Schools Reopening: ದೇಶದಲ್ಲಿ ನ.30ರ ವರೆಗೆ ಯಾವುದೇ ಶಾಲೆಗಳು ರೀ ಓಪನ್ ಆಗಲ್ಲ

ಕೇಂದ್ರ ಗೃಹ ಸಚಿವಾಲಯವು ನವೆಂಬರ್.30 ರವರೆಗೆ ಅನ್‌ಲಾಕ್‌ 5.0 ಮಾರ್ಗಸೂಚಿಗಳನ್ನು ವಿಸ್ತರಣೆ ಮಾಡಿದೆ. ನವೆಂಬರ್ 30,2020ರ ವರೆಗೆ ಶಾಲೆಗಳನ್ನು ತೆರೆಯುವಂತಿಲ್ಲ ಎಂದು ಕಡ್ಡಾಯ ಆದೇಶವನ್ನು ಹೊರಡಿಸಿದೆ.

ನ.30ರ ವರೆಗೆ ದೇಶದಲ್ಲಿ ಶಾಲೆಗಳನ್ನು ತೆರೆಯುವಂತಿಲ್ಲ

 

ಈ ಹಿಂದೆ ಸೆಪ್ಟೆಂಬರ್ 30 ರಂದು ಅನ್‌ಲಾಕ್‌ 5.0 ಮಾರ್ಗಸೂಚಿಗಳನ್ನು ಅಕ್ಟೋಬರ್ 31 ರವರೆಗೆ ಜಾರಿಯಲ್ಲಿರುವಂತೆ ಹೊರಡಿಸಿತ್ತು. ಇದೀಗ ಅನ್‌ಲಾಕ್ 5.0 ಮಾರ್ಗಸೂಚಿಗಳೇ ನವೆಂಬರ್ 30,2020 ರವರೆಗೆ ಮುಂದುವರೆಯಲಿವೆ ಎಂದು ಆದೇಶ ಹೊರಡಿಸಿದೆ.

ಅನ್‌ಲಾಕ್ 5.0 ಮಾರ್ಗಸೂಚಿ ಪ್ರಕಾರ ದೇಶದಾದ್ಯಂತ ನವೆಂಬರ್ 30,2020 ರವರೆಗೆ ಶಾಲೆಗಳನ್ನು ತೆರೆಯುವಂತಿಲ್ಲ. ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಮಾತ್ರ ಶಾಲೆಗಳಿಗೆ ಹಾಜರಾಗಬಹುದು. ಪೋಷಕರ ಅನುಮತಿಯೊಂದಿಗೆ ವಿದ್ಯಾರ್ಥಿಗಳು ಶಾಲೆಗಳಿಗೆ ಎಲ್ಲಾ ಸುರಕ್ಷತಾ ಕ್ರಮಗಳೊಂದಿಗೆ ಭೇಟಿ ನೀಡಬಹುದು.

ರಾಜ್ಯದಲ್ಲಿ ನ.17 ರಿಂದ ಕಾಲೇಜು ಆರಂಭ:

ಕರ್ನಾಟಕ ಸರ್ಕಾರವು ಇಂಜಿನಿಯರಿಂಗ್, ಡಿಪ್ಲೊಮ, ಪದವಿ ಕಾಲೇಜುಗಳನ್ನು ನವೆಂಬರ್ 17 ರಿಂದ ಪುನರಾರಂಭಿಸಲು ಶುಕ್ರವಾರ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

For Quick Alerts
ALLOW NOTIFICATIONS  
For Daily Alerts

English summary
MHA extended unlock 5.0 guidelines till November 30. No mass schools reopening till November 30.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X