ಪರೀಕ್ಷಾ ಪೆ ಚರ್ಚಾ 2022ರ ನೋಂದಣಿ ಪ್ರಕ್ರಿಯೆಯು ನಡೆಯುತ್ತಿದ್ದು, ಅರ್ಜಿ ಸಲ್ಲಿಕೆಯ ಅವಧಿಯನ್ನು ಜನವರಿ 27,2022ರ ವರೆಗೆ ವಿಸ್ತರಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಈ ಕೂಡಲೆ ನೊಂದಾಯಿಸಿಕೊಳ್ಳಬಹುದು.

ಪರೀಕ್ಷಾ ಪೇ ಚರ್ಚಾ 2022ಗೆ ಈ ವರೆಗೆ 10.75 ಲಕ್ಷ ವಿದ್ಯಾರ್ಥಿಗಳ ದಾಖಲಿಸಿಕೊಂಡಿದ್ದಾರೆ. ಕಳೆದ ವರ್ಷ 10.39 ಲಕ್ಷಕ್ಕೂ ಹೆಚ್ಚು ಪರೀಕ್ಷಾ ಯೋಧರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಆನ್ಲೈನ್ ಸಂವಾದದ ಸೆಷನ್ಗಾಗಿ ನೋಂದಾಯಿಸಿಕೊಂಡಿದ್ದರು. MyGov ವೆಬ್ಸೈಟ್ ಪ್ರಕಾರ, ಇದುವರೆಗೆ 10.75 ಲಕ್ಷ ವಿದ್ಯಾರ್ಥಿಗಳು, 2.43 ಲಕ್ಷ ಶಿಕ್ಷಕರು ಮತ್ತು 78,000 ಪೋಷಕರು ಪರೀಕ್ಷಾ ಪೆ ಚರ್ಚಾ 2022ಗೆ ದಾಖಲಾಗಿದ್ದಾರೆ.
ಪರೀಕ್ಷಾ ಪೇ ಚರ್ಚೆಗೆ ನೋಂದಾಯಿಸಲಾದ ವಿದ್ಯಾರ್ಥಿನಿಯರ ಸಂಖ್ಯೆ ಪುರುಷ ಅಭ್ಯರ್ಥಿಗಳಿಗಿಂತ ಹೆಚ್ಚಾಗಿದೆ. ಪರೀಕ್ಷಾ ಪೇ ಚರ್ಚಾದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರ ಅಗಾಧ ಭಾಗವಹಿಸುವಿಕೆಗೆ ಸಾಕ್ಷಿಯಾಗುತ್ತಿದೆ ಎಂದು MyGov ಅಧ್ಯಕ್ಷ ಮತ್ತು ಸಿಇಒ ಅಭಿಷೇಕ್ ಸಿಂಗ್ ಹೇಳಿದರು.
ಅಭಿಷೇಕ್ ಸಿಂಗ್ ಪ್ರಕಾರ, "ಇಲ್ಲಿಯವರೆಗೆ 15 ಲಕ್ಷಕ್ಕೂ ಹೆಚ್ಚು ಮಂದಿ ಪರೀಕ್ಷಾ ಪೇ ಚರ್ಚಾಗೆ ದಾಖಲಾಗಿದ್ದಾರೆ. ಅವರಲ್ಲಿ ಪುರುಷ ವಿದ್ಯಾರ್ಥಿಗಳಿಗಿಂತ ಹೆಚ್ಚಿನ ವಿದ್ಯಾರ್ಥಿನಿಯರು ಭಾಗವಹಿಸುತ್ತಿದ್ದಾರೆ. ಒಟ್ಟು ನೋಂದಾಯಿಸಿದವರಲ್ಲಿ 50.6 ರಷ್ಟು ವಿದ್ಯಾರ್ಥಿನಿಯರು ಮತ್ತು 49.4 ರಷ್ಟು ಪುರುಷ ವಿದ್ಯಾರ್ಥಿಗಳು ಇದ್ದಾರೆ. "
ಸಿಬಿಎಸ್ಇ ಸಂಯೋಜಿತ ಶಾಲೆಗಳಿಂದ ಗರಿಷ್ಠ ಸಂಖ್ಯೆಯಲ್ಲಿ ಭಾಗವಹಿಸುವಿಕೆಗೆ ನೊಂದಣಿಯಾಗಿದ್ದರೂ ಕೂಡ ವಿದೇಶದಿಂದ ಸಾಕಷ್ಟು ನೊಂದಣಿಗಳಿವೆ ಎಂದು MyGov ಸಿಇಒ ಹೇಳಿದರು. "ಪರೀಕ್ಷಾ ಪೇ ಚರ್ಚಾ ಈಗ ಅಂತರಾಷ್ಟ್ರೀಯ ಕಾರ್ಯಕ್ರಮವಾಗಿ ಮಾರ್ಪಟ್ಟಿದೆ. ಈ ವರ್ಷ ಅಂತಾರಾಷ್ಟ್ರೀಯ ಮಂಡಳಿಗಳು, ಮತ್ತು ವಿದೇಶದಲ್ಲಿರುವ ಶಾಲೆಗಳಿಂದ ಹೆಚ್ಚಿನ ನಮೂದುಗಳಿವೆ" ಎಂದು ಶ್ರೀ ಸಿಂಗ್ ಹೇಳಿದರು.
ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಮಾನಸಿಕ ಒತ್ತಡವು ಈ ವರ್ಷದ ಪರೀಕ್ಷಾ ಪೇ ಚರ್ಚಾದಲ್ಲಿ ಚರ್ಚಿಸಲು ಆಯ್ದ ವಿಷಯವಾಗಿದೆ ಎಂದು ಸಿಇಒ ತಿಳಿಸಿದ್ದಾರೆ.
ಜನವರಿ 26 ರಂದು ಗಣರಾಜ್ಯೋತ್ಸವದ ಲೈವ್ ಸ್ಟ್ರೀಮ್ ವೀಕ್ಷಿಸಲು 14 ಲಕ್ಷಕ್ಕೂ ಹೆಚ್ಚು ಜನರು ನೋಂದಾಯಿಸಿಕೊಂಡಿದ್ದಾರೆ. ಜನವರಿ 26 ರಂದು ಗಣರಾಜ್ಯೋತ್ಸವ ಪರೇಡ್ ಮತ್ತು ಜನವರಿ 29, 2022 ರಂದು ಬೀಟಿಂಗ್ ದಿ ರಿಟ್ರೀಟ್ ಸಮಾರಂಭವು ನಡೆಯಲಿದೆ. ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಅವರ ಕುಟುಂಬಗಳು ತಮ್ಮನ್ನು ನೋಂದಾಯಿಸಿಕೊಳ್ಳಲು ಮತ್ತು ಲೈವ್ ಸ್ಟ್ರೀಮಿಂಗ್ ವೀಕ್ಷಿಸಲು ಒತ್ತಾಯಿಸಿದೆ ಎಂದು ಶ್ರೀ ಸಿಂಗ್ ತಿಳಿಸಿದರು. .
ಇತ್ತೀಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪಿಪಿಸಿ 2022ರಲ್ಲಿ ಭಾಗವಹಿಸಲು ಮತ್ತು ನೋಂದಾಯಿಸಲು ಪೋಷಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಒತ್ತಾಯಿಸಿದ್ದಾರೆ. "ನಮ್ಮ ಕ್ರಿಯಾತ್ಮಕ ಯುವಕರೊಂದಿಗೆ ಸಂಪರ್ಕ ಸಾಧಿಸಲು, ಅವರ ಸವಾಲುಗಳು ಮತ್ತು ಆಕಾಂಕ್ಷೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನನಗೆ ಅವಕಾಶವಿದೆ. ಇದು ಶಿಕ್ಷಣದ ಜಗತ್ತಿನಲ್ಲಿ ಉದಯೋನ್ಮುಖ ಪ್ರವೃತ್ತಿಯನ್ನು ಕಂಡುಹಿಡಿಯಲು ಅವಕಾಶವನ್ನು ನೀಡುತ್ತದೆ. " ಎಂದು ಮೋದಿಯವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮೂಲಕ ಹೇಳಿದ್ದರು.
ಪರೀಕ್ಷಾ ಪೇ ಚರ್ಚಾ ಎನ್ನುವುದು ಸಂವಾದಾತ್ಮಕ ಅಧಿವೇಶನವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಬೋರ್ಡ್ ಪರೀಕ್ಷೆಯ ವಿದ್ಯಾರ್ಥಿಗಳೊಂದಿಗೆ ಸಂವಾದಿಸುತ್ತಾರೆ. ಸಂವಾದದ ಸಮಯದಲ್ಲಿ ಪ್ರಧಾನ ಮಂತ್ರಿಗಳು ರಾಷ್ಟ್ರದಾದ್ಯಂತದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಾರೆ ಮತ್ತು ಪರೀಕ್ಷೆಯ ಒತ್ತಡ ಸಂಬಂಧಿತ ವಿಷಯಗಳ ಕುರಿತು ಅವರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಪರೀಕ್ಷಾ ಪೆ ಚರ್ಚಾದಲ್ಲಿ 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳ ಜೊತೆಗೆ, ಪಾಲಕರು ಮತ್ತು ಶಿಕ್ಷಕರು ಕೂಡ ಭಾಗವಹಿಸಲು ಅವಕಾಶ ನೀಡಲಾಗಿದೆ.