NEET UG Result 2021 : ನೀಟ್ ಫಲಿತಾಂಶ ಮತ್ತು ಅಂತಿಮ ಕೀ ಉತ್ತರ ಪ್ರಕಟ

ನೀಟ್ ಯುಜಿ ಪರೀಕ್ಷಾ ಫಲಿತಾಂಶ ಮತ್ತು ಅಂತಿಮ ಕೀ ಉತ್ತರ ರಿಲೀಸ್

ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ(ನೀಟ್)ಯ ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಸೋಮವಾರ ಪ್ರಕಟ ಮಾಡಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳು ಇದೀಗ ತಮ್ಮ ಫಲಿತಾಂಶವನ್ನು ವೀಕ್ಷಿಸಬಹುದು.

 

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET-UG) 2021ರ ಫಲಿತಾಂಶವನ್ನು ಇಮೇಲ್ ಮೂಲಕ ವಿದ್ಯಾರ್ಥಿಗಳಿಗೆ ಕಳುಹಿಸವುದಾಗಿ ತಿಳಿಸಿದೆ. ಸೋಮವಾರ ರಾತ್ರಿ 8 ರಿಂದ 9 ಗಂಟೆ ಸುಮಾರಿಗೆ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. ಅಂಕಪಟ್ಟಿಗಳ ಜೊತೆಗೆ ಅಂತಿಮ ಕೀ ಉತ್ತರಗಳನ್ನು ಕೂಡ ಬಿಡುಗಡೆ ಮಾಡಲಾಗಿರುತ್ತದೆ. ಅಭ್ಯರ್ಥಿಗಳು ಫಲಿತಾಂಶದ ಜೊತೆಗೆ ಅಂತಿಮ ಕೀ ಉತ್ತರಗಳನ್ನು ಸಹ ಚೆಕ್ ಮಾಡಿಕೊಳ್ಳಬಹುದು.

16 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರು :

ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ಪ್ರವೇಶ ಪರೀಕ್ಷೆಗಳನ್ನು 12 ಸೆಪ್ಟೆಂಬರ್ 2021 ರವರೆಗೆ ನಡೆಸಲಾಗಿತ್ತು. ಈ ವರ್ಷ ಸುಮಾರು 16 ಲಕ್ಷ ಅಭ್ಯರ್ಥಿಗಳು ನೀಟ್ ಯುಜಿ ಪರೀಕ್ಷೆಗೆ ಹಾಜರಾಗಿದ್ದರು. ತದನಂತರ 15 ಅಕ್ಟೋಬರ್ 2021 ರಂದು ತಾತ್ಕಾಲಿಕ ಕೀ ಉತ್ತರವನ್ನು ಬಿಡುಗಡೆ ಮಾಡಿತ್ತು.

ವೈದ್ಯಕೀಯ ನೀಟ್ ಪರೀಕ್ಷೆ ಬರೆದವರ ವಿವರ :

ಭಾರತದಲ್ಲಿ 83,075 ವೈದ್ಯಕೀಯ, 26,949 ದಂತ ವೈದ್ಯಕೀಯ, 52,720 ಆಯುಷ್ ಮತ್ತು 603 ಪಶುವೈದ್ಯಕೀಯ ಸೀಟು ಸೇರಿದಂತೆ 3 ವಿಭಾಗಳಿಗೆ ಮೂರು ಗಂಟೆಗಳ ಅವಧಿಯಲ್ಲಿ 720 ಅಂಕಗಳಿಗೆ ನಡೆಸಿದ ಪ್ರವೇಶ ಪರೀಕ್ಷೆ ನಡೆಸಲಾಗಿತ್ತು. ನೀಟ್ 2021 ಅರ್ಹತೆ ಪಡೆದುಕೊಳ್ಳುವ ಆಕಾಂಕ್ಷಿಗಳನ್ನು NEET 2021 ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಲು ಕರೆಯಲಾಗುವುದು.

 

ಕೌನ್ಸೆಲಿಂಗ್ ವೇಳಾಪಟ್ಟಿ:

ಅತೀ ಶೀಘ್ರದಲ್ಲಿ ಕೌನ್ಸೆಲಿಂಗ್ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. ಪದವಿಪೂರ್ವ ವೈದ್ಯಕೀಯ/ದಂತ ಕೋರ್ಸ್‌ಗಳ ಎಲ್ಲಾ ಸೀಟುಗಳಿಗೆ NEET (UG) ಮೂಲಕ ಪ್ರವೇಶವನ್ನು ಮಾಡಲಾಗುತ್ತದೆ. 2021ನೇ ಸಾಲಿನ ಕೌನ್ಸೆಲಿಂಗ್ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ತಿಳಿದು ಬಂದಿದೆ. ಕಟ್-ಆಫ್‌ಗಿಂತ ಹೆಚ್ಚು ಅಂಕ ಗಳಿಸಿದವರು ಅಖಿಲ ಭಾರತ ಕೋಟಾ ಕೌನ್ಸೆಲಿಂಗ್‌ನ ಶೇಕಡಾ 15ರಷ್ಟು ಅರ್ಹರಾಗುತ್ತಾರೆ. 15 ಪ್ರತಿಶತದಲ್ಲಿ ಅಖಿಲ ಭಾರತ ಕೋಟಾವನ್ನು NEET 2021 ರ ಶ್ರೇಣಿಯ ಆಧಾರದ ಮೇಲೆ ಮತ್ತು MCI/NMC/DCI ಯ ಶಾಸನಬದ್ಧ ನಿಯಂತ್ರಣದ ಪ್ರಕಾರ ಮಾತ್ರ ಭರ್ತಿ ಮಾಡಲಾಗುತ್ತದೆ. ಉಳಿದ ಶೇ.85ರಷ್ಟು ಪ್ರವೇಶಕ್ಕಾಗಿ ರಾಜ್ಯಗಳು ವೈಯಕ್ತಿಕ ಕೌನ್ಸೆಲಿಂಗ್ ಅನ್ನು ನಡೆಸುತ್ತವೆ.

For Quick Alerts
ALLOW NOTIFICATIONS  
For Daily Alerts

English summary
nta neet ug 2021 result released and final answer key also released today.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X