Pariksha Pe Charcha 2022 Registration : ಅರ್ಜಿ ಸಲ್ಲಿಕೆ ಅವಧಿ ಫೆ.3ರ ವರೆಗೆ ವಿಸ್ತರಣೆ

2022ನೇ ಸಾಲಿನ ಐದನೇ ಆವೃತ್ತಿಯ ಪರೀಕ್ಷಾ ಪೇ ಚರ್ಚಾ 2022 ಮಾತುಕತೆಗೆ ಭಾಗವಹಿಸಲು ಅರ್ಜಿ ಸಲ್ಲಿಕೆಯ ಅವಧಿಯನ್ನು ಫೆಬ್ರವರಿ 3,2022ರ ವರೆಗೆ ವಿಸ್ತರಿಸಲಾಗಿದೆ.

 
ಪರೀಕ್ಷಾ ಪೇ ಚರ್ಚಾ 2022 : ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ನಡೆಸಲಾಗುವ ಪರೀಕ್ಷಾ ಪೇ ಚರ್ಚಾ ದಲ್ಲಿ ವಿದ್ಯಾರ್ಥಿಗಳು ಪರೀಕ್ಷೆಯ ಬಗೆಗೆ ಇರುವ ಒತ್ತಡ ಮತ್ತು ಆತಂಕವನ್ನು ದೂರ ಮಾಡಿಕೊಳ್ಳುವ ಕುರಿತು ಸಂವಾದ ನಡೆಸಬಹುದು. ಈ ಸಂವಾದದಲ್ಲಿ ಭಾಗವಹಿಸಲು ಡಿಸೆಂಬರ್ 28 ರಿಂದ ಜನವರಿ 20,2022ರ ವರೆಗೆ ನೊಂದಣಿ ಮಾಡಲು ಅವಕಾಶ ನೀಡಲಾಗಿತ್ತು. ಆದರೆ ಅರ್ಜಿ ಸಲ್ಲಿಕೆಯ ಅವಧಿಯನ್ನು ಜನವರಿ 27,2022ರ ವರೆಗೆ ವಿಸ್ತರಿಸಲಾಗಿತ್ತು. ಇದೀಗ ಮತ್ತೊಮ್ಮೆ ಅರ್ಜಿ ಸಲ್ಲಿಕೆಯ ಅವಧಿಯನ್ನು ಫೆಬ್ರವರಿ 3,2022ರ ವರೆಗೆ ವಿಸ್ತರಿಸಲಾಗಿದೆ. ಆಸಕ್ತರು ಇದೀಗ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು.

ಪರೀಕ್ಷಾ ಪೇ ಚರ್ಚಾ 2022 :

ಪರೀಕ್ಷಾ ಪೇ ಚರ್ಚಾ 2022 :

ಪ್ರಧಾನಿ ನರೇಂದ್ರ ಮೋದಿ ಯೊಂದಿಗಿನ ಐದನೇ ಆವೃತ್ತಿಯ 'ಪರೀಕ್ಷಾ ಪೇ ಚರ್ಚಾ' ಕಾರ್ಯಕ್ರಮ ಇದಾಗಿದ್ದು, ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಭಾಗವಹಿಸಬಹುದು. ಈ ಸಂವಾದವು ಪರೀಕ್ಷೆಯ ಬಗೆಗೆ ಇರುವ ಗೊಂದಲ ಮತ್ತು ಆತಂಕಗಳನ್ನು ದೂರ ಮಾಡುವ ಸಲುವಾಗಿ ಈ ಕಾರ್ಯಕ್ರಮವನ್ನು ನಡೆಸಲಾಗುವುದು. ನೀವು ನಿಮ್ಮ ಪ್ರಶ್ನೆಗಳನ್ನು ಮೋದಿಯವರಿಗೆ ಕೇಳಿ ಉತ್ತರ ಪಡೆದುಕೊಳ್ಳಬಹುದು. ಈ ಭಾರಿ ಒಟ್ಟು 2050 ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಸಂವಾದದಲ್ಲಿ ಭಾಗವಹಿಸಲು ಅರ್ಹತೆ ಪಡೆಯಲಿದ್ದಾರೆ.

ಪರೀಕ್ಷಾ ಪೇ ಚರ್ಚಾ 2022ರಲ್ಲಿ ಭಾಗವಹಿಸಲು ಅರ್ಹತೆಗಳೇನು ?:

ಪರೀಕ್ಷಾ ಪೇ ಚರ್ಚಾ 2022ರಲ್ಲಿ ಭಾಗವಹಿಸಲು ಅರ್ಹತೆಗಳೇನು ?:

ಬೋರ್ಡ್ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಒಂಭತ್ತನೇ ತರಗತಿ ವಿದ್ಯಾರ್ಥಿಗಳಿಂದ ಹಿಡಿದು ದ್ವಿತೀಯ ಪಿಯುಸಿ ವರೆಗೆ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು. ವಿದ್ಯಾರ್ಥಿಗಳಿಗೆ ಮಹತ್ತರ ಘಟ್ಟಗಳಾದ ಬೋರ್ಡ್‌ ಪರೀಕ್ಷೆಗಳಲ್ಲಿ ಎದುರಾಗುವ ಗೊಂದಲ ಮತ್ತು ಆತಂಕಗಳ ಬಗೆಗೆ ಚರ್ಚಿಸುವ ಈ ಸುವರ್ಣಾವಕಾಶವನ್ನು ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳಬಹುದು.

