ವೈದ್ಯಕೀಯ ಕೌನ್ಸೆಲಿಂಗ್ ಸಮಿತಿಯು (MCC) ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ ಯುಜಿ (NEET UG) 2022 ಕೌನ್ಸೆಲಿಂಗ್‌ಗೆ ಇಂದಿನಿಂದ ನೊಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಿದೆ. ನೀಟ್ 2022 ಯುಜಿ ಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಕೌನ್ಸೆಲಿಂಗ್ ನಲ್ಲಿ ಭಾಗವಹಿಸಲು ಆನ್‌ಲೈನ್‌ನಲ್ಲಿ ಅಧಿಕೃತ ವೆಬ್‌ಸೈಟ್ mcc.nic.in ನಲ್ಲಿ ನೋಂದಾಯಿಸಿಕೊಳ್ಳಬಹುದು.

ನೀಟ್ ಯುಜಿ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಕೇಂದ್ರೀಯ ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳು, ನೌಕರರ ರಾಜ್ಯ ವಿಮಾ ನಿಗಮ (ESIC), ಸಶಸ್ತ್ರ ಪಡೆ ವೈದ್ಯಕೀಯ ಸೇವೆಗಳು (AFMS) ಮತ್ತು AIIMS ಮತ್ತು JIPMER ನಲ್ಲಿ ಅಖಿಲ ಭಾರತ ಕೋಟಾ (AIQ) ಅಡಿಯಲ್ಲಿ ಎಂಬಿಬಿಎಸ್, ಬಿಡಿಎಸ್, ಬಿಎಸ್ಸಿ ನರ್ಸಿಂಗ್ ಕೋರ್ಸ್ ಗಳಿಗೆ ಸೀಟು ಪಡೆಯಲು ಕೌನ್ಸೆಲಿಂಗ್ ಹಾಜರಾಗಬೇಕಿರುತ್ತದೆ.
MCC NEET ಕೌನ್ಸೆಲಿಂಗ್ ವೇಳಾಪಟ್ಟಿಯ ಪ್ರಕಾರ, ಇಂದು ಪ್ರಾರಂಭವಾಗುವ ಮೊದಲ ಸುತ್ತಿನ ನೋಂದಣಿ ಮತ್ತು ಶುಲ್ಕ ಪಾವತಿ ವಿಂಡೋ ಅಕ್ಟೋಬರ್ 17ರ ವರೆಗೆ ಲಭ್ಯವಿರುತ್ತದೆ. ಈ ಅವಧಿಯಲ್ಲಿ ನೋಂದಾಯಿಸಿಕೊಳ್ಳುವವರು ತಮ್ಮ ಆಯ್ಕೆಗಳನ್ನು ಅಕ್ಟೋಬರ್ 18 ರವರೆಗೆ ಭರ್ತಿ ಮಾಡಬಹುದು ಮತ್ತು ಆಯ್ಕೆ ಮಾಡಿಕೊಳ್ಳಬಹುದು.
ಅಕ್ಟೋಬರ್ 17 ಮತ್ತು ಅಕ್ಟೋಬರ್ 18 ರ ನಡುವೆ ಅಭ್ಯರ್ಥಿಗಳ ಪರಿಶೀಲನೆಯನ್ನು ಸಂಸ್ಥೆಗಳು ನಡೆಸಿದರೆ, MCC NEET ಯುಜಿ ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶವನ್ನು ಅಕ್ಟೋಬರ್ 21 ರಂದು ಪ್ರಕಟಿಸಲಾಗುತ್ತದೆ. ಅಖಿಲ ಭಾರತ ಕೋಟಾ (AIQ) ಸೀಟುಗಳಿಗೆ MCC NEET UG ಕೌನ್ಸೆಲಿಂಗ್ ಈ ವರ್ಷ ನಾಲ್ಕು ಸುತ್ತುಗಳಲ್ಲಿ ನಡೆಯಲಿದೆ.
NEET ಕೌನ್ಸೆಲಿಂಗ್ 2022: ಅಗತ್ಯವಿರುವ ದಾಖಲೆಗಳ ಪಟ್ಟಿ
* ನೀಟ್ ಯುಜಿ ಪ್ರವೇಶ ಪತ್ರ
* ನೀಟ್ ಯುಜಿ ರ್ಯಾಂಕ್ ಕಾರ್ಡ್
* ಅಭ್ಯರ್ಥಿಯ ಭಾವಚಿತ್ರ
* ಅಭ್ಯರ್ಥಿಯ ಸಹಿ
* ಜನ್ಮ ದಿನಾಂಕ ಪ್ರಮಾಣಪತ್ರ (10 ನೇ ತರಗತಿ ಪಾಸ್ ಪ್ರಮಾಣಪತ್ರ)
* ಅರ್ಹತಾ ಪ್ರಮಾಣಪತ್ರ (12 ನೇ ತರಗತಿ ಮಾರ್ಕ್‌ಶೀಟ್ ಅಥವಾ ಪ್ರಮಾಣಪತ್ರ)
* ವರ್ಗ ಪ್ರಮಾಣಪತ್ರ (ಸಾಮಾನ್ಯ ವರ್ಗವನ್ನು ಹೊರತುಪಡಿಸಿ)
* ನಡವಳಿಕೆ ಪ್ರಮಾಣಪತ್ರ
* ವೈದ್ಯಕೀಯ ಫಿಟ್ನೆಸ್ ಪ್ರಮಾಣಪತ್ರ
* ಗುರುತಿನ ಪುರಾವೆ (ಆಧಾರ್ ಕಾರ್ಡ್/ಪಾಸ್‌ಪೋರ್ಟ್/ವೋಟರ್ ಐಡಿ/ಪ್ಯಾನ್ ಕಾರ್ಡ್/ಚಾಲನಾ ಪರವಾನಗಿ/ರೇಷನ್ ಕಾರ್ಡ್)
ನೀಟ್ ಯುಜಿ ಕೌನ್ಸೆಲಿಂಗ್ ಕುರಿತ ಪ್ರಕಟಣೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.


Click it and Unblock the Notifications











