ರಾಷ್ಟ್ರೀಯ ಪರೀಕ್ಷಾ ಮಂಡಳಿಯು (ಎನ್‌ಬಿಇ) ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರ್ಯಾನ್ಸ್ ಟೆಸ್ಟ್ (NEET) ಸೂಪರ್ ಸ್ಪೆಷಾಲಿಟಿ (SS) ಪರೀಕ್ಷೆ 2021ರ ಪ್ರವೇಶ ಪತ್ರವನ್ನು ಇಂದು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಪರೀಕ್ಷೆಗೆ ನೊಂದಾಯಿಸಿಕೊಂಡ ಅಭ್ಯರ್ಥಿಗಳು ಪ್ರವೇಶ ಪತ್ರ ಪ್ರಕಟವಾದ ಬಳಿಕ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಡಿಎಂ, ಎಂಸಿಹೆಚ್, ಮತ್ತು ಡಿಎನ್‌ಬಿ ಸೂಪರ್ ಸ್ಪೆಷಾಲಿಟಿ ಕೋರ್ಸ್‌ಗಳಿಗೆ ಪ್ರವೇಶ ಪಡೆಯಬಯಸುವ ಅಭ್ಯರ್ಥಿಗಳು NEET SS 2021 ಪರೀಕ್ಷೆಯನ್ನು ತೆಗೆದುಕೊಳ್ಳಬೇಕಿರುತ್ತದೆ. ಈಗಾಗಲೇ ಪರೀಕ್ಷೆಗೆ ನೊಂದಾಯಿಸಿಕೊಂಡ ಅಭ್ಯರ್ಥಿಗಳು ಪ್ರವೇಏಶೇ ಪತ್ರ ಪ್ರಕಟವಾದ ಬಳಿಕ ಡೌನ್‌ಲೋಡ್ ಮಾಡಿಕೊಳ್ಳಿ.
ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರ್ಯಾನ್ಸ್ ಟೆಸ್ಟ್ (NEET) ಸೂಪರ್ ಸ್ಪೆಷಾಲಿಟಿ (SS) 2021ರ ಪರೀಕ್ಷೆಯನ್ನು ನವೆಂಬರ್ 13 ಮತ್ತು 14ರಂದು ನಿಗದಿಪಡಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಪರೀಕ್ಷೆಯನ್ನು ಮುಂದೂಡಲಾಗಿದ್ದು, ಪರೀಕ್ಷೆಯನ್ನು ಜನವರಿ 10,2022ರಂದು ನಿಗದಿಪಡಿಸಲಾಗಿದೆ. ಫಲಿತಾಂಶವನ್ನು ಜನವರಿ 31,2022ರೊಳಗೆ ಪ್ರಕಟ ಮಾಡುವ ಸಾಧ್ಯತೆ ಇದೆ. ತರಗತಿಗಳು ಫೆಬ್ರವರಿ ತಿಂಗಳಾರ್ಧದಲ್ಲಿ ಆರಂಭವಾಗುವ ನಿರೀಕ್ಷೆಯಿದೆ. ಪ್ರವೇಶ ಪತ್ರ ರಿಲೀಸ್ ಆದ ಬಳಿಕ ಡೌನ್‌ಲೋಡ್ ಮಾಡುವುದು ಹೇಗೆ ಎನ್ನುವುದನ್ನು ತಿಳಿಯಲು ಮುಂದೆ ಓದಿ.
ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಲು ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿ :
ಸ್ಟೆಪ್ 1: ಅಭ್ಯರ್ಥಿಗಳು ಎನ್‌ಬಿಇ ಅಧಿಕೃತ ವೆಬ್‌ಸೈಟ್ https://gate.iitkgp.ac.in/ ಗೆ ಭೇಟಿ ನೀಡಿ.
ಸ್ಟೆಪ್ 2: ಹೋಂ ಪೇಜ್‌ನಲ್ಲಿ ಲಭ್ಯವಿರುವ Admit Card is now available for download ಮುಂದಿರುವ click here ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ನಂತರ ಅಭ್ಯರ್ಥಿಗಳು ಎನ್‌ರೋಲ್ಮೆಂಟ್ ಐಡಿ/ ಇ-ಮೇಲ್ ವಿಳಾಸ ಮತ್ತು ಪಾಸ್‌ವರ್ಡ್ ನೀಡಿ ಲಾಗಿನ್ ಆಗಿ
ಸ್ಟೆಪ್ 4: ಪ್ರವೇಶ ಪತ್ರವು ಸ್ಕ್ರೀನ್ ಮೇಲೆ ಲಭ್ಯವಾಗುವುದು ಅದನ್ನು ಡೌನ್‌ಲೋಡ್ ಮಾಡಿಕೊಂಡು ಸೇವ್ ಮಾಡಿಕೊಳ್ಳಿ
ಒಮ್ಮೆ ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡಿದ ನಂತರ ಅರ್ಜಿದಾರರು ಒಂದು ಪ್ರಿಂಟೌಟ್ ಅನ್ನು ತೆಗೆದಿಟ್ಟುಕೊಳ್ಳಿ ಮತ್ತು ಅದನ್ನು ಪರೀಕ್ಷೆಗೆ ತೆಗೆದುಕೊಂಡು ಹೋಗಬೇಕಿರುತ್ತದೆ. ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರವು ನೀಡಿರುವ ತಮ್ಮ ಗುರುತಿನ ಚೀಟಿಯನ್ನು ತೆಗೆದುಕೊಂಡು ಹೋಗಬೇಕಿರುತ್ತದೆ. ಈ ಪರೀಕ್ಷೆಗಳ ಬಗೆಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಇಚ್ಚಿಸುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಅನ್ನು ವೀಕ್ಷಿಸಿ.


Click it and Unblock the Notifications











