ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಯುಜಿಸಿ ಎನ್‌ಇಟಿ 2019 ಜ್ಯೂನ್ ಅಸಿಸ್ಟೆಂಟ್ ಪ್ರೊಫೆಸರ್ ಮತ್ತು ಜೆಆರ್‌ಎಫ್ ಹುದ್ದೆಗಳಿಗೆ ನಡೆಸುವ ಪರೀಕ್ಷೆಗೆ ನಾಳೆ ಇಂದ ರಿಜಿಸ್ಟರ್ ಮಾಡಿಕೊಳ್ಳಬಹುದು.ಈ ಪರೀಕ್ಷೆಗಳು ಜೂನ್ ತಿಂಗಳಲ್ಲಿ ನಡೆಯಲಿದ್ದು, ಈ ಪರೀಕ್ಷೆಗಳ ಪಠ್ಯಕ್ರಮವನ್ನು ವೀಕ್ಷಿಸಲು ವೆಬ್‌ಸೈಟ್ https://www.ugcnetonline.in/ ಗೆ ಹೋಗಿ.

ಅಭ್ಯರ್ಥಿಗಳು ಯುಜಿಸಿ ಎನ್‌ಇಟಿ ಪರೀಕ್ಷೆಗೆ ಮಾರ್ಚ್ 1 ರಿಂದ ಮಾರ್ಚ್ 30,2019 ರವರೆಗೆ ರಿಜಿಸ್ಟರ್ ಮಾಡಿಕೊಳ್ಳಲು ಅವಕಾಶವಿರುತ್ತದೆ.ಪರೀಕ್ಷೆಯು ಜೂನ್ ತಿಂಗಳಿನಲ್ಲಿ ನಡೆಸಲಾಗುವುದು ಮತ್ತು ಪರೀಕ್ಷಾ ಫಲಿತಾಂಶವನ್ನು ಜುಲೈ 15,2019ರೊಳಗೆ ಪ್ರಕಟಿಸಲಾಗುವುದು.
ಈ ಮುಂಚೆ ಈ ಪರೀಕ್ಷೆಯನ್ನು ಎದುರಿಸಿದ ವಿದ್ಯಾರ್ಥಿಗಳು ಮತ್ತು ಪರೀಕ್ಷೆಯನ್ನು ತೆಗೆದುಕೊಳ್ಳಲಿರುವ ಹೊಸ ವಿದ್ಯಾರ್ಥಿಗಳಿಗೆ ಎಕ್ಸಾಂ ಪ್ಯಾಟರ್ನ್ ಬಗೆಗೆ ಇಲ್ಲಿ ತಿಳಿಸಲಾಗಿದೆ. ಈ ಪರೀಕ್ಷೆಯು ಎರಡು ಪೇಪರ್ ಗಳನ್ನು ಹೊಂದಿದ್ದು , ಎರಡು ಪರೀಕ್ಷೆಗಳ ನಡುವೆ 30 ನಿಮಿಷಗಳ ನೀಡುತ್ತಿದ್ದ ವಿರಾಮವನ್ನು ಈಗ ಬದಲಾಯಿಸಲಾಗಿದೆ.ವಿದ್ಯಾರ್ಥಿಗಳು 3 ತಾಸಿನ ಪರೀಕ್ಷೆಯಲ್ಲಿ ಎರಡೂ ಪತ್ರಿಕೆಗಳನ್ನು ಎದುರಿಸಬೇಕಿರುತ್ತದೆ.
ಈ ವರುಷವು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು ಪರೀಕ್ಷಾ ಕ್ರಮವನ್ನು ಬದಲಾಯಿಸಿದ್ದು, ಕಳೆದ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳಲ್ಲಿ ಕೊಟ್ಟಿರುವ 60 ಪ್ರಶ್ನೆಗಳಲ್ಲಿ ಯಾವುದಾದರೂ 50 ಪ್ರಶ್ನೆಗಳನ್ನು ಆಯ್ಕೆ ಮಾಡಿ ಉತ್ತರಿಸಲು ಅವಕಾಶ ನೀಡಿತ್ತು. ಆದರೆ ಈಗ ಕೊಡಲಾಗುವ 50 ಪ್ರಶ್ನೆಗಳನ್ನು ವಿದ್ಯಾರ್ಥಿಗಳು ಕಡ್ಡಾಯವಾಗಿ ಉತ್ತರಿಸಬೇಕಿರುತ್ತದೆ.
ಈ ಬಗೆಗಿನ ಅಧಿಕೃತ ಪ್ರಕಟಣೆಯನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications











