NTA UGC NET: 2020ರ ಜೂನ್ ಪರೀಕ್ಷೆಗೆ ಅರ್ಜಿ ಹಾಕಿ

ಯುಜಿಸಿ ಎನ್‌ಇಟಿ 2020ರ ಜೂನ್ ಪರೀಕ್ಷೆಯ ಅಧಿಕೃತ ಅಧಿಸೂಚನೆಯನ್ನು ಎನ್‌ಟಿಎ ಪ್ರಕಟಮಾಡಿದೆ. ಪರೀಕ್ಷೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾರ್ಚ್ 16,2020 ರಿಂದ ಮೇ 16,2020ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಎನ್‌ಇಟಿ ಜೂನ್ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಆರಂಭ

 

ವಿದ್ಯಾರ್ಹತೆ :

ಯುಜಿಸಿ ಎನ್ಇಟಿ ಪರೀಕ್ಷೆ ತೆಗೆದುಕೊಳ್ಳಲು ಇಚ್ಚಿಸುವ ಅಭ್ಯರ್ಥಿಗಳು ಶೇ.55%ರಷ್ಟು ಅಂಕಗಳೊಂದಿಗೆ ಸ್ನಾತಕೋತ್ತರ ಪದವಿಯನ್ನು ಮಾನ್ಯತೆ ಪಡೆದ ಬೋರ್ಡ್/ಸಂಸ್ಥೆ/ವಿಶ್ವವಿದ್ಯಾಲಯದಲ್ಲಿ ಪೂರೈಸಿರಬೇಕು.

ಸ್ನಾತಕೋತ್ತರ ಪದವಿಯನ್ನು ಅಂತಿಮ ವರ್ಷದಲ್ಲಿ ಅಧ್ಯಯನ ಮಾಡುತ್ತಿರುವ ಅಭ್ಯರ್ಥಿಗಳು ಹಾಗೂ ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಕೂಡ ಈ ಪರೀಕ್ಷೆಯನ್ನು ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ.

ವಯೋಮಿತಿ :

ಜ್ಯೂನಿಯರ್ ರಿಸರ್ಚ್ ಫೆಲೋ ಹುದ್ದೆಗಳಿಗೆ ಗರಿಷ್ಟ 30 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಂಗವಿಕಲ,ಓಬಿಸಿ,ಮಹಿಳಾ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ.

ಸಹಾಯಕ ಪ್ರಾಧ್ಯಾಪಕರ ಪರೀಕ್ಷೆಗೆ ಯಾವುದೇ ಗರಿಷ್ಟ ವಯೋಮಿತಿಯನ್ನು ನಿಗದಿಪಡಿಸಲಾಗಿರುವುದಿಲ್ಲ.

ಪರೀಕ್ಷೆಯ ವಿವರ:

ಪರೀಕ್ಷಾ ವಿಧಾನ: ಕಂಪ್ಯೂಟರ್ ಆಧಾರಿತ ಪರೀಕ್ಷೆ

ಪರೀಕ್ಷೆಯ ಒಟ್ಟು ಅಂಕಗಳು : ಒಟ್ಟು 3೦೦

ಪತ್ರಿಕೆ : 2 ಪ್ರಶ್ನೆ ಪತ್ರಿಕೆಗಳು

ಸಮಯ : ಒಟ್ಟು 3 ಗಂಟೆಗಳ ಅವಧಿ

ಅರ್ಜಿ ಶುಲ್ಕದ ವಿವರ:

ಸಾಮಾನ್ಯ ಅಭ್ಯರ್ಥಿಗಳು 1000/-ರೂ

ಸಾಮಾನ್ಯ-ಆರ್ಥಿಕವಾಗಿ ಹಿಂದುಳಿದ/ಓಬಿಸಿ -ಎನ್‌ಸಿಎಲ್ ಅಭ್ಯರ್ಥಿಗಳು 500/-ರೂ

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಅಂಗವಿಕಲ ಅಭ್ಯರ್ಥಿಗಳು 250/-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಏಪ್ರಿಲ್ 17,2020ರೊಳಗೆ ಪಾವತಿಸಬೇಕಿರುತ್ತದೆ.

ಎನ್ಇಟಿ ಜೂನ್ 2020ರ ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಮಾರ್ಚ್ 16,2020

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 16,2020

ಅರ್ಜಿ ಶುಲ್ಕ ಆನ್‌ಲೈನ್ ಮೂಲಕ ಪಾವತಿಸಲು ಕೊನೆಯ ದಿನಾಂಕ: ಮೇ 16,2020

ಈ ಕೆಳಗಿನ ಸ್ಟೆಪ್ಸ್ ಮೂಲಕ ಎನ್‌ಇಟಿ ಜೂನ್ 2020 ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು:

ಸ್ಟೆಪ್ 1: ಯುಜಿಸಿ ಎನ್‌ಇಟಿ ಅಧಿಕೃತ ವೆಬ್‌ಸೈಟ್‌ https://ugcnet.nta.nic.in/WebInfo/Public/View.aspx?page=1 ಗೆ ಭೇಟಿ ನೀಡಿ

 

ಸ್ಟೆಪ್ 2: ಹೋಂ ಪೇಜ್‌ನಲ್ಲಿ ಲಭ್ಯವಿರುವ ಆನ್‌ಲೈನ್‌ ಅರ್ಜಿ ಸಲ್ಲಿಕೆ ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3: ಇನ್ನೊಂದು ಪುಟಕ್ಕೆ ಹೋಗುವಿರಿ ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ

ಸ್ಟೆಪ್ 4: ನಂತರ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ

ಸ್ಟೆಪ್ 5: ಮುಂದಿನ ರೆಫರೆನ್ಸ್ ಗಾಗಿ ಅರ್ಜಿಯ ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ

For Quick Alerts
ALLOW NOTIFICATIONS  
For Daily Alerts

English summary
NTA UGC NET June 2020 registration process begins from 16th March 2020 to 16th may 2020.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more