ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಮಿನೇಷನ್ಸ್ ಇನ್ ಮೆಡಿಕಲ್ ಸೈನ್ಸಸ್ (NBEMS), ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರೆನ್ಸ್ ಟೆಸ್ಟ್-ಮಾಸ್ಟರ್ ಆಫ್ ಡೆಂಟಲ್ ಸರ್ಜರಿ ಅಥವಾ NEET MDS 2022 ಪರೀಕ್ಷೆಯ ಪ್ರವೇಶ ಪತ್ರವನ್ನು ಪ್ರಕಟ ಮಾಡಿದೆ. ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
NEET-MDS ಎನ್ನುವುದು ವಿವಿಧ ಎಂಡಿಎಸ್ ಕೋರ್ಸ್ಗಳ ಪ್ರವೇಶಕ್ಕಾಗಿ ನಡೆಸಲಾಗುವ ಏಕ ಪ್ರವೇಶ ಪರೀಕ್ಷೆಯಾಗಿದೆ. ಎಂಡಿಎಸ್ ಕೋರ್ಸ್ಗಳಿಗೆ ಪ್ರವೇಶಕ್ಕಾಗಿ ರಾಜ್ಯ ಅಥವಾ ಸಂಸ್ಥೆಯ ಮಟ್ಟದಲ್ಲಿ ಯಾವುದೇ ಇತರ ಪ್ರವೇಶ ಪರೀಕ್ಷೆಯು ಮಾನ್ಯವಾಗಿರುವುದಿಲ್ಲ. ದೇಶದ ವಿವಿಧ ವಿಶ್ವವಿದ್ಯಾನಿಲಯಗಳು/ಸಂಸ್ಥೆಗಳ ಅಡಿಯಲ್ಲಿ ಎಂಡಿಎಸ್ ಕೋರ್ಸ್ಗಳಿಗೆ ಪ್ರವೇಶಕ್ಕಾಗಿ NEET-MDS ಅರ್ಹತೆ ಪಡೆಯುವುದು ಕಡ್ಡಾಯವಾಗಿದೆ.

ನೀಟ್ ಎಂಡಿಎಸ್ ಪರೀಕ್ಷೆಯ ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ? :
1. ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್ಸೈಟ್ https://natboard.edu.in/ ಗೆ ಭೇಟಿ ನೀಡಿ
2. ಹೋಂ ಪೇಜ್ ನಲ್ಲಿ ಲಭ್ಯವಿರುವ ಪ್ರವೇಶ ಪತ್ರದ ಲಿಂಕ್ ಮೇಲೆ ಕ್ಲಿಕ್ ಮಾಡಿ
3. ನಂತರ ಅಲ್ಲಿ ನಿಮ್ಮ ಯೂಸರ್ ಐಡಿ ಮತ್ತು ಪಾಸ್ವರ್ಡ್ ನಮೂದಿಸಿ
4. ನಂತರ ಪ್ರವೇಶ ಪತ್ರ ಸ್ಕ್ರೀನ್ ಮೇಲೆ ಮೂಡುವುದು
5. ಅದನ್ನು ಸೇವ್ ಮಾಡಿ ಪ್ರಿಂಟೌಟ್ ತೆಗೆದುಕೊಳ್ಳಿ
ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ನೇರವಾಗಿ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

NEET MDS 2022 ಪರೀಕ್ಷೆಯ ಮಾದರಿ :
ಈ ವರ್ಷ NEET MDS 2022 ಪರೀಕ್ಷೆಯು ಮೇ 2, 2022 ರಂದು ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 12:00 ರವರೆಗೆ ಮಾಸ್ಟರ್ಸ್ ಆಫ್ ಡೆಂಟಲ್ ಸರ್ಜರಿಯ ಅಡಿಯಲ್ಲಿ ವಿವಿಧ ಕೋರ್ಸ್ಗಳಿಗೆ ಪ್ರವೇಶಕ್ಕಾಗಿ ನಡೆಯಲಿದೆ. ಈ ಪತ್ರಿಕೆಯು ಒಟ್ಟು 960 ಅಂಕಗಳನ್ನು ಒಳಗೊಂಡಿದ್ದು, ಅಭ್ಯರ್ಥಿಗಳು 240 ಪ್ರಶ್ನೆಗಳನ್ನು ಉತ್ತರಿಸಬೇಕಿರುತ್ತದೆ.
ಪ್ರತಿ ಸರಿಯಾದ ಉತ್ತರಕ್ಕೆ ಅಭ್ಯರ್ಥಿಗಳಿಗೆ ನಾಲ್ಕು ಅಂಕಗಳನ್ನು ನೀಡಲಾಗುತ್ತದೆ. ಪ್ರತಿ ತಪ್ಪು ಉತ್ತರಕ್ಕೆ ಮೈನಸ್ 1 ರ ಋಣಾತ್ಮಕ ಅಂಕವನ್ನು ನೀಡಲಾಗುವುದು ಮತ್ತು ಉತ್ತರಿಸಲು ಪ್ರಯತ್ನಿಸದ ಪ್ರಶ್ನೆಗಳಿಗೆ ಶೂನ್ಯ ಅಂಕಗಳನ್ನು ನೀಡಲಾಗುತ್ತದೆ.