ಪರೀಕ್ಷಾ ಪೇ ಚರ್ಚಾ 2022 ಆಯ್ಕೆ ಪ್ರಕ್ರಿಯೆ :
 

ಪರೀಕ್ಷಾ ಪೇ ಚರ್ಚಾ 2022 ಆಯ್ಕೆ ಪ್ರಕ್ರಿಯೆ :

ಪರೀಕ್ಷಾ ಪೇ ಚರ್ಚಾ'ಗೆ ಪ್ರವೇಶವು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರಿಗೆ ಆನ್‌ಲೈನ್ ಮೂಲಕ ಆಧರಿಸಿರುತ್ತದೆ. ಆನ್‌ಲೈನ್ ನಲ್ಲಿ ಕೇಳಲಾಗಿರುವ ವಿಷಯದ ಕುರಿತು ಉತ್ತರಿಸಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರಧಾನಿ ಮೋದಿಯವರೊಂದಿಗೆ ಸಂವಾದದಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆಯುತ್ತದೆ. ಆಯ್ಕೆಗೊಂಡ ಅಭ್ಯರ್ಥಿಗಳು ಫೆಬ್ರವರಿ ತಿಂಗಳಿನಲ್ಲಿ ನಡೆಯುವ ಸಂವಾದದಲ್ಲಿ ಭಾಗವಹಿಸಬಹುದಾಗಿದ್ದು, ಸಂವಾದದ ದಿನಾಂಕವನ್ನು ಇನ್ನೂ ನಿಗದಿಪಡಿಸಲಾಗಿರುವುದಿಲ್ಲ. ಕಳೆದ ವರ್ಷ ಈ ಕಾಯಕ್ರಮವು ಏಪ್ರಿಲ್ 7 ರಂದು ನಡೆಸಲಾಗಿತ್ತು.

ಪರೀಕ್ಷಾ ಪೇ ಚರ್ಚಾ 2022ರ ಥೀಮ್ ಗಳು ಹೀಗಿವೆ :

ಪರೀಕ್ಷಾ ಪೇ ಚರ್ಚಾ 2022ರ ಥೀಮ್ ಗಳು ಹೀಗಿವೆ :

ಕೋವಿಡ್-19 ಸಮಯದಲ್ಲಿ ಪರೀಕ್ಷಾ ಒತ್ತಡ ನಿರ್ವಹಣೆ ತಂತ್ರಗಳು, ಆಜಾದಿ ಕಾ ಅಮೃತ್ ಮಹೋಸ್ತವ್, ಸ್ವಾವಲಂಬಿ ಭಾರತಕ್ಕಾಗಿ ಸ್ವಾವಲಂಬಿ ಶಾಲೆ, ಸ್ವಚ್ಛ ಭಾರತ, ಹಸಿರು ಭಾರತ, ತರಗತಿಗಳಲ್ಲಿ ಡಿಜಿಟಲ್ ಸಹಯೋಗ, ಮತ್ತು ಪರಿಸರ ಸಂರಕ್ಷಣೆ ಮತ್ತು ಹವಾಮಾನ ಬದಲಾವಣೆಯ ಸ್ಥಿತಿಸ್ಥಾಪಕತ್ವ.

ಪರೀಕ್ಷಾ ಪೇ ಚರ್ಚಾ 2022 ರಿಜಿಸ್ಟರ್ ಮಾಡುವುದು ಹೇಗೆ :

ಪರೀಕ್ಷಾ ಪೇ ಚರ್ಚಾ 2022 ರಿಜಿಸ್ಟರ್ ಮಾಡುವುದು ಹೇಗೆ :

ಸ್ಟೆಪ್ 1 : ವಿದ್ಯಾರ್ಥಿಯು ಅಧಿಕೃತ ವೆಬ್‌ಸೈಟ್‌ https://www.mygov.in/ ಗೆ ಭೇಟಿ ನೀಡಿ
ಸ್ಟೆಪ್ 2: ಹೋಂ ಪೇಜ್ ನಲ್ಲಿ ಲಭ್ಯವಿರುವ ಪರೀಕ್ಷಾ ಪೇ ಚರ್ಚಾ 2022 ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ಅಭ್ಯರ್ಥಿಗಳು 'Participate Now' ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 4: ಅಲ್ಲಿ ಕೇಳಲಾಗಿರುವ ವಿಷಯಗಳ ಕುರಿತು ನಿಮ್ಮ ಪ್ರತಿಕ್ರಿಯೆಯನ್ನು ನೀಡಿ
ಸ್ಟೆಪ್ 5: ನಂತರ ವಿದ್ಯಾರ್ಥಿಗಳು ಏನಾದರು ಪ್ರಶ್ನೆಗಳನ್ನು ಕೇಳುವುದಿದ್ದಲ್ಲಿ 500 ಪದಗಳಿಗೆ ಮೀರದಂತೆ ಬರೆದು ಸಬ್‌ಮಿಟ್ ಮಾಡುವ ಮೂಲಕ ಫೆಬ್ರವರಿ 3,2022ರೊಳಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು.

Mygov.in ನಲ್ಲಿ ತಿಳಿದುಬಂದಿರುವ ಮಾಹಿತಿಯ ಪ್ರಕಾರ ಈ ವರೆಗೂ ಪರೀಕ್ಷಾ ಪೇ ಚರ್ಚಾ 2022 ಗೆ 11.74 ಲಕ್ಷ ವಿದ್ಯಾರ್ಥಿಗಳು, 2.64 ಲಕ್ಷ ಶಿಕ್ಷಕರೂ ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ.

For Quick Alerts
ALLOW NOTIFICATIONS  
For Daily Alerts

English summary
Pariksha pe charcha 2022 : Registration date again extended to February 3, Candidates can apply now.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X