪದ್ಧತಿಯು ಭಾರತದಲ್ಲಿ ಸುದೀರ್ಘವಾದ ಹಾಗೂ ಪರಿಣಾಮಕಾರಿಯಾದ ದಾಖಲೆಯನ್ನು ಹೊಂದಿದೆ.

ಪ್ರಕೃತಿ ಚಿಕಿತ್ಸೆ: ಮಾನವನು ತನ್ನ ಜೀವನದ ಭೌತಿಕ, ಮಾನಸಿಕ, ನೈತಿಕ ಮತ್ತು ಅಧ್ಯಾತ್ಮಿಕ ಆಯಾಮಗಳಲ್ಲಿ ನಿಸರ್ಗದ ರಚನಾತ್ಮಕ ನಿಯಮಗಳೊಂದಿಗೆ ಸಾಮರಸ್ಯವನ್ನು ಇಟ್ಟುಕೊಂಡು, ರಚಿಸುವ ಪದ್ಧತಿಯೇ ಪ್ರಕೃತಿ ಚಿಕಿತ್ಸೆ.

ಆಯುರ್ವೇದ: ಆಯುರ್ವೇದವು ಭಾರತ ಉಪಖಂಡದ ಅತಿ ಪುರಾತನ ವೈದ್ಯಕೀಯ ಪದ್ಧತಿಯಾಗಿದೆ.

ಸಿದ್ಧ: ಸಿದ್ಧ ವೈದ್ಯಕೀಯ ಪದ್ಧತಿಯು ಭಾರತದ ಅತ್ಯಂತ ಪುರಾತನ ವೈದ್ಯಕೀಯ ಪದ್ಧತಿಗಳಲ್ಲಿ ಒಂದು.

ಹೋಮಿಯೋಪತಿ: ಆಯುರ್ವೇದದಂತೆ ಇದು ಕೂಡ ಒಂದು ವೈದ್ಯಕೀಯ ಪದ್ಧತಿಯಾಗಿದ್ದು, ಸಾಧಾರಣವಾಗಿ ವಿಶ್ವದ ಎಲ್ಲೆಡೆಗಳಲ್ಲೂ ಆಚರಣೆಯಲ್ಲಿದೆ.

ವಿಶ್ವಾದ್ಯಂತ ಆಯುರ್ವೇದ, ಹೋಮಿಯೋಪಥಿ, ನ್ಯಾಚುರೋಪತಿ, ಯುನಾನಿ ಔಷಧಿಗಳು ಮತ್ತು ಯೋಗಕ್ಕೆ ಬೇಡಿಕೆ ಹೆಚ್ಚಾಗುತ್ತದೆ. ಈ ಕೋರ್ಸುಗಳನ್ನು ಬಯಸುವ ವಿದ್ಯಾರ್ಥಿಗಳ ಸಂಖ್ಯೆಯು ಹೆಚ್ಚುತ್ತಿದೆ ಆದ್ದರಿಂದ ಈ ಕೋರ್ಸುಗಳ ಗುಣಮಟ್ಟ ಹೆಚ್ಚಿಸುವುದು ಅನಿವಾರ್ಯ ಎಂದು ಆಯುಷ್ ರಾಜ್ಯ ಸಚಿವ ಶ್ರೀಪಾದ್ ಯೆಸ್ಸೋ ನಾಯ್ಕ್​ ಹೇಳಿದ್ದಾರೆ.

ಕರ್ನಾಟಕದಲ್ಲಿ 76 ಕಾಲೇಜುಗಳು ಆಯುಷ್ ಕೋರ್ಸ್ ಗಳನ್ನು ನೀಡುತ್ತವೆ. ಅದರಲ್ಲಿ 5 ಸರ್ಕಾರಿ ಕಾಲೇಜುಗಳು, 5 ಖಾಸಗಿ ಅನುದಾನಿತ ಮತ್ತು ಉಳಿದವು ಖಾಸಗಿ ಅನುದಾನರಹಿತ ಕಾಲೇಜುಗಳಾಗಿವೆ.

More News  

For Quick Alerts
ALLOW NOTIFICATIONS  
For Daily Alerts

English summary
various AYUSH courses will be conducted through the National Eligibility-cum-Entrance Test (NEET) from the next academic session in 2018-19.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+