NEET 2020 Result: 650 ಅಂಕ ಪಡೆದಿದ್ದ ವಿದ್ಯಾರ್ಥಿಗೆ ಫೇಲ್ ಎಂದು ಘೋಷಣೆ

ಪ್ರತಿ ಭಾರಿ ಫಲಿತಾಂಶ ಪ್ರಕಟವಾದ ಬಳಿಕ ಅಂಕಗಳಲ್ಲಿ ವ್ಯತ್ಯಾಸಗಳಿರುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಅದೇ ರೀತಿಯಾಗಿ ಈ ಭಾರಿ ನೀಟ್ ಪರೀಕ್ಷೆಯಲ್ಲೂ ಅಗ್ರ ಸ್ಥಾನವನ್ನು ಪಡೆದ ವಿದ್ಯಾರ್ಥಿಯನ್ನು ಫೇಲ್ ಎಂದು ಘೋಷಿಸಲಾಗಿದೆ.

ನೀಟ್ ಫಲಿತಾಂಶದಲ್ಲಿ ಪ್ರಮಾದ: ಅಗ್ರಸ್ಥಾನ ಪಡೆದ ವಿದ್ಯಾರ್ಥಿ ಫೇಲ್ ಎಂದು ಘೋಷಣೆ

ಈ ಭಾರಿ ನೀಟ್ 2020ರ ಪರೀಕ್ಷಾ ಫಲಿತಾಂಶವನ್ನು ಅಕ್ಟೋಬರ್ 16,2020ರಂದು ಪ್ರಕಟಿಸಲಾಗಿದ್ದು, ಶೇ 56.44ರಷ್ಟು ಮಂದಿ ಉತ್ತೀರ್ಣರಾಗಿದ್ದಾರೆ.

ಫಲಿತಾಂಶದಲ್ಲಿ ಮೃದುಲ್ ರಾವತ್ ಎಂಬ ವಿದ್ಯಾರ್ಥಿಯ ಫಲಿತಾಂಶ ಅನುತ್ತೀರ್ಣ ಎಂದು ಪ್ರಕಟಿಸಲಾಗಿತ್ತು. ಆದರೆ ಮರುಪರಿಶೀಲನೆ ಮಾಡಿದಾಗ ಆತ ಅಗ್ರಸ್ಥಾನದಲ್ಲಿದ್ದಾನೆ ಎಂದು ತಿಳಿದುಬಂದಿದೆ.

ರಾಜಸ್ಥಾನದ ಸವಾಯ್ ಪಟ್ಟಣದ 17 ವರ್ಷದ ಮೃದುಲ್ ರಾವತ್ ಮೊದಲ ಭಾರಿ ನೀಟ್ ಪರೀಕ್ಷೆಯ ಫಲಿತಾಂಶ ಕಂಡು ಆಶ್ಚರ್ಯಪಟ್ಟಿದ್ದಾರೆ. ಕಾರಣ ಅವರಿಗೆ 720ಕ್ಕೆ 329 ಅಂಕಗಳು ಲಭಿಸಿತ್ತು. ಆದರೆ ಮರುಪರಿಶೀಲನೆ ಮಾಡಿದಾಗ 720ಕ್ಕೆ 650 ಅಂಕಗಳು ಪಡೆದಿದ್ದಾರೆ ಎಂದು ತಿಳಿದುಬಂದಿದೆ.

For Quick Alerts
ALLOW NOTIFICATIONS  
For Daily Alerts

English summary
Major blunder in neet result 2020. Topper student ranked in failed list.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X