NEET UG 2022 ಪ್ರವೇಶ ಪತ್ರ : ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET) ಯುಜಿ ಅಥವಾ NEET-UG 2022 ಪ್ರವೇಶ ಪತ್ರವನ್ನು ಬಿಡುಗಡೆ ಮಾಡಲಾಗಿದೆ. ಪರೀಕ್ಷೆಗೆ ನೊಂದಾಯಿಸಿಕೊಂಡ ವಿದ್ಯಾರ್ಥಿಗಳು ಇದೀಗ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

NEET-UG ಪರೀಕ್ಷೆ 2022 :
ಈ ವರ್ಷ ಯುಜಿ ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ಜುಲೈ 17 ರಂದು ನಡೆಸಲು ನಿರ್ಧರಿಸಲಾಗಿದೆ. ಪರೀಕ್ಷೆಯು ಪೆನ್ ಮತ್ತು ಪೇಪರ್ ಮೋಡ್‌ನಲ್ಲಿ ವಿವಿಧ ಕೇಂದ್ರಗಳಲ್ಲಿ ಆಫ್‌ಲೈನ್‌ನಲ್ಲಿ ನಡೆಯಲಿದೆ.

ನೀಟ್ ಯುಜಿ 2022 ಪ್ರವೇಶ ಪತ್ರ ಡೌನ್‌ಲೋಡ್ ಮಾಡುವುದು ಹೇಗೆ ?:
ಸ್ಟೆಪ್ 1: ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್ https://neet.nta.nic.in/ ಗೆ ಭೇಟಿ
ಸ್ಟೆಪ್ 2: ಹೋಂ ಪೇಜ್ ನಲ್ಲಿ ಲಭ್ಯವಿರುವ ನೀಟ್ ಯುಜಿ 2022 ಪ್ರವೇಶ ಪತ್ರದ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ಹೊಸ ಪುಟ ತೆರೆಯುತ್ತದೆ ಅಲ್ಲಿ ಪ್ರವೇಶ ಪತ್ರದ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 4: ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಸಬ್‌ಮಿಟ್ ಮಾಡಿ
ಸ್ಟೆಪ್ 5: ಪ್ರವೇಶ ಪತ್ರವು ಸ್ಕ್ರೀನ್ ಮೇಲೆ ಮೂಡುವುದು
ಸ್ಟೆಪ್ 6: ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿ ಪ್ರಿಂಟೌಟ್ ತೆಗೆದುಕೊಳ್ಳಿ
ಗಮನದಲ್ಲಿಡಿ :
ಅರ್ಜಿದಾರರು ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿದ ನಂತರ ನಮೂದಿಸಿರುವ ಎಲ್ಲಾ ಸೂಚನೆಗಳನ್ನು ಓದಬೇಕು. NEET ಪ್ರವೇಶ ಪತ್ರವು ಸ್ವಯಂ-ಘೋಷಣೆ ನಮೂನೆಯನ್ನು ಸಹ ಒಳಗೊಂಡಿರಬಹುದು, ಅಲ್ಲಿ ವಿದ್ಯಾರ್ಥಿಗಳು ತಮ್ಮ ಇತ್ತೀಚಿನ ಆರೋಗ್ಯ ಮತ್ತು ಪ್ರಯಾಣದ ಇತಿಹಾಸವನ್ನು ನಮೂದಿಸಲು ಕೇಳಲಾಗುತ್ತದೆ.
NEET UG 2022 ಪರೀಕ್ಷೆಯ ಮಾದರಿಯ ಪ್ರಕಾರ, ವೈದ್ಯಕೀಯ ಪ್ರವೇಶ ಪರೀಕ್ಷೆಯು ಭೌತಶಾಸ್ತ್ರ, ರಸಾಯನಶಾಸ್ತ್ರ, ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ಸೇರಿದಂತೆ ನಾಲ್ಕು ವಿಷಯಗಳನ್ನು ಒಳಗೊಂಡಿರುತ್ತದೆ. NEET ಪತ್ರಿಕೆ 2022 ರಲ್ಲಿನ ಪ್ರತಿಯೊಂದು ವಿಷಯವು ಒಂದು ವಿಭಾಗದಲ್ಲಿ ಆಂತರಿಕ ಆಯ್ಕೆಗಳೊಂದಿಗೆ ಎರಡು ವಿಭಾಗಗಳನ್ನು ಒಳಗೊಂಡಿರುತ್ತದೆ.
ಅಭ್ಯರ್ಥಿಗಳು ನೇರವಾಗಿ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.


Click it and Unblock the Notifications











