ದಿ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯ ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರೆನ್ಸ್ ಟೆಸ್ಟ್‌ನ ಪರೀಕ್ಷಾ ಪ್ರವೇಶ ಪತ್ರವು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಈ ಪರೀಕ್ಷೆ ಪಾಸಾದ ವಿದ್ಯಾರ್ಥಿಗಳು ಎಂಬಿಬಿಎಸ್/ ಬಿಡಿಎಸ್ ಕೋರ್ಸಿಗೆ ಸೀಟು ಪಡೆಯುತ್ತಾರೆ.

ನೀಟ್ ಪರೀಕ್ಷೆಯು ಮೇ 3,2020 ರಂದು ನಡೆಯಲಿದ್ದು ಪರೀಕ್ಷೆಯು ಪೆನ್-ಪೇಪರ್ ಮಾದರಿಯಲ್ಲಿ ನಡೆಯಲಿದೆ.
ಪರೀಕ್ಷಾ ಫಲಿತಾಂಶವು ಜೂನ್ 4,2020 ರಂದು ಪ್ರಕಟವಾಗುತ್ತದೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಪರೀಕ್ಷಾ ಪ್ರವೇಶ ಪತ್ರದ ಜೊತೆಗೆ ನಿಮ್ಮ ಇತ್ತೀಚಿನ ಎರಡು ಭಾವಚಿತ್ರ ಮತ್ತು ಯಾವುದಾದರೂ ಒಂದು ಗುರುತಿನ ಚೀಟಿಯನ್ನು ಒಯ್ಯತಕ್ಕದ್ದು.
ನೀಟ್ ಯುಜಿ 2020 ರ ಪರೀಕ್ಷಾ ಪ್ರವೇಶ ಪತ್ರ ಡೌನ್‌ಲೋಡ್ ಮಾಡಲು ಈ ಸ್ಟೆಪ್ಸ್ ಫಾಲೋ ಮಾಡಿ:
ಸ್ಟೆಪ್ 1: ವಿದ್ಯಾರ್ಥಿಗಳು ಎನ್‌ಟಿಎ ಅಧಿಕೃತ ವೆಬ್‌ಸೈಟ್ https://ntaneet.nic.in/Ntaneet/Welcome.aspx ಗೆ ಹೋಗಿ
ಸ್ಟೆಪ್ 2: ನಂತರ 'Download Admit Card' ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ನಂತರ ಹೋಸ ಸ್ಕ್ರೀನ್ ತೆರೆಯುತ್ತದೆ ಅಲ್ಲಿ ನಿಮ್ಮ ಅಪ್ಲಿಕೇಶನ್ ನಂಬರ್, ಜನ್ಮ ದಿನಾಂದ ಮತ್ತು ಸೆಕ್ಯುರಿಟಿ ಪಿನ್ ನೀಡಿ
ಸ್ಟೆಪ್ 4: ಕೇಳಲಾದ ಮಾಹಿತಿಯನ್ನು ಭರ್ತಿ ಮಾಡಿದ ನಂತರ Submit Button ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 5: ಸ್ಕ್ರೀನ್ ಮೇಲೆ ಪ್ರವೇಶ ಪತ್ರವು ಕಾಣುತ್ತದೆ ಅದನ್ನು ಡೌನ್‌ಲೋಡ್ ಮಾಡಿ ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ
ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ ನಲ್ಲಿ ಪ್ರವೇಶ ಪತ್ರವನ್ನು ಪಡೆಯಲು ವಿಫಲರಾದಲ್ಲಿ [email protected].
ವಿಳಾಸಕ್ಕೆ ಮೇಲ್ ಮಾಡುವ ಮೂಲಕ ಪ್ರವೇಶ ಪತ್ರವನ್ನು ಪಡೆಯಬಹುದು. ಮೇಲ್ ಮಾಡುವಾಗ "NEET Admit Card" ಎಂದು Subject Line ನಲ್ಲಿ ನಮೂದಿಸಿರಬೇಕು. ಮೇಲ್ ಮಾಡಿದ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರವನ್ನು ಪೋಸ್ಟ್ ಮೂಲಕ ತಲುಪಿಸಲಾಗುವುದು ಎಂಬುದನ್ನು ವಿದ್ಯಾರ್ಥಿಗಳು ಗಮನದಲ್ಲಿಡುವುದು ಅಗತ್ಯ.


Click it and Unblock the Notifications











