
ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ(ನೀಟ್)ಯ ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಸೋಮವಾರ ಪ್ರಕಟ ಮಾಡಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳು ಇದೀಗ ತಮ್ಮ ಫಲಿತಾಂಶವನ್ನು ವೀಕ್ಷಿಸಬಹುದು.
ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET-UG) 2021ರ ಫಲಿತಾಂಶವನ್ನು ಇಮೇಲ್ ಮೂಲಕ ವಿದ್ಯಾರ್ಥಿಗಳಿಗೆ ಕಳುಹಿಸವುದಾಗಿ ತಿಳಿಸಿದೆ. ಸೋಮವಾರ ರಾತ್ರಿ 8 ರಿಂದ 9 ಗಂಟೆ ಸುಮಾರಿಗೆ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. ಅಂಕಪಟ್ಟಿಗಳ ಜೊತೆಗೆ ಅಂತಿಮ ಕೀ ಉತ್ತರಗಳನ್ನು ಕೂಡ ಬಿಡುಗಡೆ ಮಾಡಲಾಗಿರುತ್ತದೆ. ಅಭ್ಯರ್ಥಿಗಳು ಫಲಿತಾಂಶದ ಜೊತೆಗೆ ಅಂತಿಮ ಕೀ ಉತ್ತರಗಳನ್ನು ಸಹ ಚೆಕ್ ಮಾಡಿಕೊಳ್ಳಬಹುದು.
16 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರು :
ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ಪ್ರವೇಶ ಪರೀಕ್ಷೆಗಳನ್ನು 12 ಸೆಪ್ಟೆಂಬರ್ 2021 ರವರೆಗೆ ನಡೆಸಲಾಗಿತ್ತು. ಈ ವರ್ಷ ಸುಮಾರು 16 ಲಕ್ಷ ಅಭ್ಯರ್ಥಿಗಳು ನೀಟ್ ಯುಜಿ ಪರೀಕ್ಷೆಗೆ ಹಾಜರಾಗಿದ್ದರು. ತದನಂತರ 15 ಅಕ್ಟೋಬರ್ 2021 ರಂದು ತಾತ್ಕಾಲಿಕ ಕೀ ಉತ್ತರವನ್ನು ಬಿಡುಗಡೆ ಮಾಡಿತ್ತು.
ವೈದ್ಯಕೀಯ ನೀಟ್ ಪರೀಕ್ಷೆ ಬರೆದವರ ವಿವರ :
ಭಾರತದಲ್ಲಿ 83,075 ವೈದ್ಯಕೀಯ, 26,949 ದಂತ ವೈದ್ಯಕೀಯ, 52,720 ಆಯುಷ್ ಮತ್ತು 603 ಪಶುವೈದ್ಯಕೀಯ ಸೀಟು ಸೇರಿದಂತೆ 3 ವಿಭಾಗಳಿಗೆ ಮೂರು ಗಂಟೆಗಳ ಅವಧಿಯಲ್ಲಿ 720 ಅಂಕಗಳಿಗೆ ನಡೆಸಿದ ಪ್ರವೇಶ ಪರೀಕ್ಷೆ ನಡೆಸಲಾಗಿತ್ತು. ನೀಟ್ 2021 ಅರ್ಹತೆ ಪಡೆದುಕೊಳ್ಳುವ ಆಕಾಂಕ್ಷಿಗಳನ್ನು NEET 2021 ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಲು ಕರೆಯಲಾಗುವುದು.
ಕೌನ್ಸೆಲಿಂಗ್ ವೇಳಾಪಟ್ಟಿ:
ಅತೀ ಶೀಘ್ರದಲ್ಲಿ ಕೌನ್ಸೆಲಿಂಗ್ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. ಪದವಿಪೂರ್ವ ವೈದ್ಯಕೀಯ/ದಂತ ಕೋರ್ಸ್‌ಗಳ ಎಲ್ಲಾ ಸೀಟುಗಳಿಗೆ NEET (UG) ಮೂಲಕ ಪ್ರವೇಶವನ್ನು ಮಾಡಲಾಗುತ್ತದೆ. 2021ನೇ ಸಾಲಿನ ಕೌನ್ಸೆಲಿಂಗ್ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ತಿಳಿದು ಬಂದಿದೆ. ಕಟ್-ಆಫ್‌ಗಿಂತ ಹೆಚ್ಚು ಅಂಕ ಗಳಿಸಿದವರು ಅಖಿಲ ಭಾರತ ಕೋಟಾ ಕೌನ್ಸೆಲಿಂಗ್‌ನ ಶೇಕಡಾ 15ರಷ್ಟು ಅರ್ಹರಾಗುತ್ತಾರೆ. 15 ಪ್ರತಿಶತದಲ್ಲಿ ಅಖಿಲ ಭಾರತ ಕೋಟಾವನ್ನು NEET 2021 ರ ಶ್ರೇಣಿಯ ಆಧಾರದ ಮೇಲೆ ಮತ್ತು MCI/NMC/DCI ಯ ಶಾಸನಬದ್ಧ ನಿಯಂತ್ರಣದ ಪ್ರಕಾರ ಮಾತ್ರ ಭರ್ತಿ ಮಾಡಲಾಗುತ್ತದೆ. ಉಳಿದ ಶೇ.85ರಷ್ಟು ಪ್ರವೇಶಕ್ಕಾಗಿ ರಾಜ್ಯಗಳು ವೈಯಕ್ತಿಕ ಕೌನ್ಸೆಲಿಂಗ್ ಅನ್ನು ನಡೆಸುತ್ತವೆ.


Click it and Unblock the Notifications











