ಈ ಭಾರಿಯ ಪರೀಕ್ಷಾ ಪೇ ಚರ್ಚಾ 2022ಗೆ ನೊಂದಣಿ ಪ್ರಕ್ರಿಯೆಯು ಈಗಾಗಲೇ ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಜನವರಿ 20,2022 ಕೊನೆಯ ದಿನವಾಗಿದೆ. ಆಸಕ್ತ ವಿದ್ಯಾರ್ಥಿಗಳು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು.

ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ನಡೆಸಲಾಗುವ ಪರೀಕ್ಷಾ ಪೇ ಚರ್ಚಾ ದಲ್ಲಿ ವಿದ್ಯಾರ್ಥಿಗಳು ಪರೀಕ್ಷೆಯ ಬಗೆಗೆ ಇರುವ ಒತ್ತಡ ಮತ್ತು ಆತಂಕವನ್ನು ದೂರ ಮಾಡಿಕೊಳ್ಳುವ ಕುರಿತು ಸಂವಾದ ನಡೆಸಬಹುದು. ಹಾಗಿದ್ರೆ ಇನ್ಯಾಕೆ ತಡ ಈ ಕೂಡಲೇ ನಿಮ್ಮ ಹೆಸರನ್ನು ರಿಜಿಸ್ಟರ್ ಮಾಡಿಕೊಳ್ಳಿ. ಪರೀಕ್ಷಾ ಪೇ ಚರ್ಚಾ 2022 ಯಾವಾಗ ನಡೆಯುತ್ತೆ? ಇದಕ್ಕೆ ನೊಂದಣಿ ಮಾಡಲು ಅರ್ಹತೆಗಳೇನು ? ಭಾಗವಹಿಸಿದವರಿಗೆ ಏನು ಉಡುಗೊರೆ ಸಿಗಲಿದೆ ಮತ್ತು ರಿಜಿಸ್ಟರ್ ಮಾಡಿಕೊಳ್ಳುವುದು ಹೇಗೆ ಎನ್ನುವ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಮುಂದೆ ಓದಿ.

ಪರೀಕ್ಷಾ ಪೇ ಚರ್ಚಾ 2022 :
ಪ್ರಧಾನಿ ನರೇಂದ್ರ ಮೋದಿ ಯೊಂದಿಗಿನ ಐದನೇ ಆವೃತ್ತಿಯ 'ಪರೀಕ್ಷಾ ಪೇ ಚರ್ಚಾ' ಕಾರ್ಯಕ್ರಮ ಇದಾಗಿದ್ದು, ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಭಾಗವಹಿಸಬಹುದು. ಈ ಸಂವಾದವು ಪರೀಕ್ಷೆಯ ಬಗೆಗೆ ಇರುವ ಗೊಂದಲ ಮತ್ತು ಆತಂಕಗಳನ್ನು ದೂರ ಮಾಡುವ ಸಲುವಾಗಿ ಈ ಕಾರ್ಯಕ್ರಮವನ್ನು ನಡೆಸಲಾಗುವುದು. ನೀವು ನಿಮ್ಮ ಪ್ರಶ್ನೆಗಳನ್ನು ಮೋದಿಯವರಿಗೆ ಕೇಳಿ ಉತ್ತರ ಪಡೆದುಕೊಳ್ಳಬಹುದು. ಈ ಭಾರಿ ಒಟ್ಟು 2050 ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಸಂವಾದದಲ್ಲಿ ಭಾಗವಹಿಸಲು ಅರ್ಹತೆ ಪಡೆಯಲಿದ್ದಾರೆ.

ಪರೀಕ್ಷಾ ಪೇ ಚರ್ಚಾ 2022 ಉಡುಗೊರೆ :
ಪರೀಕ್ಷಾ ಪೇ ಚರ್ಚಾ2022ರಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಿಗೆ ಪರೀಕ್ಷಾ ಪೇ ಚರ್ಚಾ 2022ರ ನೆನಪಿನ ಉಡುಗೊರೆಗಳನ್ನು ಕೂಡ ನೀಡಲಾಗುತ್ತದೆ.

ಪರೀಕ್ಷಾ ಪೇ ಚರ್ಚಾ 2022ರಲ್ಲಿ ಭಾಗವಹಿಸಲು ಅರ್ಹತೆಗಳೇನು ?:
ಬೋರ್ಡ್ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಒಂಭತ್ತನೇ ತರಗತಿ ವಿದ್ಯಾರ್ಥಿಗಳಿಂದ ಹಿಡಿದು ದ್ವಿತೀಯ ಪಿಯುಸಿ ವರೆಗೆ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು. ವಿದ್ಯಾರ್ಥಿಗಳಿಗೆ ಮಹತ್ತರ ಘಟ್ಟಗಳಾದ ಬೋರ್ಡ್ ಪರೀಕ್ಷೆಗಳಲ್ಲಿ ಎದುರಾಗುವ ಗೊಂದಲ ಮತ್ತು ಆತಂಕಗಳ ಬಗೆಗೆ ಚರ್ಚಿಸುವ ಈ ಸುವರ್ಣಾವಕಾಶವನ್ನು ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳಬಹುದು.

