ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯ ಯುಜಿಸಿ ಎನ್‌ಇಟಿ 2019 ಜೂನ್ ಪರೀಕ್ಷೆಗೆ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಅಭ್ಯರ್ಥಿಗಳಿಗೆ ಮಾರ್ಚ್ 1 ರಿಂದ 30,2019 ರೊಳಗೆ ಅರ್ಜಿಯನ್ನು ಸಲ್ಲಿಸುವ ಅವಕಾಶವನ್ನು ನೀಡಲಾಗಿತ್ತು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಏನಾದರೂ ಬದಲಾವಣೆ ಇದ್ದಲ್ಲಿ ಏಪ್ರಿಲ್ 14,2019 ರೊಳಗೆ ತಮ್ಮ ಅರ್ಜಿಯಲ್ಲಿನ ತಿದ್ದುಪಡಿ ಮಾಡಲು ಅವಕಾಶ ನೀಡಲಾಗಿರುತ್ತದೆ.

ಪರೀಕ್ಷೆಯು ಜೂನ್ ತಿಂಗಳಿನಲ್ಲಿ ನಡೆಸಲಾಗುವುದು ಮತ್ತು ಪರೀಕ್ಷಾ ಫಲಿತಾಂಶವನ್ನು ಜುಲೈ 15,2019ರೊಳಗೆ ಪ್ರಕಟಿಸಲಾಗುವುದು. ಈ ಮುಂಚೆ ಈ ಪರೀಕ್ಷೆಯನ್ನು ಎದುರಿಸಿದ ವಿದ್ಯಾರ್ಥಿಗಳು ಮತ್ತು ಪರೀಕ್ಷೆಯನ್ನು ತೆಗೆದುಕೊಳ್ಳಲಿರುವ ಹೊಸ ವಿದ್ಯಾರ್ಥಿಗಳಿಗೆ ಎಕ್ಸಾಂ ಪ್ಯಾಟರ್ನ್ ಬಗೆಗೆ ಇಲ್ಲಿ ತಿಳಿಸಲಾಗಿದೆ. ಈ ಪರೀಕ್ಷೆಯು ಎರಡು ಪೇಪರ್ ಗಳನ್ನು ಹೊಂದಿದ್ದು , ಎರಡು ಪರೀಕ್ಷೆಗಳ ನಡುವೆ 30 ನಿಮಿಷಗಳ ನೀಡುತ್ತಿದ್ದ ವಿರಾಮವನ್ನು ಈಗ ಬದಲಾಯಿಸಲಾಗಿದೆ.ವಿದ್ಯಾರ್ಥಿಗಳು 3 ತಾಸಿನ ಪರೀಕ್ಷೆಯಲ್ಲಿ ಎರಡೂ ಪತ್ರಿಕೆಗಳನ್ನು ಎದುರಿಸಬೇಕಿರುತ್ತದೆ. ಈ ವರುಷವು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು ಪರೀಕ್ಷಾ ಕ್ರಮವನ್ನು ಬದಲಾಯಿಸಿದ್ದು, ಕಳೆದ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳಲ್ಲಿ ಕೊಟ್ಟಿರುವ 60 ಪ್ರಶ್ನೆಗಳಲ್ಲಿ ಯಾವುದಾದರೂ 50 ಪ್ರಶ್ನೆಗಳನ್ನು ಆಯ್ಕೆ ಮಾಡಿ ಉತ್ತರಿಸಲು ಅವಕಾಶ ನೀಡಿತ್ತು. ಆದರೆ ಈಗ ಕೊಡಲಾಗುವ 50 ಪ್ರಶ್ನೆಗಳನ್ನು ವಿದ್ಯಾರ್ಥಿಗಳು ಕಡ್ಡಾಯವಾಗಿ ಉತ್ತರಿಸಬೇಕಿರುತ್ತದೆ.
ಅಭ್ಯರ್ಥಿಗಳು ಅರ್ಜಿಯಲ್ಲಿ ತಿದ್ದುಪಡಿ ಮಾಡುವುದಿದ್ದಲ್ಲಿ ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿ
ಸ್ಟೆಪ್ 1: ಅಭ್ಯರ್ಥಿಗಳು ಎನ್‌ಟಿಎ ಯುಜಿಸಿ ಎನ್‌ಇಟಿಯ ಅಧಿಕೃತ ವೆಬ್‌ಸೈಟ್ https://ntanet.nic.in/ntanetcms/public/home.aspx ಗೆ ಹೋಗಿ
ಸ್ಟೆಪ್ 2: ನಂತರ "Application Form Correction-June 2019" ರ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ನಿಮ್ಮ ಅಪ್ಲಿಕೇಶನ್ ನಂಬರ್, ಪಾಸ್‌ವರ್ಡ್,ಸೆಕ್ಯುರಿಟಿ ಪಿನ್ ನೀಡಿ ಲಾಗಿನ್ ಆಗಿ
ಬದಲಾವಣೆಗಳಿದ್ದಲ್ಲಿ ತಿದ್ದುಪಡಿ ಮಾಡಿ submit ಮಾಡಿ
ಅಭ್ಯರ್ಥಿಗಳು ತಿದ್ದುಪಡಿ ಮಾಡುವುದಿದ್ದಲ್ಲಿ ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications











