ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫಾರ್ಮಾಸೆಟಿಕಲ್ ಎಜುಕೇಷನ್ ಅಂಡ್ ರಿಸರ್ಚ್, ಜಂಟಿ ಪ್ರವೇಶ ಪರೀಕ್ಷೆಯನ್ನು ಸೆಪ್ಟೆಂಬರ್ 28,2020ರಂದು ನಡೆಸುವುದಾಗಿ ಪ್ರಕಟಣೆ ಹೊರಡಿಸಿದೆ.
NIPER ಜೆಇಇ ಪರೀಕ್ಷೆಯು ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಯಾಗಿದ್ದು, ಫಾರ್ಮಸಿ ಕ್ಷೇತ್ರದ ಪ್ರೋಸ್ಟ್ ಗ್ರಾಜುಯೇಟ್ ಮತ್ತು ಡಾಕ್ಟರೇಟ್ ಲೆವೆಲ್ ಕೋರ್ಸ್ಗಳ ಪ್ರವೇಶಾತಿಗಾಗಿ ಈ ಪರೀಕ್ಷೆಯನ್ನು ನಡೆಸಲಾಗುತ್ತದೆ.
ಈ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫಾರ್ಮಾಸೆಟಿಕಲ್ ಎಜುಕೇಷನ್ ಅಂಡ್ ರಿಸರ್ಚ್ ಅಧಿಕೃತ ವೆಬ್ಸೈಟ್ https://www.niperahm.ac.in/ ಗೆ ಭೇಟಿ ನೀಡಿ, ಪರೀಕ್ಷೆ ಕುರಿತ ಮಾಹಿತಿಯನ್ನು ಪಡೆಯಬಹುದು. ಈ ಹಿಂದೆ NIPER JEE 2020 ಪರೀಕ್ಷೆಯನ್ನು ಜುಲೈ 25, 2020 ರಂದು ನಡೆಸಲು ತೀರ್ಮಾನಿಸಲಾಗಿತ್ತು. ಇತರೆ ಫಾರ್ಮಸಿ ಕೋರ್ಸ್ಗಳು, ಎಂ.ಟೆಕ್ (ಫಾರ್ಮ), ಎಂ.ಎಸ್ (ಫಾರ್ಮ), ಎಂಬಿಎ(ಫಾರ್ಮ) ಪ್ರವೇಶಾತಿಗೆ GPAT ಸ್ಕೋರ್ ಅನ್ನು ಪರಿಗಣಿಸಲಾಗುತ್ತದೆ.
For Daily Alerts