ಪರೀಕ್ಷಾ ಪೇ ಚರ್ಚಾ 2022 ಆಯ್ಕೆ ಪ್ರಕ್ರಿಯೆ :
'ಪರೀಕ್ಷಾ ಪೇ ಚರ್ಚಾ'ಗೆ ಪ್ರವೇಶವು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರಿಗೆ ಆನ್ಲೈನ್ ಮೂಲಕ ಆಧರಿಸಿರುತ್ತದೆ. ಆನ್ಲೈನ್ ನಲ್ಲಿ ಕೇಳಲಾಗಿರುವ ವಿಷಯದ ಕುರಿತು ಉತ್ತರಿಸಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರಧಾನಿ ಮೋದಿಯವರೊಂದಿಗೆ ಸಂವಾದದಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆಯುತ್ತದೆ. ಆಯ್ಕೆಗೊಂಡ ಅಭ್ಯರ್ಥಿಗಳು ಫೆಬ್ರವರಿ ತಿಂಗಳಿನಲ್ಲಿ ನಡೆಯುವ ಸಂವಾದದಲ್ಲಿ ಭಾಗವಹಿಸಬಹುದು.

ಪರೀಕ್ಷಾ ಪೇ ಚರ್ಚಾ 2022ರ ವಿಷಯಗಳು :
ಪರೀಕ್ಷಾ ಪೇ ಚರ್ಚಾ 2022ರ ಥೀಮ್ ಗಳು ಹೀಗಿವೆ :
ಕೋವಿಡ್-19 ಸಮಯದಲ್ಲಿ ಪರೀಕ್ಷಾ ಒತ್ತಡ ನಿರ್ವಹಣೆ ತಂತ್ರಗಳು, ಆಜಾದಿ ಕಾ ಅಮೃತ್ ಮಹೋಸ್ತವ್, ಸ್ವಾವಲಂಬಿ ಭಾರತಕ್ಕಾಗಿ ಸ್ವಾವಲಂಬಿ ಶಾಲೆ, ಸ್ವಚ್ಛ ಭಾರತ, ಹಸಿರು ಭಾರತ, ತರಗತಿಗಳಲ್ಲಿ ಡಿಜಿಟಲ್ ಸಹಯೋಗ, ಮತ್ತು ಪರಿಸರ ಸಂರಕ್ಷಣೆ ಮತ್ತು ಹವಾಮಾನ ಬದಲಾವಣೆಯ ಸ್ಥಿತಿಸ್ಥಾಪಕತ್ವ.

ಪರೀಕ್ಷಾ ಪೇ ಚರ್ಚಾ 2022 ರಿಜಿಸ್ಟರ್ ಮಾಡುವುದು ಹೇಗೆ :
ಸ್ಟೆಪ್ 1 : ವಿದ್ಯಾರ್ಥಿಯು ಅಧಿಕೃತ ವೆಬ್ಸೈಟ್ https://www.mygov.in/ ಗೆ ಭೇಟಿ ನೀಡಿ
ಸ್ಟೆಪ್ 2: ಹೋಂ ಪೇಜ್ ನಲ್ಲಿ ಲಭ್ಯವಿರುವ ಪರೀಕ್ಷಾ ಪೇ ಚರ್ಚಾ 2022 ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ಅಭ್ಯರ್ಥಿಗಳು 'Participate Now' ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 4: ಅಲ್ಲಿ ಕೇಳಲಾಗಿರುವ ವಿಷಯಗಳ ಕುರಿತು ನಿಮ್ಮ ಪ್ರತಿಕ್ರಿಯೆಯನ್ನು ನೀಡಿ
ಸ್ಟೆಪ್ 5: ನಂತರ ವಿದ್ಯಾರ್ಥಿಗಳು ಏನಾದರು ಪ್ರಶ್ನೆಗಳನ್ನು ಕೇಳುವುದಿದ್ದಲ್ಲಿ 500 ಪದಗಳಿಗೆ ಮೀರದಂತೆ ಬರೆದು ಸಬ್ಮಿಟ್ ಮಾಡುವ ಮೂಲಕ ಜನವರಿ 20,2022ರೊಳಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು.
Mygov.in ನಲ್ಲಿ ತಿಳಿದುಬಂದಿರುವ ಮಾಹಿತಿಯ ಪ್ರಕಾರ ಈ ವರೆಗೂ ಪರೀಕ್ಷಾ ಪೇ ಚರ್ಚಾ 2022 ಗೆ 5.97 ಲಕ್ಷ ವಿದ್ಯಾರ್ಥಿಗಳು, 1.38 ಲಕ್ಷ ಶಿಕ್ಷಕರು ಮತ್ತು 38.59 ಸಾವಿರ ಪೋಷಕರು ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ.