ನೀವು ಕೂಡ ವಿದ್ಯಾರ್ಥಿವೇತನ ನೀಡಬಹುದು ಅಥವಾ ಪಡೆಯಬಹುದು

ವಿದ್ಯಾರ್ಥಿವೇತನ ಪಡೆಯುವ ಗೊಂದಲ ಇದ್ದರೇ ಅಥವಾ ನಿಮಗೆ ಯಾವುದೇ ರೀತಿಯ ವಿದ್ಯಾರ್ಥಿವೇತನಗಳು ಸಿಕ್ಕಿಲ್ಲವೆಂದರೆ ನೀವು ಹೆಚ್ಚು ತಲೆಕಡಿಸಿಕೊಳ್ಳಬೇಕಿಲ್ಲ, ಏಕೆಂದರೆ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡಲೆಂದೇ ಇಲ್ಲೊಂದು ವೆಬ್ ಪೋರ್ಟಲ್ ರೂಪುಗೊಂಡಿದೆ.

 

www.buddy4study.com ವೆಬ್ ಪೋರ್ಟಲ್ ವಿದ್ಯಾರ್ಥಿವೇತನ ಮತ್ತು ಶಿಕ್ಷಣದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದು, ವಿಭಿನ್ನ ರೀತಿಯಲ್ಲಿ ಸೇವೆ ಒದಗಿಸುತ್ತಿದ್ದೆ.

ದೇಶದಲ್ಲಿ ವಿದ್ಯಾರ್ಥಿ ವೇತನಗಳ ಬಗ್ಗೆ ಸಮಗ್ರ ಮಾಹಿತಿ ನೀಡುವ ಏಕೈಕ್‌ ವೆಬ್‌ಸೈಟ್‌ ಇದಾಗಿದ್ದು, ಇಲ್ಲಿ ಸ್ಕಾಲರ್‌ಶಿಪ್‌ ಅರ್ಜಿ ಫಾರಂಗಳನ್ನು ಸುಲಭವಾಗಿ ಡೌನ್‌ಲೋಡ್‌ ಮಾಡಿಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆ.

ಈ ಪೋರ್ಟಲ್ ಮೂಲಕ ವಿದ್ಯಾರ್ಥಿವೇತನ ಪಡೆಯುವುದು ಮಾತ್ರವಲ್ಲ ವಿದ್ಯಾರ್ಥಿವೇತನವನ್ನು ನೀಡಲು ಬಹುದಾಗಿದೆ.

ನೀವು ಕೂಡ ವಿದ್ಯಾರ್ಥಿವೇತನ ನೀಡಬಹುದು

ಬಡತನ ಮತ್ತು ಆರ್ಥಿಕ ಪರಿಸ್ಥಿತಿಯಿಂದಾಗಿ ಶಿಕ್ಷಣದಿಂದ ದೂರ ಉಳಿದ ವಿದ್ಯಾರ್ಥಿಗಳಿಗೆ ನಿಮ್ಮ ಹೆಸರಿನಲ್ಲಿ ವಿದ್ಯಾರ್ಥಿವೇತನ ನೀಡುವ ಮೂಲಕ ಅಥವಾ ವಿದ್ಯಾರ್ಥಿವೇತನಗಳ ಬಗ್ಗೆ ಮಾಹಿತಿಯನ್ನು ನೀಡುತ್ತ ವಿದ್ಯಾರ್ಥಿಗಳಿಗೆ ಸಹಾಯಹಸ್ತ ಚಾಚಬಹುದು.

 

ವಿದ್ಯಾರ್ಥಿವೇತನದ ಮಾಹಿತಿಗಳನ್ನು ಸುಲಭವಾಗಿ ಪಡೆಯಲು ಹಾಗೂ ವಿದ್ಯಾರ್ಥಿವೇತನಗಳಿಗೆ ನಿಮ್ಮದೇ ಆದ ಕೊಡುಗೆಗಳನ್ನು ನೀಡಲು ಸಹಾಕಾರಿಯಾಗುವ ರೀತಿಯಲ್ಲಿ www.buddy4study.com ಜಾಲತಾಣ ಕಾರ್ಯ ನಿರ್ವಹಿಸುತ್ತಿದೆ.

ಪ್ರಾಥಮಿಕ, ಪ್ರೌಢಶಾಲೆ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಮತ್ತು ಪಿಎಚ್.ಡಿ ವರೆಗಿನ ಎಲ್ಲ ರೀತಿಯ ವಿದ್ಯಾರ್ಥಿವೇತನದ ಮಾಹಿತಿ ಈ ವೆಬ್ ಪೋರ್ಟಲ್ ನಲ್ಲಿ ಲಭ್ಯವಿದೆ. ಅಲ್ಲದೇ ವಿದ್ಯಾರ್ಥಿವೇತನಕ್ಕೆ ಪಡೆಯಲು ಇರುವ ಮಾನದಂಡ, ಪಡೆಯುವ ರೀತಿ ಹೇಗೆ ಎನ್ನುವ ವಿವರಗಳನ್ನು ಕೂಡ ಈ ಪೋರ್ಟಲ್ ನಲ್ಲಿ ನೀಡಲಾಗಿದೆ.

ಸರ್ಕಾರಿ, ಖಾಸಗಿ, ಸಂಘ ಸಂಸ್ಥೆಗಳು , ಟ್ರಸ್ಟ್ ಗಳು ಹೀಗೆ ಎಲ್ಲಾ ರೀತಿಯ ವಿದ್ಯಾರ್ಥಿವೇತನದ ಮಾಹಿತಿಯನ್ನು ಈ ಪೋರ್ಟಲ್ ನಲ್ಲಿ ನೀಡಲಾಗಿದೆ.

ನೀವು ವಿದ್ಯಾರ್ಥಿವೇತನ ನೀಡಬಹುದು

ಬಡವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡಬೇಕೆನಿಸಿದರೆ ನೀವು ಕೂಡ ವಿದ್ಯಾರ್ಥಿವೇತನವನ್ನು ಈ ಪೋರ್ಟಲ್ ಮೂಲಕ ನೀಡಬಹುದು. ವೈಯಕ್ತಿಕವಾಗಿ ಅಥವಾ ನಿಮ್ಮದೇ ಆದ ಒಂದು ಗುಂಪನ್ನು ರಚಿಸಿಕೊಂಡು ವಿದ್ಯಾರ್ಥಿವೇತನದ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ವಿದ್ಯಾರ್ಥಿವೇತನ ನೀಡುವುದೆಂದರೇ ಕೇವಲ ಆರ್ಥಿಕ ಸಹಾಯ ಮಾಡುವುದೆಂದಲ್ಲ, ಶಿಕ್ಷಣದ ಹಂಬಲವಿರುವವರಿಗೆ ಪ್ರೋತ್ಸಾಹ ನೀಡುವುದು.

ಅಷ್ಟೇ ಅಲ್ಲ ನಿಮ್ಮಿಂದ ವಿದ್ಯಾರ್ಥಿವೇತನದ ನೀಡಲು ಸಾಧ್ಯವಾಗದೇ ಹೋದರು ಯಾವುದಾದರು ಮಗುವಿಗೆ ವಿದ್ಯಾರ್ಥಿವೇತನದ ಅವಶ್ಯಕತೆ ಇದೆ ಎಂದು ತಿಳಿದು ಬಂದರೆ ಅಂತಹ ವಿದ್ಯಾರ್ಥಿಗಳನ್ನು ಈ ಪೋರ್ಟಲ್ ಗೆ ಸೇರಿಸುವ ಮೂಲಕ ವಿದ್ಯಾರ್ಥಿವೇತನದ ಅನುಕೂಲವನ್ನು ಕಲ್ಪಿಸಬಹುದಾಗಿದೆ.

ವಿದ್ಯಾರ್ಥಿವೇತನದ ನೀಡಲು ನೀವು ಹೆಚ್ಚು ಶ್ರಮ ಪಡಬೇಕಿಲ್ಲ. ನೀವು ಇದ್ದಲ್ಲಿಯೇ ವಿದ್ಯಾರ್ಥಿವೇತನದ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ನೆಟ್ ಬ್ಯಾಂಕಿಂಗ್ ಮೂಲಕ, ಚೆಕ್ ಮೂಲಕ ಅಥವಾ ಬ್ಯಾಂಕ್ ಖಾತೆಗೆ ನಗದು ರೂಪದಲ್ಲಿ ವಿದ್ಯಾರ್ಥಿವೇತನವನ್ನು ನೀವು ನೀಡಬಹುದು. ನೀವು ನೀಡುವ ಹಣದ ಸಂಪೂರ್ಣ ವಿವರಗಳು ನಿಮಗೆ ಲಭ್ಯವಿರುತ್ತದೆ.

ಈ ಪೋರ್ಟಲ್ ಗೆ ಸಾಕಷ್ಟು ಮನ್ನಣೆ ದೊರೆತಿದ್ದು, ದಿನೇ ದಿನೇ ವಿದ್ಯಾರ್ಥಿವೇತನ ಪಡೆಯುವ ಮತ್ತು ನೀಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಈಗಾಗಲೇ ಲಕ್ಷಾಂತರ ವಿದ್ಯಾರ್ಥಿಗಳು 'ಬಡಿ4ಸ್ಟಡಿ' ಮುಖಾಂತರ ಮಾಹಿತಿ ಪಡೆಯುತ್ತಿದ್ದಾರೆ. ಈ ವೆಬ್‌ಪೋರ್ಟಲ್‌ನಲ್ಲಿನ ಮಾಹಿತಿ ಸಂಪೂರ್ಣ ಉಚಿತ. ಇಲ್ಲಿ ವಿದ್ಯಾರ್ಥಿಗಳು ಹೆಸರನ್ನು ನೋಂದಾಯಿಸಿಕೊಂಡರೆ ಅವರಿಗೆ ಮೇಲ್‌ ಅಥವಾ ಎಸ್‌ಎಂಎಸ್‌ ಮೂಲಕ ಸ್ಕಾಲರ್‌ಶಿಪ್‌ ಮಾಹಿತಿ ನೀಡಲಾಗುತ್ತದೆ.

For Quick Alerts
ALLOW NOTIFICATIONS  
For Daily Alerts

English summary
Buddy4study is India’s largest and the most trusted scholarship web-portal (since 2011), where all the information on the latest scholarship opportunities and application support is provided, with a vision to make quality education accessible for every student pan-India
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X