NTA UGC NET Provisional Answer Key : ಎನ್‌ಇಟಿ ತಾತ್ಕಾಲಿಕ ಕೀ ಉತ್ತರ ಪ್ರಕಟ ಮತ್ತು ಜ.24ರೊಳಗೆ ಆಕ್ಷೇಪಣೆ ಸಲ್ಲಿಸಿ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು (ಎನ್‌ಟಿಎ) ಯುಜಿಸಿ ಎನ್‌ಇಟಿ ಡಿಸೆಂಬರ್ 2020 ಮತ್ತು ಜೂನ್ 2021 ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರಗಳನ್ನು ಪ್ರಕಟ ಮಾಡಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳು ಕೀ ಉತ್ತರಗಳನ್ನು ಚೆಕ್ ಮಾಡಿಕೊಳ್ಳಬಹುದು.

ಎನ್‌ಇಟಿ ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರಗಳು ರಿಲೀಸ್

ಯುಜಿಸಿ ಎನ್‌ಇಟಿ ಡಿಸೆಂಬರ್ 2020 ಮತ್ತು ಜೂನ್ 2021ರ ಪರೀಕ್ಷೆಯನ್ನು ನವೆಂಬರ್ 20,2021 ರಿಂದ ಡಿಸೆಂಬರ್ 5,2021ರ ವರೆಗೆ ನಡೆಸಲಾಗಿತ್ತು. ಫೇಸ್ II ಪರೀಕ್ಷೆಯನ್ನು ಡಿಸೆಂಬರ್ 24 ರಿಂದ 27,2021ರ ವರೆಗೆ ಮತ್ತು ಫೇಸ್ III ಪರೀಕ್ಷೆಯನ್ನು ಜನವರಿ 4 ಮತ್ತು 5,2022ರಂದು ನಡೆಸಲಾಗಿತ್ತು.

ಈ ಪರೀಕ್ಷೆಗಳ ತಾತ್ಕಾಲಿಕ ಕೀ ಉತ್ತರಗಳನ್ನು ಇದೀಗ ಬಿಡುಗಡೆ ಮಾಡಲಾಗಿದ್ದು, ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ತಾವು ಬರೆದ ಉತ್ತರ ಪತ್ರಿಕೆ ಜೊತೆಗೆ ತಾತ್ಕಾಲಿಕ ಕೀ ಉತ್ತರಗಳನ್ನು ಚೆಕ್ ಮಾಡಿಕೊಳ್ಳಬಹುದು.

ಅಭ್ಯರ್ಥಿಗಳಿಗೆ ಕೀ ಉತ್ತರಗಳಿಗೆ ಸಂಬಂಧಿಸಿದಂತೆ ಏನಾದರು ಆಕ್ಷೇಪಣೆಗಳಿದ್ದಲ್ಲಿ ಪ್ರತಿ ಪ್ರಶ್ನೆಗೆ 1,000/-ರೂ ಪಾವತಿಸಿ ಜನವರಿ 24,2022ರ ರಾತ್ರಿ 11:50ರೊಳಗೆ ಆಕ್ಷೇಪಣೆ ಸಲ್ಲಿಸಬಹುದು.

ಅಭ್ಯರ್ಥಿಗಳು ತಾತ್ಕಾಲಿಕ ಕೀ ಉತ್ತರ ವೀಕ್ಷಿಸುವುದು ಮತ್ತು ಆಕ್ಷೇಪಣೆ ಸಲ್ಲಿಸುವುದು ಹೇಗೆ? :

ಸ್ಟೆಪ್ 1: ಅಭ್ಯರ್ಥಿಗಳು ಮೊದಲು ಎನ್‌ಟಿಎ ಅಧಿಕೃತ ವೆಬ್‌ಸೈಟ್‌ https://ugcnet.nta.nic.in/WebInfo/Page/Page?PageId=1&LangId=P ಗೆ ಭೇಟಿ ನೀಡಿ.

ಸ್ಟೆಪ್ 2: ನಂತರ ನಿಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕ ಹಾಗೂ ಸೆಕ್ಯುರಿಟಿ ಪಿನ್ ನೀಡಿ ಸಬ್‌ಮಿಟ್ ಮಾಡಿ.

ಸ್ಟೆಪ್ 3: ಅಭ್ಯರ್ಥಿಯು "View Question Paper" ಮೇಲೆ ಕ್ಲಿಕ್ ಮಾಡಿ ನಂತರ ಕೀ ಉತ್ತರ ವೀಕ್ಷಿಸಲು ಅಥವಾ ಆಕ್ಷೇಪಣೆ ಸಲ್ಲಿಸಲು "Click to view/challenge answer key" ಲಿಂಕ್ ಮೇಲೆ ಕ್ಲಿಕ್ ಮಾಡಿ.

ಸ್ಟೆಪ್ 4: ನಂತರ ಕೀ ಉತ್ತರಗಳನ್ನು ವೀಕ್ಷಿಸಿ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಬಹುದು.

ಅಭ್ಯರ್ಥಿಗಳು ನೇರವಾಗಿ ಕೀ ಉತ್ತರ ವೀಕ್ಷಿಸಲು ಮತ್ತು ಆಕ್ಷೇಪಣೆ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

More News  

For Quick Alerts
ALLOW NOTIFICATIONS  
For Daily Alerts

English summary
NTA released UGC NET december 2020 and june 2021 provisional answer key and raise objections before january 24.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+