ಈ ಭಾರಿಯ ಪರೀಕ್ಷಾ ಪೇ ಚರ್ಚಾ 2022ಗೆ ನೊಂದಣಿ ಪ್ರಕ್ರಿಯೆಯು ನಾಳೆಯಿಂದ ಪ್ರಾರಂಭವಾಗಲಿದೆ. ಆಸಕ್ತ ವಿದ್ಯಾರ್ಥಿಗಳು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು.

ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ನಡೆಸಲಾಗುವ ಪರೀಕ್ಷಾ ಪೇ ಚರ್ಚಾ ದಲ್ಲಿ ವಿದ್ಯಾರ್ಥಿಗಳು ಪರೀಕ್ಷೆಯ ಬಗೆಗೆ ಇರುವ ಒತ್ತಡ ಮತ್ತು ಆತಂಕವನ್ನು ದೂರ ಮಾಡಿಕೊಳ್ಳುವ ಕುರಿತು ಸಂವಾದ ನಡೆಸಬಹುದು. ಹಾಗಿದ್ರೆ ಇನ್ಯಾಕೆ ತಡ ನಾಳೆಯಿಂದಲೇ ನಿಮ್ಮ ಹೆಸರನ್ನು ರಿಜಿಸ್ಟರ್ ಮಾಡಿಕೊಳ್ಳಿ. ಪರೀಕ್ಷಾ ಪೇ ಚರ್ಚಾ 2022 ಯಾವಾಗ ನಡೆಯುತ್ತೆ? ಮತ್ತು ಇದಕ್ಕೆ ರಿಜಿಸ್ಟರ್ ಮಾಡಿಕೊಳ್ಳುವುದು ಹೇಗೆ ಎನ್ನುವ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಮುಂದೆ ಓದಿ.

ಪರೀಕ್ಷಾ ಪೇ ಚರ್ಚಾ 2022 ಯಾವಾಗ?:
ಪ್ರಧಾನಿ ನರೇಂದ್ರ ಮೋದಿ ಯೊಂದಿಗಿನ ಐದನೇ ಆವೃತ್ತಿಯ 'ಪರೀಕ್ಷಾ ಪೇ ಚರ್ಚಾ' ಕಾರ್ಯಕ್ರಮ ಇದಾಗಿದ್ದು, ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪರೀಕ್ಷೆಯ ಬಗೆಗೆ ಇರುವ ಗೊಂದಲ ಮತ್ತು ಆತಂಕಗಳನ್ನು ದೂರ ಮಾಡುವ ಸಲುವಾಗಿ ಈ ಕಾರ್ಯಕ್ರಮವನ್ನು ನಡೆಸಲಾಗುವುದು. ಪರೀಕ್ಷಾ ಪೇ ಚರ್ಚಾ 2022ರ ದಿನಾಂಕವನ್ನು ಇನ್ನೂ ಪ್ರಕಟಿಸಲಾಗಿಲ್ಲ ಆದರೆ ಈ ಚರ್ಚೆ ಕಾರ್ಯಕ್ರಮವು ಫೆಬ್ರವರಿ ತಿಂಗಳಿನಲ್ಲಿ ನಡೆಸುವ ಸಾಧ್ಯತೆ ಇದೆ.

ಯಾರೆಲ್ಲಾ ರಿಜಿಸ್ಟರ್ ಮಾಡಿಕೊಳ್ಳಬಹುದು? :
ಬೋರ್ಡ್ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಒಂಭತ್ತನೇ ತರಗತಿ ವಿದ್ಯಾರ್ಥಿಗಳಿಂದ ಹಿಡಿದು ದ್ವಿತೀಯ ಪಿಯುಸಿ ವರೆಗೆ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು. ವಿದ್ಯಾರ್ಥಿಗಳಿಗೆ ಮಹತ್ತರ ಘಟ್ಟಗಳಾದ ಬೋರ್ಡ್ ಪರೀಕ್ಷೆಗಳಲ್ಲಿ ಎದುರಾಗುವ ಗೊಂದಲ ಮತ್ತು ಆತಂಕಗಳ ಬಗೆಗೆ ಚರ್ಚಿಸುವ ಈ ಸುವರ್ಣಾವಕಾಶವನ್ನು ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳಬಹುದು.

ಆಯ್ಕೆ ಪ್ರಕ್ರಿಯೆ :
'ಪರೀಕ್ಷಾ ಪೇ ಚರ್ಚಾ'ಗೆ ಪ್ರವೇಶವು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರಿಗೆ ಕೆಲವು ಆನ್ಲೈನ್ ಸ್ಪರ್ಧೆಗಳನ್ನು ಆಧರಿಸಿರುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರಧಾನಿ ಮೋದಿಯವರೊಂದಿಗೆ ಸಂವಾದದಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆಯುತ್ತದೆ. ಆಯ್ಕೆಗೊಂಡ ಅಭ್ಯರ್ಥಿಗಳು ಫೆಬ್ರವರಿ ತಿಂಗಳಿನಲ್ಲಿ ನಡೆಯುವ ಸಂವಾದದಲ್ಲಿ ಭಾಗವಹಿಸಬಹುದು. ಈ ವಿಶೇಷ ವಿಜೇತರು ತಮ್ಮ ಹಸ್ತಾಕ್ಷರದ ಛಾಯಾಚಿತ್ರದ ಡಿಜಿಟಲ್ ಸ್ಮರಣಿಕೆಯನ್ನು ಪಡೆಯುತ್ತಾರೆ. ಅವರಿಗೆ ಭಾಗವಹಿಸುವಿಕೆ ಪ್ರಮಾಣ ಪತ್ರವನ್ನೂ ನೀಡಲಾಗುವುದು.

ರಿಜಿಸ್ಟರ್ ಮಾಡುವುದು ಹೇಗೆ :
ವಿದ್ಯಾರ್ಥಿಯು ಅಧಿಕೃತ ವೆಬ್ಸೈಟ್ https://www.mygov.in/ ಗೆ ಭೇಟಿ ನೀಡಿ ತಮ್ಮ ಹೆಸರನ್ನು ನಮೂದಿಸಿಕೊಳ್ಳುವ ಮೂಲಕ ಜನವರಿ 20,2022ರೊಳಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು.