ಆಧಾರ್ ಕಾರ್ಡ್ ಇದ್ದರೆ ಮಾತ್ರ ದೂರ ಶಿಕ್ಷಣ ಪರೀಕ್ಷೆ

ಶಿಕ್ಷಣ ಕ್ಷೇತ್ರದಲ್ಲಿ ಮತ್ತಷ್ಟು ಪಾರದರ್ಶಕತೆ ತರಲು ಆಧಾರ್ ಕಡ್ಡಾಯಕ್ಕೆ ನಿರ್ಧರಿಸಿದೆ. ಭಾರತೀಯರ ಸಾರ್ವತ್ರಿಕ ಗುರುತಿನ ಚೀಟಿ ಆಧಾರ್ ಇನ್ನು ಮುಂದೆ ದೂರಶಿಕ್ಷಣ ಪರೀಕ್ಷೆಗೂ ಕಡ್ಡಾಯವಾಗಲಿದೆ.

ಆಧಾರ್ ಕಾರ್ಡ್ ನ ಸಮರ್ಪಕ ಬಳಕೆಗೆ ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಮತ್ತಷ್ಟು ಪಾರದರ್ಶಕತೆ ತರಲು ಆಧಾರ್ ಕಡ್ಡಾಯಕ್ಕೆ ನಿರ್ಧರಿಸಿದೆ. ಭಾರತೀಯರ ಸಾರ್ವತ್ರಿಕ ಗುರುತಿನ ಚೀಟಿ ಆಧಾರ್ ಇನ್ನು ಮುಂದೆ ದೂರಶಿಕ್ಷಣ ಪರೀಕ್ಷೆಗೂ ಕಡ್ಡಾಯವಾಗಲಿದೆ.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆಧಾರ್ ಕಡ್ಡಾಯ ಮಾಡಿದ ಬೆನ್ನಲ್ಲೇ ಈಗ ದೂರ ಶಿಕ್ಷಣದ ಪರೀಕ್ಷೆಗಳಿಗೂ ವಿದ್ಯಾರ್ಥಿಗಳು ಆಧಾರ್ ಹೊಂದಿರುವುದು ಕಡ್ಡಾಯವಾಗಿದೆ. ಇನ್ನು ಗುರುತಿನ ಚೀಟಿಯೊಂದಿಗೆ ಹೆಬ್ಬೆರಳ ಗುರುತು ಹೊಂದಾಣಿಕೆಯಾದರೆ ಮಾತ್ರ ಪರೀಕ್ಷೆಗೆ ಅವಕಾಶ ಎನ್ನಲಾಗಿದೆ

ದೂರ ಶಿಕ್ಷಣಕ್ಕೂ ಬೇಕು ಆಧಾರ್

ಪರೀಕ್ಷೆ ಸಮಯದಲ್ಲಿ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗುವುದನ್ನು ತಪ್ಪಿಸಲು ಇದು ಸುಲಭ ಮಾರ್ಗವಾಗಿದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ (ಎಚ್‌ಆರ್‌ಡಿ) ಅನುಮತಿ ಮೇರೆಗೆ, ರಾಷ್ಟ್ರೀಯ ಮುಕ್ತ ಕಲಿಕಾ ಸಂಸ್ಥೆ (ಎನ್ಐಒಎಸ್‌) ಆಧಾರ್ ಅನ್ನು ಕಡ್ಡಾಯ ಮಾಡುವ ತೀರ್ಮಾನ ಕೈಗೊಂಡಿದೆ. ಮುಂದಿನ ವರ್ಷ ಪರೀಕ್ಷೆಗೆ ಹಾಜರಾಗುವವರಿಗೆ ಈ ಹೊಸ ನಿಯಮ ಅನ್ವಯವಾಗಲಿದೆ ಎಂದು ಎನ್‌ಐಎಎಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಾರ್ಚ್‌ನಲ್ಲಿ ನಡೆದ ಪರೀಕ್ಷೆಯಲ್ಲಿ ಸಾಕಷ್ಟು ನಕಲಿ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದನ್ನು ತನಿಖಾ ತಂಡ ಪತ್ತೆಹಚ್ಚಿದೆ. ಇಂತಹ ಚಟುವಟಿಕೆ ತಡೆಯಲು ಆಧಾರ್ ಕಡ್ಡಾಯ ಮಾಡಲಾಗಿದೆ. ಅಲ್ಲದೆ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸ್ಕ್ಯಾನರ್ ಯಂತ್ರಗಳನ್ನು ಅಳವಡಿಸಲಾಗುವುದು. ಯಾವ ವಿದ್ಯಾರ್ಥಿಯ ಹೆಬ್ಬೆರಳ ಗುರುತು ಈಗಾಗಲೇ ನೀಡಿದ ಮಾಹಿತಿ ಜತೆ ತಾಳೆಯಾಗುವುದೋ ಅವರನ್ನು ಮಾತ್ರ ಪರೀಕ್ಷಾ ಕೊಠಡಿಗೆ ಬಿಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಆಧಾರ್ ಕಾರ್ಡ್

ಆಧಾರ್ ಸಂಖ್ಯೆಯು ಪ್ರಾಧಿಕಾರದಿಂದ ನಿರ್ದಿಷ್ಟಪಡಿಸಲಾಗಿರುವ ಪರಿಶೀಲನಾ ಪ್ರಕ್ರಿಯೆಗಳು ತೃಪ್ತಿಕರವಾಗಿ ಪೂರ್ಣಗೊಂಡನಂತರ ಭಾವಿಗುಪ್ರಾವು ("ಪ್ರಾಧಿಕಾರ") ಭಾರತದ ನಿವಾಸಿಗಳಿಗೆ ನೀಡುವ 12 ಅಂಕೆಗಳ ಯಾದೃಚ್ಛಿಕ ಸಂಖ್ಯೆಯಾಗಿರುತ್ತದೆ. ಆಧಾರ್ ಸಂಖ್ಯೆಯು ಯಾವುದೇ ಗುಪ್ತಚರ ಮಾಹಿತಿ ರಹಿತವಾಗಿರುತ್ತದೆ ಹಾಗೂ ಜಾತಿ, ಮತ, ಆದಾಯ, ಆರೋಗ್ಯ, ಭೌಗೋಳಿಕ ಆಧಾರದ ಮೇರೆಗೆ ಜನತೆಯ ಪಾರ್ಶ್ವಚಿತ್ರಣವನ್ನು ನೀಡುವುದಿಲ್ಲ. ಆಧಾರ್ ಸಂಖ್ಯೆಯು ಗುರುತಿನ ಒಂದು ಸಾಕ್ಷಾಧಾರವಾಗಿರುತ್ತದೆ, ಆದಾಗ್ಯೂ, ಅದು ಆಧಾರ್ ಸಂಖ್ಯೆಯನ್ನು ಹೊಂದಿರುವವರಿಗೆ ಸಂಬಂಧಿಸಿದಂತೆ ಅದು ನಾಗರಿಕತೆಯ ಹಕ್ಕನ್ನು ನೀಡುವುದಿಲ್ಲ.

More News  

For Quick Alerts
ALLOW NOTIFICATIONS  
For Daily Alerts

English summary
The National Institute of Open Learning is planning to make Aadhaar verification compulsory for candidates appearing for examinations to ensure there are no proxy students appearing on their behalf,
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+