79 ವರ್ಷದ ಬಳಿಕೆ ಎಂ.ಎ ಪದವಿ ಪಡೆದ 97 ರ ರಾಜ್ ಕುಮಾರ್ ವೈಶ್ಯ

97ನೇ ವಯಸ್ಸಿನಲ್ಲಿ ಸ್ನಾತಕೋತ್ತರ ಪದವಿ ಪಡೆದು ದೇಶದ ಗಮನ ಸೆಳೆದಿದ್ದಾರೆ ಉತ್ತರ ಪ್ರದೇಶದ ರಾಜ್‌ ಕುಮಾರ್‌ ವೈಶ್ಯ. ಕಲಿಕೆಗೆ ವಯಸ್ಸಿಲ್ಲ ಎಂಬುದನ್ನು ಸಾಧಿಸಿರುವ ಇವರು ಪದವಿ ಮುಗಿದರೆ ಸಾಕು ಎನ್ನುವ ಇಂದಿನ ಯುವಸಮೂಹಕ್ಕೆ ಹೊಸ ಪಾಠ ಕಲಿಸಿದ್ದಾರೆ.

 

ರಾಜ್ ಕುಮಾರ್ ವೈಶ್ಯ ಕಳೆದ ಜೂನ್ ತಿಂಗಳಿನಲ್ಲಿ ಪರೀಕ್ಷೆ ಬರೆದಿದ್ದರು. ಅಷ್ಟು ವಯಸ್ಸಾಗಿದ್ದರೂ ಯಾವುದೇ ವಿಶೇಷ ಸೌಕರ್ಯ ಪಡೆಯದೆ, ಇತರೆ ವಿದ್ಯಾರ್ಥಿಗಳಂತೆ ಪರೀಕ್ಷಾ ಕೊಠಡಿಗೆ ಬಂದು ಪರೀಕ್ಷೆ ಬರೆದಿದ್ದ ಈ ಹಿರಿಯರು ನಳಂದಾ ಮುಕ್ತ ವಿಶ್ವವಿದ್ಯಾಲಯದಿಂದ ಎಂಎ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ.

ಎಂ.ಎ ಪದವಿ ಪಡೆದ 97 ರ ರಾಜ್ ಕುಮಾರ್ ವೈಶ್ಯ
1938ನೇ ಇಸವಿಯಲ್ಲಿ ಪದವಿ ಶಿಕ್ಷಣ ಮುಗಿಸಿದ ವೈಶ್ಯ ತಮ್ಮ ಅರ್ಥಶಾಸ್ತ್ರದಲ್ಲಿನ ಸ್ನಾತಕೋತ್ತರ ಪದವಿಯನ್ನು ನಳಂದಾ ಮುಕ್ತ ವಿಶ್ವವಿದ್ಯಾಲಯದಲ್ಲಿ ಮಾಡಿದ್ದಾರೆ.

ಇಂಗ್ಲಿಷ್ ಭಾಷೆಯಲ್ಲಿ ಪರೀಕ್ಷೆ ಬರೆದಿದ್ದ ವೈಶ್ಯ ಸುಮಾರು 12 ಹಾಳೆಗಳನ್ನು ಬಳಸಿದ್ದರು. ಸ್ನಾತಕೋತ್ತರ ಪದವಿಗೆ ಅರ್ಜಿ ಸಲ್ಲಿಸಿದ ಅತ್ಯಂತ ಹಿರಿಯ ವ್ಯಕ್ತಿ ಎಂದು ವೈಶ್ಯ ಅವರು ಕಳೆದ ವರ್ಷ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದಿದ್ದರು.

 

ಅರ್ಥಶಾಸ್ತ್ರ(ಭಾಗ 2) ವಿಷಯದಲ್ಲಿ ಎಂಎ ಅಂತಿಮ ವರ್ಷದ ಪರೀಕ್ಷೆಯ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, ರಾಜ್‌ ಕುಮಾರ್‌ ಉತ್ತೀರ್ಣರಾಗಿದ್ದಾರೆ.

ತಮ್ಮ ಸೊಸೆ ಭಾರತಿ ಅವರ ಮಾರ್ಗದರ್ಶನದಲ್ಲಿ ಎಂ.ಎ ಪದವಿ ಗಳಿಸಿರುವುದಾಗಿ ಹೆಮ್ಮೆಯಿಂದ ಹೇಳಿಕೊಳ್ಳುವ ರಾಜ್ ಕುಮಾರ್ ವೈಶ್ಯ ಅವರು ಸಾಮಾಜಿಕ-ಆರ್ಥಿಕ ವಿಚಾರಗಳ ಕುರಿತು ಲೇಖನ ಬರೆಯಲು ಉತ್ಸುಕರಾಗಿದ್ದಾರೆ. ಬಡತನ ಹಾಗೂ ನಿರುದ್ಯೋಗ ವಿಷಯಗಳಿಗೆ ಸಂಬಂಧಿಸಿದಂತೆ ಹೆಚ್ಚು ಆಸಕ್ತಿ ವಹಿಸಿರುವುದಾಗಿ ಅವರು ತಿಳಿಸಿದ್ದಾರೆ.

ಈ ಇಳಿ ವಯಸ್ಸಿನಲ್ಲಿ ಇವರ ಸಾಧನೆಗೆ ನಳಂದಾ ವಿಶ್ವವಿದ್ಯಾಲಯ ಸಂತಸ ವ್ಯಕ್ತ ಪಡಿಸಿದೆ. ವಿಶ್ವವಿದ್ಯಾಲಯದಲ್ಲೇ ಇದೊಂದು ವಿಶೇಷ ಹಾಗೂ ಸಂಭ್ರಮದ ದಿನ ಎಂದು ವಿವಿಯ ಉಪಕುಲಪತಿ ಎಸ್.ಪಿ.ಸಿನ್ಹಾ ಹೇಳಿದ್ದಾರೆ.

For Quick Alerts
ALLOW NOTIFICATIONS  
For Daily Alerts

English summary
Raj Kumar Vaishya of Bareilly (Uttar Pradesh) who at the ripe old age of 97 years has passed the MA (Economics) Part II (Final year) exams from the Nalanda Open University.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X