Non Kannadigas Can Learn Kannada : ಅನ್ಯಭಾಷಿಗರು ಈಗ ಕನ್ನಡ ಕಲಿತು ಪರೀಕ್ಷೆ ತೆಗೆದುಕೊಳ್ಳುವ ಅವಕಾಶ

ನಮಗೆ ಕನ್ನಡ ಬರಲ್ಲ, ನಮಗೆ ಕನ್ನಡ ಗೊತ್ತಿಲ್ಲ ಆದರೆ ಕನ್ನಡ ಭಾಷೆ ಕಲಿಯುವ ಆಸಕ್ತಿ ಇದೆ ಎನ್ನುವ ಎಲ್ಲಾ ನಾನ್‌ ಕನ್ನಡಿಗರಿಗೂ ಸಿಹಿ ಸುದ್ದಿ. ಕನ್ನಡಿಗರಲ್ಲದವರು ಕನ್ನಡ ಭಾಷೆಯನ್ನು ಕಲಿಯಲು ಸಹಾಯ ಮಾಡುವ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಹಂಪಿಯಲ್ಲಿರುವ ಕನ್ನಡ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಮಹತ್ತರವಾದ ಹೆಜ್ಜೆಯನ್ನು ಇಡುತ್ತಿದೆ.

ಅನ್ಯ ಭಾಷಿಗರಿಗೆ ಕನ್ನಡ ಕಲಿಯುವ ಅವಕಾಶ

ಕನ್ನಡ ಬಾರದವರಿಗೆ ಕನ್ನಡ ಭಾಷಾ ಪರೀಕ್ಷೆಗಳನ್ನು ನಡೆಸುವ ಯೋಜನೆಯನ್ನು ಹಾಕಿಕೊಂಡಿದೆ. ಆಸಕ್ತ ಅನ್ಯಭಾಷಿಗರು ಈ ಪರೀಕ್ಷೆಯನ್ನು ತೆಗೆದುಕೊಳ್ಳಬಹುದಾಗಿದ್ದು, ಅವರ ಕಲಿಕೆಗೆ ಮತ್ತು ಪರೀಕ್ಷಾ ಸಿದ್ಧತೆಗೆ ಪಠ್ಯಪುಸ್ತಕಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಪರೀಕ್ಷೆಗಳನ್ನು ಆನ್‌ಲೈನ್ ಮೂಲಕ ನಡೆಸಲು ಯೋಜನೆಯನ್ನು ಹಾಕಿಕೊಳ್ಳಲಾಗಿದೆ.

ನಮ್ಮ ಸುತ್ತ ಮುತ್ತ ಅನೇಕ ನಾನ್ ಕನ್ನಡಿಗರು ವಾಸಿಸುತ್ತಿದ್ದಾರೆ. ವಿಶೇಷವಾಗಿ ಬೆಂಗಳೂರಿನಲ್ಲಿ ಇತರ ಭಾಷೆಗಳನ್ನು ಮಾತನಾಡುವವರು ಹೆಚ್ಚು ಮಂದಿ ಇದ್ದಾರೆ. ಈ ಕಾರಣದಿಂದಾಗಿ ಅವರಿಗೆ ಕನ್ನಡ ಕಲಿಸುವ ಉದ್ದೇಶದಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅವರ ಮನೆಬಾಗಿಲಲ್ಲಿ ತರಗತಿಗಳನ್ನು ಆರಂಭಿಸಿತ್ತು. ಆದರೆ ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಅದು ಅಭಿವೃದ್ದಿ ಹೊಂದಲು ಸಾಧ್ಯವಾಗಲಿಲ್ಲ. ತದನಂತರ ಪ್ರಾಧಿಕಾರವು ಆನ್‌ಲೈನ್ ಪೋರ್ಟಲ್ ಅನ್ನು ಕೂಡ ಪ್ರಾರಂಭಿಸಿತು, ಆದರೆ ಅದು ಕೂಡ ಯಶಸ್ವಿಯಾಗಲಿಲ್ಲ.

ಟಿಎಸ್ ನಾಗಾಭರಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು "ಇದೀಗ ಪೂರ್ಣ ಪ್ರಮಾಣದ ಮಾದರಿಯನ್ನಿಟ್ಟುಕೊಂಡು ಹೆಜ್ಜೆ ಇಡಲು ಸಜ್ಜಾಗಿದ್ದೇವೆ. ನಾವು ಕನ್ನಡ ವಿಶ್ವವಿದ್ಯಾಲಯ ಮತ್ತು ಕೇಂದ್ರೀಯ ಭಾರತೀಯ ಭಾಷೆಗಳ ಸಂಸ್ಥೆಯ ಸಹಕಾರದೊಂದಿಗೆ ನಿಗದಿತ ಪಠ್ಯಪುಸ್ತಕವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಪಠ್ಯಪುಸ್ತಕವು ಆನ್‌ಲೈನ್‌ನಲ್ಲಿಯೂ ಲಭ್ಯವಿರಲಿದ್ದು, ಇನ್ನು ಆರು ತಿಂಗಳಲ್ಲಿ ಸಿದ್ಧವಾಗುವ ನೀರಿಕ್ಷೆ ಇದೆ. ತಜ್ಞರ ತಂಡವು ನನ್ನನ್ನು ಈಗಾಗಲೇ ಎರಡು ಬಾರಿ ಭೇಟಿಯಾಗಿದ್ದು ಪ್ರಕ್ರಿಯೆಯನ್ನು ಮುಂದುವರಿಸಿದೆ." ಎಂದು ಅವರು ಹೇಳಿದ್ದಾರೆ.

ಅನ್ಯಭಾಷಿಗರಿಗೆ ಕನ್ನಡ ಪರೀಕ್ಷೆ ಕಡ್ಡಾಯ ?:

ಕನ್ನಡಿಗರಲ್ಲದವರು ಭಾಷೆಯನ್ನು ಕಲಿಯುವುದು ಅಥವಾ ಈ ಪರೀಕ್ಷೆಗಳಿಗೆ ಹಾಜರಾಗುವುದು ಕಡ್ಡಾಯವಲ್ಲ. ವಿಶ್ವವಿದ್ಯಾನಿಲಯವು ಕನ್ನಡ ಭಾಷೆ ಪರೀಕ್ಷೆಯನ್ನು ನಡೆಸುತ್ತದೆ, ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಪ್ರಮಾಣಪತ್ರವನ್ನು ನೀಡಲಾಗುತ್ತದೆ ಎಂದು ಅವರು ತಿಳಿಸಿದರು. ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅನ್ಯಭಾಷಿಗರು ಕನ್ನಡವನ್ನು ತಿಳಿದುಕೊಂಡಿರಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಗಳು ತಿಳಿಸಿವೆ. ಕನ್ನಡಿಗರಲ್ಲದವರು ಒಂದು ವೇಳೆ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಛಿಸಿದ್ದಲ್ಲಿ ಮೊದಲು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು" ಎಂದು ಅವರು ಮಾಹಿತಿ ನೀಡಿದ್ದಾರೆ.

ಸರೋಜಿನಿ ಮಹಿಷಿ ವರದಿ :

ಸರೋಜಿನಿ ಮಹಿಷಿ ವರದಿಯು ಕರ್ನಾಟಕದಲ್ಲಿ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಯನ್ನು ಶಿಫಾರಸು ಮಾಡಿತ್ತು. ರಾಜ್ಯದಲ್ಲಿ ಇದನ್ನು ಕಡ್ಡಾಯಗೊಳಿಸಲು ಸಾಧ್ಯವಿಲ್ಲವಾದ್ದರಿಂದ, ಕೆಲವು ತಿಂಗಳ ಹಿಂದೆ ಕರ್ನಾಟಕ ಕೈಗಾರಿಕಾ ಉದ್ಯೋಗ ನಿಯಮಗಳನ್ನು 1961 ಕ್ಕೆ ತಿದ್ದುಪಡಿ ಮಾಡಿ, ಖಾಸಗಿ ವಲಯದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು ಎಂದು ಒತ್ತಿಹೇಳಿತು. ನಿಯಮಗಳ ಪ್ರಕಾರ ಕರ್ನಾಟಕದಲ್ಲಿ 15 ವರ್ಷಗಳಿಗಿಂತ ಕಡಿಮೆ ಇರುವವರು ಮತ್ತು ಕನ್ನಡವನ್ನು ಬರೆಯಲು, ಓದಲು, ಮಾತನಾಡಲು ಮತ್ತು ಅರ್ಥಮಾಡಿಕೊಳ್ಳಬಲ್ಲವರು ಖಾಸಗಿ ಸಂಸ್ಥೆಗಳಲ್ಲಿ ಕ್ಲೆರಿಕಲ್ ಮತ್ತು ಇತರ ಕೆಲಸಗಳಿಗೆ ನೇಮಕಗೊಳ್ಳಲು ಅರ್ಹರು.

More News  

For Quick Alerts
ALLOW NOTIFICATIONS  
For Daily Alerts

English summary
Now non kannadigas also can learn kannada. Kannada development authority in association with hampi university planning to conduct exam for them. Know more.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+